ಮಂಗಳೂರಿನಲ್ಲಿ ಕೇರಳದ ಪ್ರೇಮಿಗಳು ಆತ್ಮಹತ್ಯೆ
ಮಂಗಳೂರು, ಮಾರ್ಚ್ 14 : ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಕೇರಳದ ಕೊಚ್ಚಿಯ ನಿವಾಸಿಗಳಾದ ಮ್ಯಾಥ್ಯೂ ಮತ್ತು ಮಂಜುಳಾ ಎಂದು ಗುರುತಿಸಲಾಗಿದೆ. ಈ ಜೋಡಿ ಸುಮಾರು ಒಂದು ತಿಂಗಳಿನಿಂದ ಶಕ್ತಿನಗರ ಸಮೀಪದಲ್ಲಿರುವ ದತ್ತನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. [ಚಪ್ಲಿ ಸ್ಟಾಂಡ್ ನಲ್ಲಿತ್ತು 13 ಅಡಿ ಉದ್ದದ ಕಾಳಿಂಗ]

ಎರಡು ದಿನಗಳಿಂದ ಇಬ್ಬರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಅಕ್ಕ-ಪಕ್ಕದ ಮನೆಯವರು ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದರು. ಸೋಮವಾರ ಬೆಳಗ್ಗೆ ಮನೆಯ ಮಾಲೀಕರು ಬೀಗ ತೆರೆದು ನೋಡಿದಾಗ ರೂಂ ನಲ್ಲಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]
ಮೃತಪಟ್ಟ ಮ್ಯಾಥ್ಯೂ ಶ್ರೀದೇವಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ನರ್ಸಿಂಗ್ ಕೋರ್ಸ್ ಮುಗಿಸಿದ್ದ ಮಂಜುಳಾಗೆ ಮಂಗಳಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸದ ಆಫರ್ ಸಿಕ್ಕಿತ್ತು ಎಂದು ತಿಳಿದುಬಂದಿದೆ.
ಈ ಜೋಡಿಯ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications