ಮಂಗಳೂರು ಏರ್ಪೋರ್ಟಿನಲ್ಲಿ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
Recommended Video

Mangalore International Airport: 20 Lakhs Worth Foreign Currency Found
ಮಂಗಳೂರು, ಆಗಸ್ಟ್ 31: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಐಜಿ) ಯಶಸ್ವಿಯಾಗಿದೆ.
ಬಂಧಿತನನ್ನು ಕಾಸರಗೋಡು ನಿವಾಸಿ ಅಬ್ದುಲ್ ಬಶೀರ್ ಎಂದು ಗುರುತಿಸಲಾಗಿದೆ.

ದುಬೈಗೆ ತೆರಳಲು ಆಗಮಿಸಿದ ಅಬ್ದುಲ್ ಬಶೀರ್ ಇಮಿಗ್ರೇಶನ್ ಕೌಂಟರಿನಲ್ಲಿ ತಪಾಸಣೆ ಮುಗಿಸಿ ಆ ನಂತರ ಬ್ಯಾಗೇಜ್ ತಪಾಸಣೆ ವೇಳೆ ಈತನ ಬ್ಯಾಗಿನಲ್ಲಿ ವಿದೇಶಿ ಕರೆನ್ಸಿಗಳಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಯುಎಸ್ ಡಾಲರ್ ಹಾಗೂ ಸೌದಿಯಾ ರಿಯಾಲ್ ನಲ್ಲಿ ವಿದೇಶಿ ಕರೆನ್ಸಿಗಳ ಒಟ್ಟು ಮೌಲ್ಯ 20 ಲಕ್ಷ ರೂಪಾಯಿಯಾಗಿದೆ.
ಬಜಪೆ ಪೊಲೀಸ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ












Click it and Unblock the Notifications