ಮಂಗಳೂರಿನಲ್ಲಿ ವೆಬ್ ಸೈಟ್ ಮೂಲಕ ವೇಶ್ಯಾವಾಟಿಕೆ, ಇಬ್ಬರು ಪೊಲೀಸ್ ವಶಕ್ಕೆ
ವೇಶ್ಯಾವಾಟಿಕೆಯನ್ನು ವೆಬ್ ಸೈಟ್ ಮೂಲಕ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂಟರ್ ನೆಟ್ ನ ಹೇಗೆ ಕೆಟ್ಟದಾಗಿ ಬಳಕೆ ಆಗುತ್ತದೆ ಎಂಬುದಕ್ಕೆ ಉದಾಹರಣೆ ಇದು
ಮಂಗಳೂರು, ಜನವರಿ 30: ಕಚಡಾ ಕೆಲಸ ಮಾಡಿದರೂ ಅದಕ್ಕೆ ಎಂಥೆಂಥ ವಿಧಾನ ಆರಿಸಿಕೊಳ್ಳುತ್ತಾರೆ ಗೊತ್ತಾ? ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ವೆಬ್ ಸೈಟ್ ಮೂಲಕ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್‌ವೊಂದನ್ನು ಕೇಂದ್ರೀಕರಿಸಿ, ಇಂಟರ್ ನೆಟ್ ಮೂಲಕ ವೇಶ್ಯಾವಾಟಿಕೆ ನಡೆಯುತ್ತಿತ್ತು. ಗ್ರಾಹಕರಿಗೆ ಯುವತಿಯರನ್ನು ಒದಗಿಸಿ, ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ನಗರದ ಹಳೇ ಬಸ್ ನಿಲ್ದಾಣದ ಬಳಿಯಿಂದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.[ಮಂಗಳೂರಲ್ಲಿ ಆನ್ ಲೈನ್ ವೇಶ್ಯಾವಾಟಿಕೆ : ಐವರ ಬಂಧನ]

ಬಂಧಿತರನ್ನು ತೊಕ್ಕೋಟ್ಟು ಪಿಲಾರ್ ನಿವಾಸಿ ಶೇಖ್ ಮುಹಮ್ಮದ್ ಹಾಗೂ ವಿರಾಜಪೇಟೆಯ ಬಾಳುಗೋಡಿ ಮೂಲದ ದೀಪಕ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಮೊಬೈಲ್ ಫೋನ್ ಹಾಗೂ 12500 ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಘಟಕದ ಇನ್ ಸ್ಪೆಕ್ಟರ್ ಸುನಿಲ್ ವೈ. ನಾಯಕ್ , ಪಿಎಸ್ ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications