ಟರ್ಕಿ ಟು ಮಂಗಳೂರು; ಬೆಲೆ ಕಡಿವಾಣಕ್ಕೆ ಬಂದ ಈರುಳ್ಳಿ ಬೆಲೆಯೂ ಹೀಗಾಯ್ತು ನೋಡಿ!

ಮಂಗಳೂರು,

ಡಿಸೆಂಬರ್
5:
ಈರುಳ್ಳಿ
ಬೆಲೆ
ಗಗನಕ್ಕೇರಿದೆ.
ಸದ್ಯ
ಮಾರುಕಟ್ಟೆಯಲ್ಲಿ
ಈರುಳ್ಳಿಯದ್ದೇ
ದರ್ಬಾರ್.
ಅಡುಗೆಗೆ
ಈರುಳ್ಳಿ
ಬಳಕೆ
ಮಾಡೋರ
ಕಣ್ಣಲ್ಲೂ
ಬೆಲೆಯಷ್ಟೇ
ಕಣ್ಣೀರು.
ಹೀಗಾಗಿ
ಜನರಿಗೆ
ಉತ್ತಮ
ಬೆಲೆಯಲ್ಲಿ
ಈರುಳ್ಳಿ
ನೀಡಲು
ಮುಂದೆ
ಬಂದಿರುವ
ಕೇಂದ್ರ
ಸರ್ಕಾರ
ಟರ್ಕಿ
ಈರುಳ್ಳಿಯನ್ನು
ಆಮದು
ಮಾಡಿಕೊಂಡಿದೆ.

id="toptextpromo">
id='are-slot-1'
class='oiad
oi-axt
oiadv'>

ಆದರೆ

ಈರುಳ್ಳಿ
ಬೆಲೆಯೂ
ಕಮ್ಮಿಯಿಲ್ಲ.
ಇದರ
ಬೆಲೆಯೂ
ಗಗನ
ಕುಸುಮವಾಗಿದ್ದು,
ಗ್ರಾಹಕರಿಗೆ
ಶಾಕ್
ಕೊಟ್ಟಿದೆ.
ಕೆ‌ಜಿಗೆ
100
ರಿಂದ
200
ರೂ.ವರೆಗೂ
ಬಂದು
ಮುಟ್ಟಿರುವ
ಈರುಳ್ಳಿ
ಮಧ್ಯೆ
ಟರ್ಕಿ
ಈರುಳ್ಳಿಯೂ
ಪೈಪೋಟಿಗೆ
ಇಳಿದಂತೆ
ಕಾಣುತ್ತಿದೆ.

id='are-slot-2'
class='oiad
oi-axt
oiadv'>

 ಟರ್ಕಿ ಟು ಮಂಗಳೂರಿಗೆ ಈರುಳ್ಳಿ

ಟರ್ಕಿ ಟು ಮಂಗಳೂರಿಗೆ ಈರುಳ್ಳಿ

ಬರೋಬ್ಬರಿ ಆರು ಸಾವಿರ ಮೈಲು ದೂರದ ಟರ್ಕಿ ದೇಶದ ಈರುಳ್ಳಿ ಮಂಗಳೂರು ಮಾರುಕಟ್ಟೆಗೆ ಆಗಮಿಸಿದ್ದು, ಮೊದಲ ದಿನವೇ ಕೆ.ಜಿಗೆ 120ರಿಂದ 130 ರೂ. ದರ ನಿಗದಿಯಾಗಿದೆ. ಈರುಳ್ಳಿಯಿಂದ ಕಣ್ಣೀರಾಗಿದ್ದ ಗ್ರಾಹಕರನ್ನು ಸಮಾಧಾನಪಡಿಸಲು ಮುಂದಾಗಿರುವ ಕೇಂದ್ರ ಸರಕಾರ, ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಂಡಿದ್ದು, ಸಾರ್ವಜನಿಕ ಸಂಸ್ಥೆ ಎಂಎಂಟಿಸಿಗೆ ಆಮದು ಜವಾಬ್ದಾರಿ ವಹಿಸಲಾಗಿದೆ. ಟರ್ಕಿಯಿಂದ ಈರುಳ್ಳಿ ಬಂದಾಗ ದರ ಸುಧಾರಿಸಬಹುದು, ಕೆಜಿಗೆ 50ರಿಂದ 60ಕ್ಕೆ ಲಭಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ದರ ಮತ್ತಷ್ಟು ದುಬಾರಿಯಾಗಿದೆ. ಜನರು ಇದರ ಬೆಲೆ ಕೇಳಿಯೇ ಸುಸ್ತಾಗುತ್ತಿದ್ದಾರೆ.

 ಪ್ರತಿಯೊಂದು ಈರುಳ್ಳಿ ಸುಮಾರು ಅರ್ಧ ಕೆ.ಜಿ

ಪ್ರತಿಯೊಂದು ಈರುಳ್ಳಿ ಸುಮಾರು ಅರ್ಧ ಕೆ.ಜಿ

ಈಗ ಮಾರುಕಟ್ಟೆಗೆ ಬಂದಿರುವ ಪ್ರತಿಯೊಂದು ಈರುಳ್ಳಿ ಅರ್ಧ ಕೆಜಿಯಷ್ಟು ಭಾರ ಇದ್ದು, ಒಂದು ಕೆಜಿಗೆ 2-3 ಈರುಳ್ಳಿ ಮಾತ್ರ ತೂಗುತ್ತಿವೆ. ತುಂಬಾ ಖಾರವೂ ಇದೆ. ಈರುಳ್ಳಿ ಕತ್ತರಿಸಿದಾಗ ದರಕ್ಕೆ ತಕ್ಕಂತೆ ಕಣ್ಣೀರು ಬರಿಸುತ್ತಿದೆ. ಟರ್ಕಿಯಿಂದ ಭೂಮಾರ್ಗವಾಗಿ ಬಂದರೆ 6,388 ಕಿ.ಮೀ. ಸುಮಾರು 54 ದಿನ ಬೇಕಾಗಬಹುದು. ಆದ್ರೆ ಈ ಈರುಳ್ಳಿ ದರ ಕೇಳಿ‌ ಗ್ರಾಹಕ ಮತ್ತಷ್ಟು ಶಾಕ್ ಆಗಿದ್ದಾನೆ. ಇತ್ತ ವ್ಯಾಪಾರಿಯೂ ಬೆಲೆಗೆ ತತ್ತರಿಸಿದ್ದಾನೆ.

 ಈರುಳ್ಳಿ ಉತ್ತಪ್ಪಕ್ಕೆ ಬ್ರೇಕ್, ಕ್ಯಾಬೇಜ್ ಬಳಕೆ

ಈರುಳ್ಳಿ ಉತ್ತಪ್ಪಕ್ಕೆ ಬ್ರೇಕ್, ಕ್ಯಾಬೇಜ್ ಬಳಕೆ

ಈರುಳ್ಳಿ ಬೆಲೆ ಶತಕದ ಸುತ್ತಲೇ ಸುತ್ತುತ್ತಿರುವ ಕಾರಣ ನಾಗರಿಕರು, ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಹೋಟೆಲ್‌ಗಳಲ್ಲಿ ಈರುಳ್ಳಿ ಬಳಕೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಹೋಟೆಲ್‌ ಗಳಲ್ಲಿ ಈರುಳ್ಳಿ ಬಜೆ, ಆನಿಯನ್ ಉತ್ತಪ್ಪದಂತಹ ತಿಂಡಿಗಳನ್ನು ತಯಾರಿಸುವುದನ್ನೇ ಬಿಟ್ಟಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ತಿಂಡಿಯಲ್ಲಿ ಈರುಳ್ಳಿ ಬದಲು ಪರ್ಯಾಯವಾಗಿ ಕ್ಯಾಬೇಜ್ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಮಂಗಳೂರು ಮಾರುಕಟ್ಟೆಗೆ ಹುಬ್ಬಳ್ಳಿ, ಪೂನಾ, ಇಂದೋರ್ ‌ನಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಪೂರೈಕೆ ಕೊರತೆ, ಗುಣಮಟ್ಟ ಕುಸಿತದ ಬಳಿಕ ಈಜಿಪ್ಟ್‌ನಿಂದ ಈರುಳ್ಳಿ ಮಂಗಳೂರು ಮಾರುಕಟ್ಟೆ ತಲುಪಿತ್ತು. ಈಜಿಪ್ಟ್ ಈರುಳ್ಳಿ ಗುಣಮಟ್ಟವೂ ತೃಪ್ತಿಕರ ಕಂಡುಬಂದಿರದ ಹಿನ್ನೆಲೆಯಲ್ಲಿ ಮಂಗಳೂರು ಮಾರುಕಟ್ಟೆ ಅಂತಿಮವಾಗಿ ಆಯ್ಕೆ ಮಾಡಿಕೊಂಡಿರುವುದು ಟರ್ಕಿ ಈರುಳ್ಳಿಯನ್ನು.

 30ಟನ್ ಜಾಗದಲ್ಲಿ 10 ಟನ್ ವ್ಯಾಪಾರ

30ಟನ್ ಜಾಗದಲ್ಲಿ 10 ಟನ್ ವ್ಯಾಪಾರ

ಈ ಮಧ್ಯೆ ಈರುಳ್ಳಿ ಬೆಲೆ ಏರಿಕೆಯಿಂದ ಕಾರ್ಮಿಕರಿಗೆ ಕೆಲಸವಿಲ್ಲ. ಬೆಲೆ ಏರಿಕೆಯಿಂದ ಈರುಳ್ಳಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ದೂರುಗಳೂ ಇವೆ. ಹಿಂದೆ 30 ಟನ್ ಪೂರೈಕೆಯಾಗುತ್ತಿದ್ದ ಕಡೆ ಕೇವಲ 10 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಮಂಗಳೂರು ಹಳೇ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆ ಬಳಿ ಕಾರ್ಮಿಕರು ಈರುಳ್ಳಿ ಬೆಲೆ ನಿಯಂತ್ರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕಾರ್ಮಿಕರು ಕೂಡ ಉದ್ಯೋಗವಿಲ್ಕದೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಟ್ಟಾರೆ ಸದ್ಯ ಈರುಳ್ಳಿ ಬೆಲೆ ಗಗನಕ್ಜೇರಿದ್ದು, ಟರ್ಕಿ ಈರುಳ್ಳಿ ದರವೂ ಸಂಕಷ್ಟಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+