ಯಕ್ಷಗಾನಕ್ಕೂ ಬಂತು ರಾಹುಲ್ 'ಇವನರ್ವ' ಡೈಲಾಗ್
ಮಂಗಳೂರು, ಏಪ್ರಿಲ್ 01: ರಾಜ್ಯ ವಿಧಾನ ಸಭಾ ಚುನಾವಣೆಯ ದಿನಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಭಾರೀ ಸದ್ದುಮಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ವಿಚಾರವನ್ನು ಕಾಂಗ್ರೆಸ್ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದೆ. ಬಸವಣ್ಣ ಅವರ ತತ್ವಸಿದ್ದಾಂತ, ವಚನಗಳ ಸುರಿಮಳೆ ಗೈಯುತ್ತಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯಾದಿಯಾಗಿ ಎಲ್ಲರ ನಾಯಕರ ಬಾಯಲ್ಲಿ ಬಸವಣ್ಣನವರ ಸ್ತುತಿ ಸಾಮಾನ್ಯವಾಗಿದೆ.
ಇತ್ತೀಚೆಗೆ ಅಥಣಿಯಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶದಲ್ಲಿ ವನ್ನು ಉದ್ದೇಶಿಸಿ ಮಾನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣ ಅವರ ವಚನಗಳನ್ನು ಪ್ರಸ್ಥಾಪಿಸಿ ವಚನದ 2 ಸಾಲುಗಳನ್ನು ತಮ್ಮ ಭಾಷಣದಲ್ಲಿ ಬಳಸಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ವಚನ ಉಚ್ಚರಿಸಿದ ಶೈಲಿ ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

"ಇವನಾರ್ವ ಇವನಾರ್ವ , ಇವನಂಬ್ವ ಇವನಂಬ್ವ" ಎಂದು ರಾಹುಲ್ ಗಾಂಧಿ ವಚನ ಉಚ್ಚರಿಸಿದ ಶೈಲಿ ಈಗ ಯಕ್ಷಗಾದಲ್ಲೂ ಅನುಕರಣೆ ಗೊಂಡಿದೆ. ಇತ್ತೀಚೆಗೆ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನ ಒಂದರಲ್ಲಿ ವಿದೂಷಕ ರಾಹುಲ್ ಗಾಂಧಿ ಅವರ ವಚನ ಶೈಲಿ ಪ್ರಸ್ಥಾಪಿಸಿ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ಪ್ರದರ್ಶನದಲ್ಲಿ ರಾಹುಲ್ ಗಾಂಧಿ ಅವರ ವಚನ ಉಚ್ಚರಿಸಿದ ಶಯಲಿಯನ್ನು ಬಳಸಿಕೊಂಡಿದ್ದಾರೆ.
ಯಕ್ಷಗಾನದಲ್ಲಿ ರಾಹುಲ್ ವಚನ ಶೈಲಿ ಬಳಕೆ ಮಾಡಿಕೊಂಡಿರುವುದಕ್ಕೆ ಕಾಂಗ್ರೆಸಿಗರ ಕಣ್ಣು ಕೆಂಪಗಾಗಿಸಿದೆ. ಈ ನಡುವೆ ಬಸವಣ್ಣ ಅವರ "ನುಡಿದಂತೆ ನಡೆ" ವಾಕ್ಯವನ್ನು ರಾಹುಲ್ ಗಾಂಧಿ ಉಚ್ಚರಿಸಿದ್ದ "ನುಡಿಡಂಟೆ ನಡೆ" ಯನ್ನು ಯಕ್ಷಗಾನ ಪ್ರಸಂಗದಲ್ಲಿ ಅನುಕರಣೆ ಮಾಡಿರುವುದು ಕಾಂಗ್ರೆಸ್ಸಿಗರಿಗೆ ಇರಿಸುಮುರುಸಾಗಿಸಿದೆ.

ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಚುನಾವಣೆಯ ಬಿಸಿಕಾವು ಯಕ್ಷಗಾನ ಕ್ಷೇತ್ರಕ್ಕೂ ತಟ್ಟಿರುವುದು ಮಾತ್ರ ಸುಳ್ಳಲ್ಲ. ಈ ಯಕ್ಷಗಾನ ಪ್ರಸಂಗದ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ












Click it and Unblock the Notifications