ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು: ಶುಕ್ರನ ದೆಸೆಯಿಂದ ಹರಿದು ಬರುವುದು ಅಷ್ಟೈಶ್ವರ್ಯ

Shukra Nakshatra Gochara: ಗ್ರಹಗಳ ಸ್ಥಾನದಲ್ಲಿನ ಬದಲಾವಣೆ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಅದರಲ್ಲಿಯೂ ಕೆಲವೊಂದು ಗ್ರಹಗಳು ರಾಶಿ ಅಥವಾ ನಕ್ಷತ್ರ ಬದಲಿಸುವಾಗ ಅದು ವ್ಯಕ್ತಿಯ ಜೀವನದಲ್ಲಿ ಶುಭ ಅಶುಭ ಫಲಗಳಿಗೆ ಕಾರಣವಾಗುತ್ತದೆ.ಶುಕ್ರ ತನ್ನದೇ ಆದ ವೃಷಭ ರಾಶಿಯಲ್ಲಿ ಸಾಗಿ ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದಾನೆ. ಶುಕ್ರನ ಈ ಸಂಚಾರವು ಮೂರು ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ. ಇದು ಸಂಪತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಇನ್ನು ಕೆಲವು ರಾಶಿಯವರ ಮೇಲೆ ಶುಕ್ರ ಸಂಚಾರದ ನಕಾರಾತ್ಮಕ ಪರಿಣಾಮವೂ ಇರುವುದು. ಅವರು ತಮ್ಮ ನಿರ್ಧಾರಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು.

ಅದೃಷ್ಟ ಬದಲಾಯಿಸುವ ಶುಕ್ರ:

ಏಪ್ರಿಲ್ 27 ರಂದು ಶುಕ್ರನು ಚಂದ್ರನ ನಕ್ಷತ್ರವಾದ ರೋಹಿಣಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ನಕ್ಷತ್ರ ಪರಿವರ್ತನೆಯ ಪರಿಣಾಮ ನಿಮ್ಮ ಅದೃಷ್ಟ, ಹಣಕಾಸು ಮತ್ತು ಸಂಬಂಧಗಳ ಮೇಲೆ ಸ್ಪಷ್ಟವಾಗಿ ಗೋಚರಿಸಬಹುದು. ಈ ಸಮಯ ಕೆಲವರಿಗೆ ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ. ಇನ್ನು ಕೆಲವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ವಿಷಾದಿಸುವ ಸ್ಥಿತಿ ಎದುರಾಗಬಹುದು.

Venus Transit

ಶುಕ್ರ ಸಂಚಾರದಿಂದ ಅದೃಷ್ಟ ಪಡೆಯುವ ರಾಶಿಗಳು:

ವೃಷಭ ರಾಶಿ : ಶುಕ್ರನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವ ಮೂಲಕ ವೃಷಭ ರಾಶಿಯವರಿಗೆ ವಿಶೇಷವಾಗಿ ಶುಭಫಲ ಸಿಗುವುದು. ಅನಿರೀಕ್ಷತವಾಗಿ ಹಣ ಒಲಿದು ಬರುವುದು. ನೀವು ಅಂದುಕೊಂಡ ಕೆಲಸ ಸಾಧಿಸುವಿರಿ.ಉದ್ಯಮಿಗಳು ಹೊಸ ವ್ಯವಹಾರ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಬಾಕಿ ಇರುವ ಹಳೆಯ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮನದ ಆಸೆಗಳು ಈಡೇರುವುದು.

ಶನಿ ಉದಯದೊಂದಿಗೆ ಮೂರು ರಾಶಿಯವರ ಭಾಗ್ಯೋದಯ: ಇವರಿಗೆ ಮಾತ್ರ ಎದುರಾಗುವುದು ಕಷ್ಟ, ಸವಾಲುಗಳು
ಶನಿ ಉದಯದೊಂದಿಗೆ ಮೂರು ರಾಶಿಯವರ ಭಾಗ್ಯೋದಯ: ಇವರಿಗೆ ಮಾತ್ರ ಎದುರಾಗುವುದು ಕಷ್ಟ, ಸವಾಲುಗಳು

ಕರ್ಕಾಟಕ ರಾಶಿ: ಶುಕ್ರನ ಸಂಚಾರವು ಕರ್ಕಾಟಕ ರಾಶಿಯವರಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ನಿಮ್ಮ ಮಾತಿನ ಪ್ರಭಾವ ಎದುರಿಗಿರುವವರ ಮೇಲೆ ಅತಿಯಾಗಿ ಬೀರುವುದು. ನಿಮ್ಮ ಮಾತಿನ ಮೂಲಕವೇ ಎದುರಿಗಿರುವವರನ್ನು ಆಕರ್ಷಿಸುವಿರಿ.ಮದುವೆಯಾಗದವರಿಗೆ ವಿವಾಹ ಪ್ರಸ್ತಾಪ ಬರುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಬರಬಹುದು.

ತುಲಾ ರಾಶಿ: ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೊಸ ಹೊಸ ಅವಕಾಶಗಳು ಹುಟ್ಟಿಕೊಳ್ಳುವುದು. ಇದು ನಿಮ್ಮ ವೃತ್ತಿಜೀವನಕ್ಕೆ ಬಹಳ ಸಕಾರಾತ್ಮಕ ಸಮಯ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಹೊಸ ಜವಾಬ್ದಾರಿ ಹೆಗಲೇರುವುದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ವ್ಯಾಪಾರ ವ್ಯವಹಾರ ವಿಸ್ತರಿಸುವ ಬಗ್ಗೆ ಆಲೋಚಿಸಬಹುದು. ವಿವಾಹಕ್ಕೆ ಸಂಬಂಧ ಕೂಡಿ ಬರಬಹುದು.

ಸಣ್ಣ ವಿಷಯಗಳಿಗೂ ಅತಿಯಾಗಿ ಮುನಿಸಿಕೊಳ್ಳುವರು ಈ ರಾಶಿಯವರು:ಕೋಪವೇ ಇವರ ಏಳಿಗೆಗೆ ಆಗುವುದು ಮುಳ್ಳು
ಸಣ್ಣ ವಿಷಯಗಳಿಗೂ ಅತಿಯಾಗಿ ಮುನಿಸಿಕೊಳ್ಳುವರು ಈ ರಾಶಿಯವರು:ಕೋಪವೇ ಇವರ ಏಳಿಗೆಗೆ ಆಗುವುದು ಮುಳ್ಳು

ಎಚ್ಚರಿಕೆಯಿಂದ ಇರಬೇಕು ಈ 2 ರಾಶಿಯವರು:

ಶುಕ್ರನ ನಕ್ಷತ್ರ ಬದಲಾವಣೆಯು ಸಿಂಹ ಮತ್ತು ವೃಶ್ಚಿಕ ರಾಶಿಯವರಿಗೆ ಅಶುಭ ಫಲಗಳನ್ನು ನೀಡುವುದು. ಈ ಎರಡು ರಾಶಿಯವರ ತೊಂದರೆಗಳು ಹೆಚ್ಚುವುದು. ಈ ರಾಶಿಯವರಲ್ಲಿ ಜನಿಸಿದವರು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ನಿರ್ಧಾರವೇ ಅವರಿಗೆ ಮುಳ್ಳಾಗುವುದು. ಒಂದು ನಿರ್ಧಾರದಿಂದಾಗಿ ಗಮನಾರ್ಹ ನಷ್ಟವನ್ನು ಎದುರಿಸಬೇಕಾಗಬಹುದು. ಸಂಬಂಧಗಳು ಹದಗೆಡಬಹುದು. ಆರ್ಥಿಕ ಸಂಕಷ್ಟ ಎದುರಾಗುವುದು.

ಶುಕ್ರನ ನಕ್ಷತ್ರ ಬದಲಾವಣೆಯಿಂದ ಎದುರಾಗುವ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಬಿಳಿ ವಸ್ತುಗಳನ್ನು ದಾನ ಮಾಡಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+