ಮಂಗಳೂರಲ್ಲಿ ಕ್ರಿಸ್ಮಸ್ ಶಾಪಿಂಗ್, ಕುಸ್ವಾರ್ ತಯಾರಿಕೆ ಜೋರು

ಮಂಗಳೂರು, ಡಿಸೆಂಬರ್ 24 : ಮಂಗಳೂರಿನಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಮಂಗಳೂರಿನ ಬೀದಿ ಬೀದಿಗಳಲ್ಲಿ ಕ್ರಿಸ್ ಮಸ್ ಶಾಪಿಂಗ್ ಜೋರಾಗಿದೆ.

ಇನ್ನು ಕ್ರಿಸ್ ಮಸ್ ಸಂದರ್ಭದಲ್ಲಿ ಕರಾವಳಿ ಕ್ರೈಸ್ತರ ಕುಸ್ವಾರ್ ಬಲು ಪ್ರಸಿದ್ಧಿ ಪಡೆದಿದೆ. ಕುಸ್ವಾರ್ ಎಂದಾಕ್ಷಣ ಮೊದಲಿಗೆ ನೆನೆಪಾಗೋದು ಗೋಲಿಯೂ, ಕಿಡಿಯೂ, ಕೂಲ್ ಕೂಲ್, ಗಜ್ಜಿಯಿ, ಅಕ್ಕಿ ಲಾಡು, ಖಾರಕಡ್ಡಿ ಮತ್ತಿತರ ತಿನಿಸುಗಳು . ಈ ಖಾದ್ಯಗಳ ಹೆಸರೇ ಬಾಯಲ್ಲಿ ನೀರು ಬರಿಸುತ್ತವೆ.

ಕರಾವಳಿಯ ಕ್ರೈಸ್ತರು ಹೆಚ್ಚಾಗಿ ಮನೆಯಲ್ಲೇ ಕುಸ್ವಾರ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಡಿಸೆಂಬರ್ ಮೊದಲ ವಾರದಿಂದಲೇ ಕುಸ್ವಾರ್ ತಯಾರಿಕೆ ಅರಂಭವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇಕರಿಯ ಕುಸ್ವಾರ್ ಖಾದ್ಯದ ಖರೀದಿ ಜೋರಾಗಿಯೇ ನಡೆಯುತ್ತಿದೆ. ಇಲ್ಲಿ ಕೇಕ್ ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ, ಕುಸ್ವಾರ್ ಗಳಿಗಂತೂ ಬೇಡಿಕೆ ಇದ್ದೇ ಇದೆ.

Very famous Kuswar of Christmas eve

ಕರಾವಳಿಯ ಕ್ಯಾಥೊಲಿಕ್ ಬಂಧುಗಳು ಕುಸ್ವಾರ್ ಇಲ್ಲದೆ ಕ್ರಿಸ್ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ ವಿದೇಶ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಮನೆ ತಲುಪುತ್ತವೆ. ನಂತರ ಡಿಸೆಂಬರ್ ದಾಟುತ್ತಿದಂತೆ ಕುಸ್ವಾರ್ ತಯಾರಿಯಲ್ಲಿ ತೊಡಗುತ್ತಾರೆ.

Very famous Kuswar of Christmas eve

ಕುಸ್ವಾರ್ ಮೂಲತಃ ಗೋವಾ ರಾಜ್ಯದ್ದು ಎಂದು ಹೇಳಲಾಗುತ್ತದೆ. ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ಧತಿಗಳಲ್ಲಿ ಕುಸ್ವಾರ್ ಒಂದು. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿನ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ಧತಿಗಳನ್ನು ಕರಾವಳಿಯಲ್ಲಿ ಪರಿಚಯಿಸಿದರು ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+