ಬೇಟೆಗೆ ತೆರಳಿದ್ದ ಯುವಕರಿಬ್ಬರು ನಾಪತ್ತೆ, ಮೂಡಬಿದ್ರೆ ಅರಣ್ಯದಲ್ಲಿ ಶೋಧ

ಮಂಗಳೂರು, ಮಾರ್ಚ್ 22: ಬೇಟೆಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡುಬಿದ್ರೆ ನಿವಾಸಿಗಳಾದ ಪ್ರವೀಣ್ ತೌರೋ (33) ಹಾಗೂ ಗ್ರೆಷನ್ (32) ನಾಪತ್ತೆಯಾದವರಾಗಿದ್ದಾರೆ.

ಮೂಡುಬಿದ್ರೆಯಿಂದ 10 ಕಿ.ಮೀ ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ತೆರಳಿದ್ದರು. ಬೇಟೆಗೆಂದು ತೆರಳಿದ್ದ ಈ ಯುವಕರು ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರವೀಣ್ ಹಾಗೂ ಗ್ರೆಷನ್ ಬೇಟೆಗೆ ತೆರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕರಿಂಜೆ ಕಾಡಂಚಿನಲ್ಲಿ ಪತ್ತೆಯಾಗಿದೆ. ಆದರೆ ಕಾಡಿಗೆ ತೆರಳಿದ್ದ ಯುವಕರು ಏನಾದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಯುವಕರ ಮನೆಯವರಲ್ಲಿ ಆತಂಕ ಮೂಡಿದೆ.

Two youth gone missing in Karinja forest near Moodbidri

ಯುವಕರು ನಾಪತ್ತೆಯಾದ ಕುರಿತು ಪ್ರವೀಣ್ ಹಾಗು ಗ್ರೆಷನ್ ಕುಟುಂಬಸ್ಥರು ಸ್ಥಳೀಯ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ನಾಪತ್ತೆಯಾಗಿರುವ ಯುವಕರಿಗಾಗಿ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Two youth gone missing in Karinja forest near Moodbidri

ಖಾಸಗಿ ಟೆಂಪೊ ಚಾಲಕನಾಗಿರುವ ಪ್ರವೀಣ್ ತೌರೋ ಅವಿವಾಹಿತರಾಗಿದ್ದಾರೆ. ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಹೊಂದಿರುವ ಗ್ರೇಷನ್ ವಿವಾಹಿತರಾಗಿದ್ದು, ಓರ್ವ ಪುತ್ರಿ ಇದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+