ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್: 'ತುಳುವ ನಡಕೆ'ಯಲ್ಲಿ ಬಂಟರ ಸಂಘ ಪ್ರಥಮ

|
Google Oneindia Kannada News

ಸುರತ್ಕಲ್, ನ.4 : ಬಂಟರ ಯಾನೆ ನಾಡವರ ಸಂಘ ಪಡುಬಿದ್ರೆ ಅವರ ಆಶ್ರಯದಲ್ಲಿ ಪಡುಬಿದ್ರೆ ಬಂಟರ ಭವನದಲ್ಲಿ ನಡೆದ ರಾಷ್ಟ್ರಮಟ್ಟದ 'ತುಳುವ ನಡಕೆ' ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ ಪ್ರಥಮ ಬಹುಮಾನ ಪಡೆದುಕೊಂಡಿದೆ.

ತುಳುವ ನಡಕೆಯಲ್ಲಿ ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ ಮತ್ತು ಭಾವೈಕ್ಯ ಪ್ರದರ್ಶಿಸುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಸುರತ್ಕಲ್ ಸಂಘ ಪಾತ್ರವಾಯಿತು.

ತುಳುವ ನಡಕೆಯಲ್ಲಿ ಪರಶುರಾಮ ಸೃಷ್ಟಿ , ನಾಗಾರಾಧನೆ, ಜನಜೀವನ, ಕೃಷಿ ಚಟುವಟಿಕೆ. ತುಳುನಾಡ ಸಂಸ್ಕೃತಿ, ಸೀಮಂತ ಆಚರಣೆ, ಯಕ್ಷಗಾನ, ದೈವಾರಾಧನೆ, ತುಳು ನಾಡಿನ ವೀರ ಪುರುಷರು, ಉತ್ತರಕ್ರಿಯೆ ಮೊದಲಾದ ವಿಚಾರಗಳನ್ನು ಅಳವಡಿಸಲಾಗಿತ್ತು. ತೆನೆ ಕಟ್ಟುವುದು, ಬಲೀಂದ್ರ ಪೂಜೆ, ತುಡರ್, ಗೋಪೂಜೆ, ಕೊಜಂಬು ಮುಂತಾದ ಆಚರಣೆಗಳ ಪದ್ಧತಿ ಪ್ರಚುರಪಡಿಸಲಾಯಿತು.[ಮಂಗಳೂರುː ಬೆಳಕಿನ ಹಬ್ಬಕ್ಕೆ ಆಕಾಶಬುಟ್ಟಿ ರಂಗು]

ನವೀನ್ ಶೆಟ್ಟಿ ಅಳಕೆಯವರ ಸಾಹಿತ್ಯ, ಮತ್ತು ನಿರ್ದೇಶನದಲ್ಲಿ ಮೂಡಿ ಬಂದ 'ತುಳುವ ನಡಕೆ'ಯಲ್ಲಿ ಸುಮಾರು 102 ಮಂದಿ ಕಲಾವಿದರು ಬಣ್ಣ ಹಚ್ಚಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ನೇತೃತ್ವ ವಹಿಸಿದ್ದರು.

ಸಂಗೀತ ನಿರ್ದೇಶಕ ಗುರುಕಿರಣ್, ನಟ ಪ್ರಜ್ವಲ್ ದೇವರಾಜ್, ಸುರೇಶ್ ಶೆಟ್ಟಿ ಬಳ್ಳಾರಿ, ಡಾ.ಆಶಾ ಜ್ಯೋತಿ ರೈ, ಎರ್ಮಾಳ್ ಚಂದ್ರಹಾಸ ಶೆಟ್ಟಿ ಪುಣೆ, ವಿಜಯಕುಮಾರ್ ಕೊಡಿಯಾಲ್ ಬೈಲ್, ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಪ್ರಕಾಶ್ ಶೆಟ್ಟಿ, ಅಶೋಕ್ ಆಳ್ವ, ನಾರಾಯಣ ಶೆಟ್ಟಿ ನಂದಳಿಕೆ, ದಿನೇಶ್ ಅತ್ತಾವರ್, ಡಾ.ವೈ.ಎನ್.ಶೆಟ್ಟಿ ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು, ಗುರುಪುರ ಬಂಟರ ಸಂಘ ದ್ವಿತೀಯ, ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿ ಪಡೆಯಿತು.

ರೈತರ ಜೀವನ ರಂಗದ ಮೇಲೆ

ರೈತರ ಜೀವನ ರಂಗದ ಮೇಲೆ

'ತುಳುವ ನಡಕೆ' ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದವರು ರೈತರ ಜೀವನವನ್ನು ತೆರೆ ಮೇಲೆ ತಂದರು.

ಸೀಮಂತದ ನೈಜ ಚಿತ್ರಣ

ಸೀಮಂತದ ನೈಜ ಚಿತ್ರಣ

ಗ್ರಾಮೀಣ ಸಂಪ್ರದಾಯ ಸಾರುವ ಸೀಮಂತ ಪ್ರದರ್ಶನವಾದ ಬಗೆ.

ವಿಜೇತರಿಗೆ ಪ್ರಶಸ್ತಿ

ವಿಜೇತರಿಗೆ ಪ್ರಶಸ್ತಿ

ಸ್ಪರ್ಧೆಯಲ್ಲಿ ವಿಜೇತರಾದ ಸುರತ್ಕಲ್ ಸಂಘದ ಸದಸ್ಯರೊಂದಿಗೆ ಗಣ್ಯರು.

ಗ್ರಾಮೀಣ ಪರಂಪರೆ

ಗ್ರಾಮೀಣ ಪರಂಪರೆ

ಗ್ರಾಮೀಣ ಹಬ್ಬಗಳನ್ನು ಸಾರುವ ಪ್ರದರ್ಶನ ಗಮನ ಸೆಳೆಯಿತು.

English summary
Surathkal: The Bunts Sangh, Surathkal has bagged the first place in in national level 'tuluva nadike' event. A cultural competition organized by Padubidre bunts association. Kannada music director Gurukiran, Hero Prajval Devraj participated in the programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X