ಮಹಿಳೆ ಮನೆಗೆ 'ಡ್ಯೂಟಿ' ಮಾಡಲು ಹೋಗಿ ಪ್ಯಾದೆ ಸಿಕ್ಕಿಬಿದ್ದ!

ಕುಂದಾಪುರ, ನವೆಂಬರ್,03 : ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪೊಲೀಸ್ ಪೇದೆಯನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶಿರೂರ್ ಮಾರ್ಕೆಟ್ ಬಳಿ ನವೆಂಬರ್ 02ರ ಸೋಮವಾರ ಮಧ್ಯಾಹ್ನ ನಡೆದಿದೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಿರಣ್ ಧರ್ಮದೇಟು ತಿಂದ ಪೊಲೀಸ್ ಪೇದೆ. ಪಾಸ್ ಪೋರ್ಟ್ ಮಾಡಿಸಿ ಕೊಡುವ ನೆಪ ಇಟ್ಟುಕೊಂಡು ಶಿರೂರಿನ ಮಹಿಳಾ ಮನೆಗೆ ಹೋಗುತ್ತಿದ್ದ ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು ಆತನನ್ನು ಹಿಡಿದು ಸರಿಯಾಗಿಯೇ ಗೂಸಾ ನೀಡಿದ್ದಾರೆ.[ಸಿನಿಮಾ ನೋಡಿ ಬರುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಹೊಡೆದ್ರಂತೆ]

Public charged on police constable at Kundapura on Monday

ಘಟನೆ ವಿವರ :

ಜಾಗದ ತಕಾರರನ್ನು ಬಗೆಹರಿಸಿಕೊಡುವ ನೆಪದಲ್ಲಿ ಶಿರೂರು ಮಾರ್ಕೆಟ್ ಬಳಿಯಿರುವ ಮಹಿಳೆಗೆ ಪರಿಚಯವಾದ ಪೊಲೀಸ್ ಪೇದೆ ಕಿರಣ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದನು. ಇದನ್ನು ಕಂಡ ಸಾರ್ವಜನಿಕರು ಕಿರಣ್ ಆಕೆಯೊಂದಿಗೆ ಅನೈತಿಕ ಚಟುವಟಿಕೆ ಇಟ್ಟುಕೊಂಡಿರಬಹುದು ಎಂದು ಅನುಮಾನಿಸಿ ಈತನ ಬೆನ್ನು ಬಿದ್ದಿದ್ದರು.

ಎಂದಿನಂತೆ ಕಿರಣ್ ಸೋಮವಾರ ಮಧ್ಯಾಹ್ನ ಆಕೆಯ ಮನೆಗೆ ಬಂದಿದ್ದಾನೆ. ಅಂದು ಅವನ ಅನೈತಿಕ ಸಂಬಂಧ ಬಯಲಾಗಿದ್ದು, ಸಾರ್ವಜನಿಕರು ಮನೆ ಹೊರಗಿನಿಂದ ಚಿಲಕ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ಮೊದಲೇ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಕಿರಣ್ ಗೆ ಹೊಡೆದು, ಮಹಿಳೆ ಮನೆಗೆ ಯಾವಾಗಲೂ ಏಕೆ ಬರುತ್ತೀಯಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ, 'ಆಗ ಕಿರಣ್ ನಾನು ಪಾಸ್ಪೋರ್ಟ್ ಮಾಡಿಸಿ ಕೊಡುವ ಕಾರಣಕ್ಕೆ ಬಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

ರಕ್ಷಣೆ ಮಾಡಬೇಕಾದ ಪೊಲೀಸರೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವಾಗ ಸಾರ್ವಜನಿಕರನ್ನು ಹೇಗೆ ರಕ್ಷಣೆ ಮಾಡುತ್ತಾರೆ? ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಈತನ ವಿರುದ್ಧ 354 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+