ಪಾಸ್ ಪೋರ್ಟಿಗೆ ಕೊಟ್ಟಿದ್ದ ದಾಖಲೆ ಪೇದೆಯಿಂದ ದುರ್ಬಳಕೆ

ಶಬ್ಬೀರ್ ಉಪ್ಪಿನಂಗಡಿಯಲ್ಲಿದ್ದ ಮೊಬೈಲ್ ಅಂಗಡಿಗೆ ಹೋದಾಗ ಪೇದೆಯ ಕರಾಮತ್ತು ಬೆಳಕಿಗೆ ಬಂದಿದೆ. ಅಲ್ಲೇನಾಗಿತ್ತೆಂದರೆ ಶಬ್ಬೀರ್ ಅವರ ಫೋಟೋ ಮತ್ತು ರೇಶನ್ ಕಾರ್ಡ್ ಅನ್ನು ನೀಡಿ ಬೇರೊಬ್ಬ ವ್ಯಕ್ತಿ ಮೊಬೈಲ್ ಸಿಮ್ ಕಾರ್ಡ್ ಪಡೆದಿರುವ ಅಚಾನಕ್ಕಾಗಿ ಅವರ ಗಣ್ಣಿಗೆ ಬಿದ್ದಿದೆ.
ಅಂಗಡಿಯವನನ್ನು ವಿಚಾರಿಸಲಾಗಿ ಪೇದೆ ಲಕ್ಷ್ಮೀಶ ದಾಖಲೆಗಳನ್ನು ನೀಡಿ, ಸಿಮ್ ಪಡೆದಿರುವುದು ಪತ್ತೆಯಾಗಿದೆ. ಆದರೆ ಶಬ್ಬೀರ್ ಅವರು ಮಂಗಳೂರಿನಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿ, ಅದರ ಜತೆಗೆ ತಮ್ಮ ಫೋಟೋ ಮತ್ತು ರೇಶನ್ ಕಾರ್ಡ್ ದಾಖಲೆಗಳನ್ನು ಲಗತ್ತಿಸಿದ್ದರು. ಅದು ಶಬ್ಬೀರ್ ವಾಸಿಸುವ ಉಪ್ಪಿನಂಗಡಿ ಪೊಲೀಸ್ ಠಾಣೆಗೆ verificationಗೆಂದು ಬಂದಿದೆ.
ಆದರೆ ಪೇದೆ ಲಕ್ಷ್ಮೀಶ ಕ್ರಮಿನಲ್ ಬುದ್ಧಿ ಉಪಯೋಗಿಸಿ, ಶಬ್ಬೀರ್ ಫೋಟೋ ಮತ್ತು ರೇಶನ್ ಕಾರ್ಡ್ ದಾಖಲೆಗಳನ್ನು ಬಳಸಿ, ಸಿಮ್ ಕಾರ್ಡ್ ಪಡೆದಿದ್ದಾನೆ.
ಇದರಿಂದ ಅಸಮಾಧಾನಗೊಂಡ ಶಬ್ಬೀರ್ ಅವರು ಸೀದಾ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅವರನ್ನು ಫೆಬ್ರವರಿ 1 ರಂದು ಭೇಟಿ, ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿ, ಪೇದೆ ಲಕ್ಷ್ಮೀಶನ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಐಜಿಪಿ ಪ್ರತಾಪ್ ರೆಡ್ಡಿ ಭರವಸೆ ನೀಡಿದ್ದಾರೆ.












Click it and Unblock the Notifications