ಮಣ್ಣಗುಡ್ಡದ ಹೋಟೆಲ್ ನಲ್ಲಿ ಫಿಶ್ ಕರಿ ರೈಸ್, ಅಂಜಲ್ ಫ್ರೈ ಸವಿದ ರಾಗಿಣಿ

ಮಂಗಳೂರು, ಆಗಸ್ಟ್ 31: ಕುಡ್ಲದ ಫಿಶ್ ಕರಿ ರೈಸ್ ಹಾಗೂ ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಬಹಳ ಪ್ರಸಿದ್ಧಿ ಪಡೆದಿದೆ. ತುಳುನಾಡಿನ ಪಾರಂಪರಿಕ ರುಚಿ ಸವಿಯಲು ದೇಶ ವಿದೇಶದಿಂದ ಜನರು ಇಲ್ಲಿಗೆ ಬರುತ್ತಾರೆ.

ನಾಲಿಗೆಗೆ ಚುರ್ ಎನಿಸುವ ಪಕ್ವಾನ್ನಗಳನ್ನು ಸವಿದು ಧನ್ಯತಾಭಾವ ಅನುಭವಿಸುತ್ತಾರೆ. ಈ ಬಾರಿ ತುಳುನಾಡಿನ ಸವಿ ಅನುಭವಿಸಲು ಬಂದಿದ್ದು ಸ್ಯಾಂಡಲ್ ವುಡ್ ನ ಖ್ಯಾತ ತಾರೆ ರಾಗಿಣಿ ದ್ವಿವೇದಿ.

Sandalwood actress Ragini Dwivedi tasted angel fry in Mangaluru

ನಟಿ ರಾಗಿಣಿ ದ್ವಿವೇದಿ ಗುರುವಾರ ಕಾರ್ಯನಿಮಿತ್ತ ಮಂಗಳೂರಿಗೆ ಭೇಟಿ ನೀಡಿದ್ದರು. ಅವರಿಗೆ ಕುಡ್ಲದ ಫಿಶ್ ಕರಿ ರೈಸ್ ಸವಿಯುವ ಮನಸ್ಸಾಗಿದೆ. ಆಗ ಅವರು ನೇರ ಬಂದಿದ್ದು ಮಂಗಳೂರಿನ ಮಣ್ಣಗುಡ್ಡದಲ್ಲಿರುವ ನಂದಿನಿ ಫಿಶ್ ಬೌಲ್ ಹೋಟೆಲ್ ಗೆ.

ಹೀಗೆ ಏಕಾಏಕಿ ಭೇಟಿ ನೀಡಿದ ನಟಿ ರಾಗಿಣಿ ದ್ವಿವೇದಿ ಅವರನ್ನು ಕಂಡು ಹೋಟೆಲ್ ಮಾಲೀಕ ಅನೂಪ್ ಗಲಿಬಿಲಿಗೊಂಡಿದ್ದಾರೆ . ಹೋಟೆಲ್ ಪ್ರವೇಶಿಸಿದ ರಾಗಿಣಿ ಮೆನು ಕಾರ್ಡ್ ಮೇಲೆ ಕಣ್ಣಾಡಿಸಿ, ಕುಡ್ಲದ ಪಾರಂಪರಿಕ ಖಾದ್ಯಗಳಾದ ಫಿಶ್ ಕರಿ ರೈಸ್, ಅಂಜಲ್ ಫ್ರೈ ಹಾಗೂ ಪ್ರೋನ್ಸ್ ಘೀ ರೋಸ್ಟ್ ಆರ್ಡರ್ ಮಾಡಿದ್ದಾರೆ .

Sandalwood actress Ragini Dwivedi tasted angel fry in Mangaluru

ತುಳುನಾಡಿನ ಟ್ರೇಡ್ ಮಾರ್ಕ್ ಎಂದು ಹೇಳಲಾಗುವ ಬಾಯಿಲ್ಡ್ ರೈಸ್ ಅನ್ನು ಸವಿದ ರಾಗಿಣಿ ಪ್ರೋನ್ಸ್ ಘೀ ರೊಸ್ಟ್ ಹಾಗೂ ಅಂಜಲ್ ಫ್ರೈ ಸವಿದು ಹೋಟೆಲ್ ಮಾಲೀಕರಿಗೆ ಧನ್ಯವಾದ ಹೇಳಿ ತೆರಳಿದ್ದಾರೆ. ಕುಡ್ಲದ ಊಟ ಸವಿದ ರಾಗಿಣಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+