ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಿಂದ ಮಂಗಳೂರು ಬಂದರಿಗೆ ಬಂದ ಎರಡನೇ ಐಷಾರಾಮಿ ಹಡಗು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿ.02 : ವಾರದ ಅಂತರದಲ್ಲಿ ಪಣಂಬೂರು ನವ ಮಂಗಳೂರು ಬಂದರು ತೀರಕ್ಕೆ ಮತ್ತೊಂದು ಐಷಾರಾಮಿ ಹಡಗು ಆಗಮಿಸಿದೆ. ಸೆವೆನ್ ಸೀಸ್ ಎಕ್ಸ್ ಪ್ಲೋರರ್ ಎಂಬ ಈ ಹಡಗು ಮಾರ್ಷಲ್ ಐಲ್ಯಾಂಡ್ ನಿಂದ ಆಗಮಿಸಿದೆ.

ಕೋವಿಡ್ ಸಂಕಷ್ಟದ ಬಳಿಕ ಅಂದರೆ ಸರಿ ಸುಮಾರು ಎರಡು ವರ್ಷದ ಬಳಿಕ ನವ ಮಂಗಳೂರು ಬಂದರಿಗೆ ಆಗಮಿಸಿರುವ ಎರಡನೇ ಐಷಾರಾಮಿ ಪ್ರಯಾಣಿಕ ಹಡಗು ಇದಾಗಿದೆ. 686 ಮಂದಿ ಪ್ರಯಾಣಿಕರು ಹಾಗೂ 552 ಸಿಬ್ಬಂದಿಯನ್ನು ಹೊತ್ತು ತಂದಿರುವ ಸೆವೆನ್ ಸೀಸ್ ಎಕ್ಸ್ ಪ್ಲೋರರ್ ಹಡಗು 223.74 ಮೀ. ಉದ್ದ ಹಾಗೂ 48 ಮೀ. ಅಗಲವಿದೆ.

ನವ ಮಂಗಳೂರು ಬಂದರಿಗೆ ಬಂದಿದ್ದ ಐಷಾರಾಮಿ ಹಡಗುನವ ಮಂಗಳೂರು ಬಂದರಿಗೆ ಬಂದಿದ್ದ ಐಷಾರಾಮಿ ಹಡಗು

ಬೆಳಗ್ಗೆ 7 ಗಂಟೆಗೆ ಈ ಹಡಗು ನವ ಮಂಗಳೂರು ಬಂದರಿಗೆ ಆಗಮಿಸಿತ್ತು. ಈ ಹಡಗು ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಕತಾರ್ ಬಂದರಿನಿಂದ ಭಾರತಕ್ಕೆ ಬಂದು ಮರ್ಮಾಗೋವಾಕ್ಕೆ ಆಗಮಿಸಿತ್ತು. ಅಲ್ಲಿಂದ ನವ ಮಂಗಳೂರು ಬಂದರಿಗೆ ಬಂದಿದೆ.

Second Luxury Ship Arrived At Mangaluru Port From Abroad

ಈ ಹಡಗಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಅಧಿಕಾರಿಗಳು ಭವ್ಯವಾಗಿ ಸ್ವಾಗತ ಕೋರಿದ್ದಾರೆ‌. ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆ ಮಾಡಲಾಗಿತ್ತು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ನಗರದ ಕುದ್ರೋಳಿ ಶ್ರೀಕ್ಷೇತ್ರ, ಕದ್ರಿ ದೇವಾಲಯ, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿಯ ಸಾವಿರಕಂಬದ ಬಸದಿಯ ವೀಕ್ಷಣೆಗೆ ಬಸ್, ಕಾರು, ಪ್ರೀಪೇಯ್ ಟ್ಯಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಹಡಗು ಸಂಜೆ 6 ಗಂಟೆಗೆ ಮಾಲ್ಡೀವ್ಸ್ ನ ಮಾಲೆ ಬಂದರಿನತ್ತ ಪ್ರಯಾಣ ಬೆಳೆಸಿದೆ.

ಇದಕ್ಕೂ ಮೊದಲು ನವೆಂಬರ್28 ರಂದು ಕೋವಿಡ್ ನಂತರ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನವ ಮಂಗಳೂರು ಬಂದರಿನ ತೀರಕ್ಕೆ ಯೂರೋಪ್‌ನ ಮಾಲ್ಟಾದಿಂದ ಐಷಾರಾಮಿ ಪ್ರಯಾಣಿಕ 'ಯುರೋಪ 2' ಕ್ರೂಸ್ ಆಗಮಿಸಿತ್ತು.

271 ಪ್ರಯಾಣಿಕರು ಹಾಗೂ 373 ಮಂದಿ ಸಿಬ್ಬಂದಿಯನ್ನು ಹೊತ್ತು ತಂದ ಎಂಎಸ್ 'ಯುರೋಪ 2' ನವ ಮಂಗಳೂರು ಬಂದರಿಗೆ ಆಗಮಿಸಿತ್ತು. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲದ ಈ ಪ್ರಯಾಣಿಕ ಹಡಗು ಗೋವಾದಿಂದ ಮಂಗಳೂರಿಗೆ ಬಂದಿತ್ತು.

Second Luxury Ship Arrived At Mangaluru Port From Abroad

ನವ ಮಂಗಳೂರು ಬಂದರು ಅಧಿಕಾರಿಗಳು ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆಗಳನ್ನು ಕಲ್ಪಿಸಿದ್ದರು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ಬಸ್ಸು, ಕಾರುಗಳು, ಪ್ರೀಪೇಯ್ ಟಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರಯಾಣಿಕರು ಸಂತ ಅಲೋಶಿಯಸ್ ಕಾಲೇಜು, ಕುದ್ರೋಳಿ ದೇವಸ್ಥಾನ, ಮಾರುಕಟ್ಟೆ, ಗೇರುಬೀಜ ಕಾರ್ಖಾನೆ, ಫಿಝಾ ಮಾಲ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು.

English summary
Second Luxury Ship arrived at Mangaluru port from Marshall Islands . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X