ಮಂಗಳೂರಿನಲ್ಲಿ ಟಾರ್ಗೆಟ್ ಗ್ಯಾಂಗ್ ಮತ್ತೆ ಸಕ್ರಿಯ:ಕೊಲೆ ಬೆದರಿಕೆ, ಇಬ್ಬರ ಬಂಧನ

ಮಂಗಳೂರು, ಮೇ 06: ನಗರದಲ್ಲಿ ಕುಖ್ಯಾತ ಟಾರ್ಗೆಟ್ ಗ್ಯಾಂಗ್ ಮತ್ತೆ ಸಕ್ರಿಯವಾಗಿದ್ದು, ಉದ್ಯಮಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರ ಹೊರವಲಯದ ಬೆಂಗರೆ ನಿವಾಸಿಗಳಾದ ಮುನ್ನ (35) ಮತ್ತು ಫಾರೂಕ್‌ (38) ಎಂದು ಗುರುತಿಸಲಾಗಿದೆ.

ಬಂಧಿತ ಅರೋಪಿಗಳು ಜಾಗ ಮಾರಾಟದ ಕಮಿಷನ್‌ ಸಂಬಂಧಿಸಿದಂತೆ ಉದ್ಯಮಿಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ನಗರದ ಕಟ್ಟಡ ನಿರ್ಮಾಣ ಯೋಜನೆಗೆ ಉದ್ಯಮಿಯೊಬ್ಬರು ಜಾಗ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಬ್ರೋಕರ್ ಹ್ಯಾರಿಸ್‌ ಎಂಬಾತನಿಗೆ ಈ ಕುರಿತು ತಿಳಿಸಿದ್ದರು . ಅದರಂತೆ ಹ್ಯಾರಿಸ್‌ ಜಾಗವೊಂದನ್ನು ತೋರಿಸಿದ್ದ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಜಾಗದ ಬಗ್ಗೆ ಅಸಮಾಧಾನಗೊಂಡ ಉದ್ಯಮಿ ಆ ಜಾಗ ಖರೀದಿಸುವ ಯೋಜನೆ ಕೈಬಿಟ್ಟಿದ್ದರು.

ಆದರೆ ಕೆಲ ವರ್ಷಗಳ ಬಳಿಕ ಅದೇ ಜಾಗವನ್ನು ಉದ್ಯಮಿಗೆ ಬೇರೊಬ್ಬ ಬ್ರೋಕರ್ ತೋರಿಸಿದ್ದು, ಅವರ ಮುಖೇನ ಜಾಗವನ್ನು ಖರೀದಿಸಿದ್ದರು. ಉದ್ಯಮಿ ಜಾಗ ಖರೀದಿಸಿದ ವಿಷಯ ಬ್ರೋಕರ್ ಹ್ಯಾರಿಸ್‌ಗೆ ಗೊತ್ತಾಗಿ ಉದ್ಯಮಿಯ ಬಳಿ ಜಾಗ ಮೊದಲು ತೋರಿಸಿದ್ದು ನಾನು. ನನಗೆ ಕಮಿಷನ್‌ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದ. ಅದಕ್ಕೆ ಒಪ್ಪದ ಉದ್ಯಮಿ ಕಮಿಷನ್ ನೀಡಲು ನಿರಾಕರಿಸಿದ್ದರು .

Two arrested on charge of threatening businessmen in Mangaluru

ಈ ಹಿನ್ನೆಲೆಯಲ್ಲಿ ಹ್ಯಾರಿಸ್‌ ವಿಷಯವನ್ನು ಬೆಂಗ್ರೆಯ ಫಾರೂಕ್‌ಗೆ ತಿಳಿಸಿದ್ದ. ಹೇಗಾದರೂ ಮಾಡಿ ಉದ್ಯಮಿಯಿಂದ ಕಮಿಷನ್‌ ಪಡೆದುಕೊಳ್ಳಲೇಬೇಕೆಂದು ಇಬ್ಬರೂ ತೀರ್ಮಾನಿಸಿ ಬೆಂಗ್ರೆಯ ಮುನ್ನಾ ಎಂಬಾತನಿಗೆ ವಿಷಯ ತಿಳಿಸಿದ್ದರು. ಮುನ್ನಾ ವಿಷಯವನ್ನು ಟಾರ್ಗೆಟ್‌ ಗ್ಯಾಂಗ್‌ನ ಉಮರ್‌ ಫಾರೂಕ್‌, ತೌಸೀರ್‌, ಸಮೀರ್‌ಗೆ ತಿಳಿಸಿದ್ದರು. ಈ ಮೂಲಕ ಟಾರ್ಗೆಟ್‌ ಗ್ರೂಪ್‌ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿತ್ತು.

ಬಳಿಕ ಆರೋಪಿಗಳು ಉದ್ಯಮಿಗೆ ಕೊಲೆ ಬೆದರಿಕೆಯೊಡ್ಡಿ ಕಾರಿಗೆ ಕಲ್ಲೆಸೆದು ಹಾನಿ ಮಾಡಿದ್ದರು. ಈ ಘಟನೆಯಿಂದ ಆತಂಕಗೊಂಡ ಉದ್ಯಮಿ ನಗರದ ಕದ್ರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಮುನ್ನ ಮತ್ತು ಫಾರೂಕ್‌ ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+