'ಮೂರೇ ಮೂರು ಪೆಗ್'ಗೆ ಕುಣಿದಾಡಿದ ಪುತ್ತೂರು ಫಿಲೋಮಿನಾ ವಿದ್ಯಾರ್ಥಿಗಳು

ಮಂಗಳೂರು, ಮಾರ್ಚ್ 1: ಬಿಗ್ ಬಾಸ್ ಕನ್ನಡ ಸೀಸನ್ 5ರ ವಿನ್ನರ್ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹವಾ ಸೃಷ್ಠಿಸಿದ್ದಾರೆ. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಚಂದನ್ ಶೆಟ್ಟಿ ತಾನು ಕಲಿತ ಶಾಲೆಯ ವಿದ್ಯಾರ್ಥಿಗಳ ಮಧ್ಯೆ ಇದೀಗ ಹೀರೋ ಆಗಿ ಮಿಂಚಿದರು.

ಹನ್ನೆರಡು ವರ್ಷಗಳ ಹಿಂದೆ ಪುತ್ತೂರಿನ ಸಂತ ಫಿಲೋಮೀನಾ ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಚಂದನ್ ಶೆಟ್ಟಿ ಇಂದು ಯುವ ಮನಸುಗಳ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. 12 ವರ್ಷಗಳ ಹಿಂದೆ ಕಾಲೇಜಿನ ಲಾಸ್ಟ್ ಬೆಂಚ್ ನ ಸ್ಟೂಡೆಂಟ್ ಚಂದನ್ ಶೆಟ್ಟಿಗೆ ಇಂದು ತಾನು ಕಲಿತ ಕಾಲೇಜಿಗೆ ಮತ್ತೆ ಬಂದಾಗ ಇಡೀ ಕಾಲೇಜ್ ಎದ್ದು ನಿಂತು ರ‍್ಯಾಪರ್ ಗೆ ತಮ್ಮ ಅಭಿಮಾನವನ್ನು ತೋರಿಸಿತು.

ಫಿಲೋಮಿನಾದಿಂದ ರ‍್ಯಾಪರ್ ವರೆಗೆ

ಫಿಲೋಮಿನಾದಿಂದ ರ‍್ಯಾಪರ್ ವರೆಗೆ

2006ರಲ್ಲಿ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿಕೊಂಡು ಕಾಲೇಜು ಬಿಟ್ಟ ಚಂದನ್ ಶೆಟ್ಟಿ ನಂತರ ಮೈಸೂರಿಗೆ ತೆರಳಿ ಹೆಚ್ಚಿನ ಶಿಕ್ಷಣ ಪಡೆದರು.

ಬಳಿಕ ಕನ್ನಡದ ಪ್ರಥಮ ರ‍್ಯಾಪರ್ ಆಗಿ ಗುರುತಿಸಿಕೊಂಡ ಚಂದನ್ ಶೆಟ್ಟಿ, ತಮ್ಮ ರ‍್ಯಾಪ್ ಹಾಡುಗಳಿಂದ ಜನರನ್ನು ರಂಜಿಸಿದರು. ಸಾಮಾಜಿಕ ಜಾಲತಾಣ ಯೂಟ್ಯೂಬ್ ಹೀರೋ ಆಗಿ ಮಿಂಚಿದ ಅವರು ತಮ್ಮ ಹಾಡುಗಳಿಂದಾಗಿ ಲಕ್ಷಾಂತರ ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಬಿಗ್ ಬಾಸ್ ವಿನ್ನರ್

ಬಿಗ್ ಬಾಸ್ ವಿನ್ನರ್

ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಚಂದನ್ ಶೆಟ್ಟಿ , ಮನೆಯಲ್ಲಿ ಭರ್ಜರಿ 105 ದಿನಗಳಲ್ಲಿ ಪೂರೈಸಿ, ವಿಜೇತರಾಗಿ ಹೊರ ಹೊಮ್ಮಿದರು.

ಕಾಲೇಜು ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿ

ಕಾಲೇಜು ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿ

ಇತ್ತ ಪುತ್ತೂರಿನ ಸಂತ್ ಫಿಲೋಮಿನಾ ಕಾಲೇಜು ತನ್ನ ಹಳೆಯ ವಿದ್ಯಾರ್ಥಿಯೊಬ್ಬ ಈ ಮಟ್ಟಕ್ಕೇರಿದ್ದನ್ನು ಸಂಭ್ರಮಿಸಿತ್ತು. ಈ ಹಿನ್ನಲೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಚಂದನ್ ಶೆಟ್ಟಿ ಅವರನ್ನೇ ಆಹ್ವಾನಿಸಿತ್ತು.

ವಿದ್ಯಾರ್ಥಿಗಳ ಹೆಗಲ ಮೇಲೆ ಚಂದನ್ ಶೆಟ್ಟಿ

ವಿದ್ಯಾರ್ಥಿಗಳ ಹೆಗಲ ಮೇಲೆ ಚಂದನ್ ಶೆಟ್ಟಿ

ನಿನ್ನೆ ಸಂಜೆ ಪುತ್ತೂರು ತಲುಪಿದ ಚಂದನ್ ಶೆಟ್ಟಿ ಅವರನ್ನು ಕಾಲೇಜಿನ ದ್ವಾರದಿಂದ ತೆರೆದ ಕಾರಿನಲ್ಲಿ ಕೂರಿಸಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದವರು ಮೆರವಣಿಗೆ ಮಾಡಿದರು. ಚಂದನ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಚಂದನ್ ಶೆಟ್ಟಿ ಕಂಡೊಡನೇ "ಹೋ" ಎಂದು ಚೀರುತ್ತಾ ಎದ್ದು ನಿಂತು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಸಭಾಂಗಣ ಆವರಣದಿಂದ ಚಂದನ್ ಶೆಟ್ಟಿಯನ್ನು ಹೆಗಲ ಬಮೇಲೆ ಹೊತ್ತುಕೊಂಡೇ ವಿದ್ಯಾರ್ಥಿಗಳು ವೇದಿಕೆಗೆ ಕರೆ ತಂದರು.

ಚಂದನ್ ಶೆಟ್ಟಿ ಹಾಡಿಗೆ ವಿದ್ಯಾರ್ಥಿಗಳು ಫಿದಾ

ಚಂದನ್ ಶೆಟ್ಟಿ ಹಾಡಿಗೆ ವಿದ್ಯಾರ್ಥಿಗಳು ಫಿದಾ

ಫಿಲೋಮಿನಾ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದನ್ ಶೆಟ್ಟಿ ಕೊನೆಯಲ್ಲಿ ಮೂರೇ ಮೂರು ಪೆಗ್ , ಟಕೀಲಾ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ರ‍್ಯಾಪರ್ ಜತೆ ಸೆಲ್ಫಿ

ರ‍್ಯಾಪರ್ ಜತೆ ಸೆಲ್ಫಿ

ವಿದ್ಯಾರ್ಥಿ ವಿದ್ಯಾರ್ಥಿನಿಯರು ಚಂದನ್ ಶೆಟ್ಟಿ ಅವರ ಕಾರ್ಯಕ್ರಮದ ಪ್ರತಿ ಕ್ಷಣವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಂಡರು. ಕೆಲವು ವಿದ್ಯಾರ್ಥಿನಿಯರು ವೇದಿಕೆ ಹತ್ತಿ ಕನ್ನಡ ರ‍್ಯಾಪರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಒಟ್ಟಾರೆಯಾಗಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವಾರ್ಷಿಕೋತ್ಸವ ಈ ಬಾರಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಉಪಸ್ಥಿತಿಯಲ್ಲಿ ಗ್ರ್ಯಾಂಡ್ ಆಗಿ ನೆರವೇರಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+