Dharmasthala: ಧರ್ಮಸ್ಥಳ ಭಕ್ತಾಧಿಗಳ ಗಮನಕ್ಕೆ, ಜಾತ್ರೆ ಹಿನ್ನೆಲೆ ಈ ದಿನಗಳಂದು ಮುಂಜಾನೆ ದರ್ಶನ ರದ್ದು
ಮಂಗಳೂರು, ಏಪ್ರಿಲ್ 04: ಶ್ರೀ ಕ್ಷೇತ್ರ ಧರ್ಮಸ್ಥಳದ 2024ರ ಕಾಲಾವಧಿ ಜಾತ್ರೆಯು ಏಪ್ರಿಲ್ 12 ಶುಕ್ರವಾರದಿಂದ ಏಪ್ರಿಲ್ 24 ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ.
2024ರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಧಾರ್ಮಿಕ ಕಾರ್ಯಕ್ರಮಗಳ ವಿವರ ಸೇರಿದಂತೆ ಇತರ ಮಾಹಿತಿಯೊಳಗೊಂಡ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗಾಗಿ ಕೆಲವು ಮುಖ್ಯವಾದ ಮಾಹಿತಿಯನ್ನು ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಲಾವಧಿ ಜಾತ್ರೆಯ ಸಮಯದಲ್ಲಿ ಕ್ಷೇತ್ರಕ್ಕೆ ತೆರಳುವವರು ಈ ವಿಚಾರವನ್ನು ತಿಳಿದಿರಬೇಕಾಗಿದೆ.

ಏಪ್ರಿಲ್ 18ರಿಂದ ಏಪ್ರಿಲ್ 23ರವರೆಗೆ ಬೆಳಗ್ಗೆ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸಾಯಂಕಾಲ 5 ಗಂಟೆಯಿಂದ 8:30ರವರೆಗೆ ಮಾತ್ರ ಭಕ್ತರನ್ನು ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 18ರಿಂದ ಏಪ್ರಿಲ್ 23ರವರೆಗೆ ಮುಂಜಾನೆಯ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಧಾರ್ಮಿಕ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ
- ಏಪ್ರಿಲ್ 12- ರಾತ್ರಿ 8:30ರಿಂದ ಓಲೆ ಬರೆಯುವುದು
- ಏಪ್ರಿಲ್ 13- ಸಂಜೆ 6 ಗಂಟೆಗೆ ಪಯ್ಯೋಳಿ ಹೋಗುವುದು, ರಾತ್ರಿ 7:30ಕ್ಕೆ ಧ್ವಜಾರೋಹಣ, ರಾತ್ರಿ 10 ಗಂಟೆಗೆ ಧರ್ಮ ದೈಬಗಳ ಭಂಡಾರ ಹೊರಡುವುದು.
- ಏಪ್ರಿಲ್ 14- ರಾತ್ರಿ 10 ಗಂಟೆಯ ನಂತರ ಧರ್ಮ ದೈವಗಳ ನೇಮ
- ಏಪ್ರಿಲ್ 15- ರಾತ್ರಿ 8 ಗಂಟೆಯಿಂದ ಅಣ್ಣಪ್ಪ ನೇಮ
- ಏಪ್ರಿಲ್ 16- ಉತ್ಸವ
- ಏಪ್ರಿಲ್ 17- ರಾತ್ರಿ 8:30ಕ್ಕೆ ಬಯಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ರಜತಲಾಲಕಿಯಲ್ಲಿ ಹೊಸಕಟ್ಟೆಗೆ(ವಸಂತ ಮಹಲ್)
- ಏಪ್ರಿಲ್ 18- ಬೆಳಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ,
- ಏಪ್ರಿಲ್ 19- ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಲಲಿತೋದ್ಯಾನ ಉತ್ಸವ
- ಏಪ್ರಿಲ್ 20-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಕೆರೆಕಟ್ಟೆ ಉತ್ಸವ
- ಏಪ್ರಿಲ್ 21-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಚಂದ್ರಮಂಡಲ ಗೌರಿ ಮಾರುಕಟ್ಟೆ ಉತ್ಸವ
- ಏಪ್ರಿಲ್ 22- ಬೆಳಗ್ಗೆ ರಥೋತ್ಸವ, ದರ್ಶನ ಬಲಿ, ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಬ್ರಹ್ಮರಥೋತ್ಸವ, ಭೂತ ಬಲಿ
- ಏಪ್ರಿಲ್ 23: ಬೆಳಗ್ಗೆ 9 ಗಂಟೆಗೆ ಕವಾಟೋಧ್ಘಾಟನೆ, ರಾತ್ರಿ 6 ಆರು ಗಂಟೆ ನಂತರ ದರ್ಶನ ಬಲಿ, ಧ್ವಜ ಅವಾರೋಹಣ
- ಏಪ್ರಿಲ್ 24: ರಾತ್ರಿ 8:30ರಿಂದ ಧೂಳ ಬಲಿ ಉತ್ಸವ ನಡೆಯಲಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications