ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಧಿ ಮುಗಿಯುವ ಮೊದಲೇ ಪ್ಯಾಕೇಟಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್

By ಐಸಾಕ್ ರಿಚರ್ಡ್
|
Google Oneindia Kannada News

ವಿಟ್ಲ, ಅಕ್ಟೋಬರ್, 30 : ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಇಷ್ಟಪಡುವ, ಬಹುವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಕಾಯ್ದುಕೊಂಡು ಬಂದಿರುವ ಪಾರ್ಲೆಜಿ ಬಿಸ್ಕೆಟ್ ನಲ್ಲಿ ಬೂಸ್ಟ್ ಹಿಡಿದಿರುವ ಬಿಸ್ಕೆಟ್ ಗಳು ಕಂಡು ಬಂದಿವೆ. ಇದರಿಂದ ಸಾರ್ವಜನಿಕರು ಬಿಸ್ಕೆಟ್ ಕೊಳ್ಳಲು ಹೆದರುವಂತಾಗಿದೆ.

ವಿಟ್ಲ ಕಸಬಾ ಗ್ರಾಮದ ಮೇಗಿನ ಪೇಟೆ ನಿವಾಸಿ ತಾಜು ಎಂಬವರು ಅಂಗಡಿಯಿಂದ ತಂದ ಬಿಸ್ಕೆಟ್ ಪ್ಯಾಕೇಟ್ ನಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್ ಕಂಡು ಬಂದಿದೆ. ಇವರು ಮೇಗಿಣಪೇಟೆಯ ಅಂಗಡಿಯಿಂದ ಪಾರ್ಲೆ-ಜಿ ಬಿಸ್ಕೆಟ್ ಖರೀದಿಸಿದ್ದರು.[ಅಡುಗೆ, ಮಕ್ಕಳ ಆರೈಕೆ, ಸೆಕ್ಯೂರಿಟಿ ಚಿಂತೆಗೆ ಇಲ್ಲಿದೆ ಉತ್ತರ]

Parle-G biscuits include boost biscuits before expired date at Mangaluru

ತಾಜು ಅವರು ಅಂಗಡಿಯಿಂದ ಮನೆಗೆ ತೆರಳಿ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೆಟ್ ತೆರೆದಾಗ ಅದರಲ್ಲಿದ್ದ ಹಲವು ಬಿಸ್ಕೆಟ್ ಗಳು ಬೂಸ್ಟ್ ಹಿಡಿದಿರುವುದು ಕಂಡುಬಂದಿದೆ. ಆಗ ಅನುಮಾನ ಬಂದ ಅವರು ಅದರ ಪ್ಯಾಕಿಂಗ್ ದಿನಾಂಕವನ್ನು ಪರಿಶೀಲಿಸಿದ್ದಾರೆ. ಆದರೆ ಅದರಲ್ಲಿ ದಿನಾಂಕ 2.09.2015 ಎಂದು ನಮೂದಿಸಲಾಗಿತ್ತು . ಅವಧಿ ಮುಗಿಯುವ ಮೊದಲೇ ಬಿಸ್ಕೆಟ್ ಬೂಸ್ಟ್ ಹಿಡಿದಿರುವುದನ್ನು ಕಂಡು ಸ್ಥಳೀಯರು ಕೊಂಚ ಆತಂಕಕ್ಕೊಳಗಾಗಿದ್ದಾರೆ.

'ಈ ಬಿಸ್ಕೆಟ್ ಗಳನ್ನು ಹೆಚ್ಚಾಗಿ ಮಕ್ಕಳು ಪ್ಯಾಕೇಟ್ ಒಡೆದು ತಿನ್ನುತ್ತಿದ್ದರು. ಅದೃಷ್ಟವಶಾತ್ ಇಂದು ದೊಡ್ಡವರು ಈ ಬಿಸ್ಕೆಟ್ ಪ್ಯಾಕೆಟ್ ಗಳನ್ನು ತೆರೆದಿದ್ದಾರೆ. ಅಕಸ್ಮಾತ್ ಮಕ್ಕಳು ಇದನ್ನು ತಿಂದಿದ್ದಲ್ಲಿ ಅವರು ಅಸ್ವಸ್ಥರಾಗುತ್ತಿದ್ದರು ಇದರಲ್ಲಿ ಅನುಮಾನವೇ ಇಲ್ಲ. ಪಾರ್ಲೆ-ಜಿ ಕಂಪನಿ ಬಿಸ್ಕೆಟ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Parle-G biscuits has include boost biscuits before expired date at Vitla kasaba village, Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X