ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇತ್ರಾವತಿ ನದಿಗಾಗಿ ದಕ್ಷಿಣ ಕನ್ನಡ ಸಂಪೂರ್ಣ ಬಂದ್

By Mahesh
|
Google Oneindia Kannada News

ಪುತ್ತೂರು, ಮಾ.3: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ತಿರುವು, ಎತ್ತಿನ ಹೊಳೆ ಯೋಜನೆಯ ವಿರುದ್ಧ ಕರಾವಳಿ ಜೀವನದಿ ಸಂರಕ್ಷಣಾ ಸಮಿತಿ, ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮಾ.3 ರಂದು ಕರೆ ನೀಡಿರುವ ಜಿಲ್ಲಾ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗಿನಿಂದಲೇ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ನಲ್ಲಿ ಭಾಗವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಹಾಗೂ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ. ಶಾಲಾ, ಕಾಲೇಜುಗಳು ,ಅಂಗಡಿ ಮುಂಗಟ್ಟುಗಳು ಮುಚ್ಚಿವೆ.

ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಓಡಾಟವೂ ಮಧ್ಯಾಹ್ನದ ವೇಳೆಗೆ ಕ್ಷೀಣಿಸಿದೆ.ಮಂಗಳೂರು ವಿವಿ ವ್ಯಾಪ್ತಿ ಕಾಲೇಜು ಶಿಕ್ಷಕರ ಸಂಘ(ಅಮುಕ್ತ್), ರಿಕ್ಷಾ ಸಂಘಟನೆಗಳ ಸಹಿತ ಅನೇಕ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಬಂದ್‌ಗೆ ಬೆಂಬಲವಾಗಿ ಶಾಲಾ- ಕಾಲೇಜುಗಳಿಗೆ ರಜೆ ಸಾರಿವೆ.

ಖಾಸಗಿ ಬಸ್ ಸ್ಥಗಿತಗೊಳಿಸುವು ದಾಗಿ ಬಸ್ ಮಾಲಕರು ಹೇಳಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಚಿಸಿಲ್ಲ. ಕೆಎಸ್ಸಾರ್ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

Yettinahole project : Bandh total in Dakshina Kannada

ಕರಾವಳಿ ಜೀವನದಿ -ನೇತ್ರಾವತಿ ರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. 'ಹಾಲು, ಪತ್ರಿಕೆ, ವೈದ್ಯಕೀಯ ಸೇವೆಗೆ ಯಾವುದೇ ಅಗತ್ಯ ಸೇವೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ' ಇದು ಸಂಘಟನೆ ಕರೆದಿರುವ ಬಂದ್ ಅಲ್ಲ ಜನರೇ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿರುವ ಬಂದ್ ಎಂದು ಶೆಟ್ಟಿ ಹೇಳಿದ್ದಾರೆ.

ನೇತ್ರಾವತಿ ಹಾಗೂ ಅದರ ಉಪನದಿಗಳಿಂದ ಸುಮಾರು 24 ಟಿಎಂಸಿ ಅಡಿ ನೀರನ್ನು ಬಯಲುಸೀಮೆಗಳಿಗೆ ಒದಗಿಸಲು ಎತ್ತಿನಹೊಳೆ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆ ಹಾಕಿಕೊಂಡಿದ್ದು ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದೆ.

ಸಿಬಿಎಸ್ ಇ ಪರೀಕ್ಷೆ: ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸಿಬಿಎಸ್ ಇ ಪರೀಕ್ಷೆಗಳು ಸೋಮವಾರ ಆರಂಭಗೊಂಡಿದ್ದು, ಸುರತ್ಕಲ್ ಕಡೆಯಿಂದ ಬರುವ ಪೋಷಕರು ವಿದ್ಯಾರ್ಥಿಗಳು ಸುತ್ತಿ ಬಳಸಿ ಪರೀಕ್ಷಾ ಕೇಂದ್ರ ತಲುಪಿದ್ದಾರೆ.

ಮಂಗಳೂರಿನ ನವಭಾರತ್ ಸರ್ಕಲ್ , ಪಂಪ್ ವೆಲ್, ಊರ್ವ ಮಾರುಕಟ್ಟೆ,ಹಂಪನಕಟ್ಟೆ ಮುಂತಾದೆಡೆ ಟೈರ್ ಸುಟ್ಟ ಪ್ರಕರಣಗಳನ್ನು ಹೊರತುಪಡಿಸಿದರೆ ಬಂದ್ ಶಾಂತಿಯುತವಾಗಿದೆ.

Kanara Chamber of Commerce and Industry (KCCI) ಅಧ್ಯಕ್ಷರಾದ ಮಹಮ್ಮದ್ ಅಮೀನ್ ಅವರು ಸಿದ್ದರಾಮಯ್ಯ ಅವರ ಕ್ರಮವನ್ನು ಖಂಡಿಸಿದ್ದು, ಏಕಪಕ್ಷೀಯ ನಿರ್ಣಯವಾಗಿದೆ. ದಕ್ಷಿಣ ಕನ್ನಡದ ಕೈಗಾರಿಕಾ ಸಂಘಟನೆಗಳು ಒಕ್ಕೊರಲಿನಿಂದ ವಿರೋಧಿಸುತ್ತವೆ ಎಂದಿದ್ದಾರೆ.

English summary
The bandh called in Dakshina Kannada to protest against the Yettinahole project on Monday(Mar.3) was total in Mangalore and all the taluk headquarters. KCCI president Mohammed Ameen said Chief Minister Siddaramaiah should immediately intervene and stop the programme to lay the foundation stone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X