ಪುತ್ತೂರು : ಜ್ಯುವೆಲರ್ಸ್ ಮೇಲೆ ಗುಂಡಿನ ದಾಳಿ
ಮಂಗಳೂರು, ಅಕ್ಟೋಬರ್ 07 : ಬೈಕ್‌ನಲ್ಲಿ ಬಂದ ಅಪರಿಚಿತರು ಪುತ್ತೂರಿನ ಸಿಪಿಸಿ ಪ್ಲಾಜಾದಲ್ಲಿರುವ ರಾಜಧಾನಿ ಜ್ಯುವೆಲರ್ಸ್ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಧಾನಿ ಜ್ಯುವೆಲರ್ಸ್ ಥಾನಾಜ್ ಎಂಬವವರಿಗೆ ಸೇರಿದ್ದಾಗಿದೆ. ಮಂಗಳವಾರ ಸಂಜೆ 7.15ರ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜ್ಯುವೆಲರ್ಸ್ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. [ಪುತ್ತೂರು: ಮಹಿಳೆಯರಿಗೆ ಆಶ್ರಯ ಕಲ್ಪಿಸಿತು ಸ್ವಯಂಸೇವಕ ಸಂಘ]

ಗುಂಡಿನ ದಾಳಿಯಿಂದ ಜ್ಯುವೆಲರ್ಸ್ ಉದ್ಯೋಗಿಗಳು ಮತ್ತು ಸುತ್ತಮುತ್ತಲಿನ ಜನರು ಗಾಬರಿಗೊಂಡರು. 10 ನಿಮಿಷದ ಬಳಿಕ ಪುನಃ ಬಂದ ದುಷ್ಕರ್ಮಿಗಳು ಮತ್ತೆ ಎರಡು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. [ಮಂಗಳೂರು : ಪುತ್ತೂರು ಶೀಘ್ರದಲ್ಲೇ ಸೀಮೆಎಣ್ಣೆ ಮುಕ್ತ ನಗರ]
ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಜ್ಯುವೆಲರ್ಸ್‌ನ ಗಾಜುಗಳು ಪುಡಿಯಾಗಿವೆ. ಜ್ಯುವೆಲರ್ಸ್ ವೊಳಗೆ 2 ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಸಿಸ್ಟೆಂಟ್ ಸರ್ಕಲ್ ಇನ್ಸ್‌ಪೆಕ್ಟರ್ ಖಾದರ್ ಅವರು ಜ್ಯುವೆಲರ್ಸ್ ವೊಳಗೆ ತಪಾಸಣೆ ನಡೆಸಿದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications