ರಸ್ತೆ ಬದಿ ಕಂಡ ಕೋಳಿಗಳು; ಎದ್ದು, ಬಿದ್ದು ಹಿಡಿದ ಜನರು!

ಮಂಗಳೂರು, ಏಪ್ರಿಲ್ 12; ಉಚಿತವಾಗಿ ಸಿಕ್ಕರೆ ಜನ ಯಾವುದನ್ನು‌ ತಾನೇ ಬಿಡುತ್ತಾರೆ?. ಅದರಲ್ಲೂ ಕೋಳಿಗಳು ಉಚಿತವಾಗಿ ಸಿಕ್ಕಿದರೆ ಹೇಗಾಗಬಹುದು?. ಜನ ಮುಗಿಬಿದ್ದು ತೆಗೆದುಕೊಂಡು ಹೋಗುತ್ತಾರೆ. ಇಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಮುಂಡಾಜೆ ಪ್ರದೇಶ ಸೀಟು ಎಂಬಲ್ಲಿ ಅರಣ್ಯದಲ್ಲಿ 150ಕ್ಕೂ ಕೋಳಿಗಳು ಅನಾಥ ಸ್ಥಿತಿಯಲ್ಲಿದ್ದು, ಜನ ಇಡೀ ಅರಣ್ಯ ಜಾಲಾಡಿ, ಎದ್ದು, ಬಿದ್ದು ಒಡಾಡಿ ಕೋಳಿ ಹಿಡಿದು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಸೀಟು ರಕ್ಷಿತಾರಣ್ಯದ ರಸ್ತೆ ಬದಿ 150ಕ್ಕೂ ಹೆಚ್ಚು ಸೇಲಂ ಕೋಳಿಗಳು ಅನಾಥವಾಗಿ ತಿರುಗಾಡುತ್ತಿರುವ ವಿಚಾರ ಹಬ್ಬಿತು. ಸುತ್ತ-ಮುತ್ತಲಿನ ಜನ ಕೈಗೆ ಸಿಕ್ಕಷ್ಟು ಕೋಳಿಗಳನ್ನು ಕೈ ಚೀಲ, ಗೋಣಿಗಳಲ್ಲಿ ಹಾಕಿ, ಕೆಲವೊಂದನ್ನು ಹೆಗಲೇರಿಸಿ ಕೊಂಡು ಹೋಗಿದ್ದಾರೆ‌‌.

Salem Breed Chicken Found In Road Side

ಇದೇ ವೇಳೆ 50 ಕ್ಕೂ ಹೆಚ್ಚು ಕೋಳಿಗಳ ಕಳೇಬರ ಕಾಣಿಸಿದ್ದು ಅನಾರೋಗ್ಯದಿಂದ ಬಳಲಿರುವ ಕೋಳಿಗಳನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸೀಟು ಅರಣ್ಯ ಪ್ರದೇಶವಾಗಿದ್ದು, ರಸ್ತೆ ಬದಿ ಮಂಗಗಳ ಶವ, ಹಕ್ಕಿಗಳ ಶವ ಆಗಾಗ ಪತ್ತೆಯಾಗಿರುತ್ತದೆ.

ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಕೋಳಿ ಸಾಗಾಟ, ಹಂದಿ, ಕುರಿ ಸಾಗಾಟದ ವಾಹನಗಳಿಂದ ತ್ಯಾಜ್ಯಗಳನ್ನು ಇಲ್ಲೇ ಎಸೆಯುತ್ತಾರೆ. ಹಾಗಾಗಿ ಈ ಭಾಗದಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಟ ನಡೆಸುವ ಪರಿಸ್ಥಿತಿ ಇದೆ.

ಮುಂಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿನಿ ಮಧು ಈ ಕುರಿತು ಮಾತನಾಡಿದ್ದು, ಜನರು ಕೋಳಿಗಳನ್ನು ಆಹಾರಕ್ಕೆ ಬಳಸದಂತೆ ವಿನಂತಿ ಮಾಡಿದ್ದಾರೆ. ಪಶುವೈದ್ಯಾಧಿಕಾರಿಗಳಿಗೆ ಕೋಳಿಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ಪರೀಶಿಲಿಸುವಂತೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+