ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಗುರುತು ಪತ್ತೆ?
ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಮುಂಜಾನೆ ಬಾಂಬ್ ಇರಿಸಿದ ವ್ಯಕ್ತಿ ಮಣಿಪಾಲದ ಯುವಕ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಪೊಲೀಸರು ಅಧಿಕೃತ ಮಾಹಿತಿ ನೀಡಿಲ್ಲ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿಯ ಹೆಸರು ಆದಿತ್ಯ ರಾವ್ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಶಂಕಿತ ಪತ್ತೆಗಾಗಿ ಪೊಲೀಸರು 3 ತಂಡಗಳನ್ನು ರಚಿಸಿದ್ದು ಆತನ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
ಈ ನಡುವೆ ಶಂಕಿತನು ವಿಮಾನ ನಿಲ್ದಾಣಕ್ಕೆ ಬಂದ ಮತ್ತು ಅಲ್ಲಿ ಬ್ಯಾಗ್ ಇಟ್ಟು ಹೊರಗೆ ಹೋದ ವಿಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಶಂಕಿತನು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಟೋ ಬದಲಿಗೆ ಬಸ್ ನಲ್ಲಿ ಬಂದ ಬಗ್ಗೆ ಮಾಹಿತಿ ದೊರೆತಿದ್ದು, ರಾಜಕುಮಾರ ಬಸ್ ನ ಕಂಡಕ್ಟರ್ ಶಂಕಿತನನ್ನು ಬ್ಯಾಗ್‌ನೊಂದಿಗೆ ನೋಡಿದ್ದಾಗಿ ಹೇಳಿದ್ದಾರೆ.












Click it and Unblock the Notifications