ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ, ನಾಲ್ವರಿಗೆ ಗಾಯ

|
Google Oneindia Kannada News

ಮಂಗಳೂರು ಮೇ 16 : ಚುನಾವಣೆಯ ಮತ ಎಣಿಕೆಯ ಬಳಿಕ ಮಂಗಳೂರಿನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ನಿನ್ನೆ ಭಾರೀ ಜಯದಾಖಲಿದ್ದ ಬಿಜೆಪಿ ವಿಜಯೋತ್ಸವದ ವೇಳೆ ಮಂಗಳೂರು ಹೊರವಲದಲ್ಲಿ ಕಲ್ಲುತೂರಾಟ ನಡೆದಿದೆ.

ಮಂಗಳೂರಿನ ಹೊರವಲಯ ಅಡ್ಯಾರ್‌ನಲ್ಲಿ ಈ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಅಡ್ಯಾರ್ ಪದವು ಬಳಿ ಈ ಘಟನೆ ನಡೆದಿದ್ದು, ಕಿಡಿಗೇಡಿ ಯುವಕರ ತಂಡ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ಹಾಗು ತಲವಾರಿನಿಂದ ದಾಳಿ ಮಾಡಿದ್ದಾರೆ.

ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ

ಘಟನೆಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ‌ಗಂಭೀರ ಗಾಯಗಳಾಗಿವೆ. ಸುಮಾರು 100 ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳ ತಂಡ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

Stone pelting during BJP victory procession

ಘಟನೆಯ ಸಂದರ್ಭ ರಸ್ತೆಬದಿಯ ಮನೆ , ಅಂಗಡಿ , ವಾಹನ ಗಳ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರಸ್ತೆಯಲ್ಲಿ ಸಾಗುವ ವಾಹನಗಳ ಮೇಲೂ ಕಲ್ಲು ತೂರವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ, ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಅಡ್ಯಾರ ಪದವು ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಲ್ಲೂ ತೂರಾಟ ಘಟನೆಯಲ್ಲಿ ಗಂಭೀರ ವಾಗಿ ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ .

Stone pelting during BJP victory procession

ಘಟನೆಯಿಂದ ಗಂಭೀರ ಗಾಯಗೊಂಡ ಆಸ್ಪತ್ರೆ ಗೆ ದಾಖಲಾಗಿರುವ ಕಾರ್ಯಕರ್ತರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದರು.

English summary
Assault and stone pelting incident reported when victory procession near Adyar Padavu. in this incident BJP workers injured .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X