ಡಿಸೆಂಬರ್ 09 ರಿಂದ ಮಂಗಳೂರು-ಮುಂಬೈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ, ಮಾರ್ಗಗಗಳ ವಿವರ ಇಲ್ಲಿದೆ
ಮಂಗಳೂರು, ಡಿಸೆಂಬರ್, 05: ಕೊಂಕಣ ರೈಲ್ವೆಯ ಇತ್ತೀಚಿನ ಅಧಿಸೂಚನೆಯ ಪ್ರಕಾರ ವಿಶೇಷ ರೈಲುಗಳು ಶುಕ್ರವಾರದಿಂದ (ಡಿಸೆಂಬರ್ 09) ಪ್ರಾರಂಭವಾಗುತ್ತವೆ. ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಕೊಂಕಣ ರೈಲ್ವೆಯು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಚಳಿಗಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಈ ನಿರ್ಧಾರವನ್ನು ಕೈಗೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ರೈಲು ಸಂಖ್ಯೆ 01453 / 01454 ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ -ಲೋಕಮಾನ್ಯ ತಿಲಕ್ ವಿಶೇಷ ಸಾಪ್ತಾಹಿಕ ರೈಲು ಡಿಸೆಂಬರ್ 9ರಿಂದ 2023ರ ಜನವರಿ 6ರವರೆಗೆ ಸೇವೆ ಒದಗಿಸಲಿದೆ. ಪ್ರತಿ ಶುಕ್ರವಾರ ಮುಂಬೈ ಲೋಕಮಾನ್ಯ ಟರ್ಮಿನಲ್ನಿಂದ ಹೊರಡುವ ಈ ರೈಲು ಶನಿವಾರ ಸಂಜೆ 5:5 ಕ್ಕೆ ಮಂಗಳೂರನ್ನು ತಲುಪಲಿದೆ. ಎರಡನೇ ರೈಲು ಸಂಖ್ಯೆ 01453 ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಹೊರಡಲಿದ್ದು ಮಂಗಳೂರನ್ನು ಮರುದಿನ ಸಂಜೆ 5:05ಕ್ಕೆ ತಲುಪಲಿದೆ. ಈ ರೈಲು ಡಿಸೆಂಬರ್ 9 ರಿಂದ ಜನವರಿ 6ರವರೆಗೆ ಸೇವೆ ಒದಗಿಸಲಿದೆ.
ಮೂರನೇ ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ ಸಂಜೆ 6.45ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 2:25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣವನ್ನು ತಲುಪಲಿದೆ. ಈ ರೈಲುಗಳು ಒನ್ ಟು ಟಯರ್ ಎಸಿ ಕೋಚ್, ಮೂರು 3 ಟಯರ್ ಎಸಿ ಮತ್ತು 8 ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತವೆ ಎಂದು ತಿಳಿಸಿದೆ.
|
ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಪ್ಲಾನ್
ಕೊಂಕಣ ರೈಲ್ವೆಯ ಅಧಿಕೃತ ಅಧಿಸೂಚನೆಯಲ್ಲಿ 2022ರ ಚಳಿಗಾಲದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಡೆಯಲು ವಿಶೇಷ ರೈಲುಗಳನ್ನು ಕೇಂದ್ರ ರೈಲ್ವೆಯೊಂದಿಗೆ ಸಮನ್ವಯದಿಂದ ಓಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಕೊಂಕಣ ರೈಲ್ವೆ ನಿಲುಗಡೆ ಸೇರಿದಂತೆ ಎರಡು ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೊಂಕಣ ರೈಲ್ವೆಯ ಅಧಿಕೃತ ಸುತ್ತೋಲೆಯ ಪ್ರಕಾರ ರೈಲುಗಳು ಒಂದು ಟು-ಟೈರ್ ಎಸಿ ಕೋಚ್, ಮೂರು 3-ಟೈರ್ ಎಸಿ ಮತ್ತು ಎಂಟು ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ.

ಯಾವ್ಯಾವ ಮಾರ್ಗಗಳಲ್ಲಿ ರೈಲು ಸಂಚಾರ?
ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್. ಸಾವಂತವಾಡಿ ರಸ್ತೆ, ಥಿವಿಂ, ಕರ್ಮಲಿ, ಮಡಗಾಂವ್ ಜೂ., ಕಾರವಾರ, ಗೋಕಾಮ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು ಮೂಕಾಂಬಿಕಾ ರಸ್ತೆ, ಕುಂದಾಪುರ, ಉಡುಪಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ರೈಲು ಹಾದು ಹೋಗಲಿದೆ.

ರೈಲಿನಲ್ಲಿರುವ ಕೋಚ್‌ಗಳ ವಿಶೇಷತೆ ಏನು?
ಒಟ್ಟು 17 ಕೋಚ್‌ಗಳಿದ್ದು, ಎರಡು ಹಂತದ AC-01 ಕೋಚ್, ಮೂರು ಹಂತದ AC-03 ಕೋಚ್‌ಗಳು, ಸ್ಲೀಪರ್-08 ಕೋಚ್‌ಗಳು, ಎರಡನೇ ಸೀಟಿಂಗ್-03 ಕೋಚ್‌ಗಳು, ಎಸ್‌ಎಲ್‌ಆರ್-02 ಕೋಚ್‌ಗಳು ಇರುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ರೈಲು ಸಂಖ್ಯೆ 01455 ಲೋಕಮಾನ್ಯ ತಿಲಕ್ ತಿಲಕ್‌ನಿಂದ 1 ಜನವರಿ 2023, ಭಾನುವಾರದಂದು ರಾತ್ರಿ 10:15ಕ್ಕೆ ಹೊರಡಲಿದೆ. ರೈಲು ಮರುದಿನ ಮಡಗಾಂವ್‌ಗೆ ಬೆಳಗ್ಗೆ 10:30ಕ್ಕೆ ತಲುಪಲಿದೆ. ರೈಲು ಸಂಖ್ಯೆ 01456 ಮಡಗಾಂವ್‌ನಿಂದ ಜನವರಿ 2ರ ಬೆಳಗ್ಗೆ 11:30ಕ್ಕೆ ಹೊರಡಲಿದ್ದು, ರೈಲು ಅದೇ ದಿನ ರಾತ್ರಿ 11:45ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣವನ್ನು ತಲುಪುಲಿದೆ.

ರೈಲು ತಲುಪುವ ಮಾರ್ಗಗಳ ವಿವರ
ಥಾಣೆ, ಪನ್ವೇಲ್, ರೋಹಾ, ಮಂಗಾವ್, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ. ರತ್ನಗಿರಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಕರ್ಮಾಲಿ ನಿಲ್ದಾಣಗಳ ಮೂಲಕ ರೈಲು ಹಾದು ಹೋಗಲಿದೆ.












Click it and Unblock the Notifications