ಮಂಗಳೂರು : ಮೂವರು ಕಳ್ಳರು ದೋಚಿದ್ದು 19 ಟಿವಿ

ಮಂಗಳೂರು, ಜು. 11 : ವಿಡಿಯೋ ಕಾನ್ ಕಂಪನಿ ಗೋದಾಮಿನಿಂದ 19 ಟಿವಿಗಳು ಸೇರಿದಂತೆ 15 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದ ಮೂವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನು ಕೆಲವು ಆರೋಪಿಗಳು ಶಾಮೀಲಾಗಿರುವ ಶಂಕೆ ಇದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆರೋಪಿಗಳಾದ ಇಮ್ರಾನ್‌ ಇರ್ಫಾನ್‌ (24), ಮಹಮ್ಮದ್‌ ಶಮೀರ್‌ (26) ಮತ್ತು ಉಮ್ಮರ್‌ ಫಾರೂಕ್‌ (22) ಅವರನ್ನು ಬಂಧಿಸಲಾಗಿದೆ ಎಂದು ಪಾಂಡೇಶ್ವರ ಪೊಲೀಸರು ಹೇಳಿದ್ದಾರೆ. ಮೂವರು ಮಂಗಳೂರಿನ ಬೆಂಗ್ರೆ ಕಸಬಾ ನಿವಾಸಿಗಳು ಎಂದು ತಿಳಿದುಬಂದಿದೆ.

Mangalore

ಬಂಧಿತ ಆರೋಪಿಗಳಿಂದ 19 ಟಿವಿ, ಒಂದು ಫ್ಯಾನ್, ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಹಲವಾರು ಜನರು ಭಾಗಿಯಾಗಿರುವ ಶಂಕೆ ಇದ್ದು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಪಾಂಡೇಶ್ವರದ ರೋಜಾರಿಯೋ ಸ್ಕೂಲ್‌ ಹಿಂಭಾಗದ ನೀರೇಶ್ವಾಲ್ಯ ರಸ್ತೆಯಲ್ಲಿರುವ ವಿಡಿಯೋ ಕಾನ್‌ ಕಂಪೆನಿಯ ಗೋದಾಮಿಗೆ ಜೂ.3ರಂದು ನುಗ್ಗಿದ್ದ ಆರೋಪಿಗಳು, 19 ಟಿವಿ, ಕೆಲವು ಫ್ಯಾನ್‌, ಕಟ್ಟಡಕ್ಕೆ ಅಳವಡಿಸಿದ್ದ ಸಿಸಿಟಿವಿ ಸೇರಿದಂತೆ ಸುಮಾರು 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದರು. ಗೋದಾಮಿನ ಮಾಲೀಕ ಬಶೀರ್‌ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+