ಮಂಗಳೂರು : ನ.1ರಿಂದ ರಾತ್ರಿ ವಿಮಾನ ರದ್ದು

ಮಂಗಳೂರು, ಅ. 18 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್‌ 1ರಿಂದ ರಾತ್ರಿ ವಿಮಾನ ಯಾನ ರದ್ದಾಗುವ ಸಾಧ್ಯತೆಯಿದೆ. ನವೆಂಬರ್‌ನಿಂದ ಮುಂದಿನ 6 ತಿಂಗಳವರೆಗೆ ರಾತ್ರಿ ವೇಳೆ ವಿಮಾನ ಸಂಚಾರ ಕಾಮಗಾರಿಗಳಿಂದಾಗಿ ಸ್ಥಗಿತಗೊಳ್ಳುತ್ತಿದೆ.

ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಿದ ರನ್‌ವೇಯ ಒಂದು ಭಾಗದಲ್ಲಿ ಭದ್ರತಾ ವ್ಯವಸ್ಥೆ ಕಾಮಗಾರಿ ಹಾಗೂ ರನ್‌ವೇಯಿಂದ ಪಾರ್ಕಿಂಗ್ ಸ್ಥಳ ಸಂಪರ್ಕಿಸುವ ಟ್ಯಾಕ್ಸಿವೇ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂದು ವಿಮಾನಯಾನ ಪ್ರಾಧಿಕಾರದ ನಿರ್ದೇಶಕರಾದ ಜೆ.ಟಿ.ರಾಧಕೃಷ್ಣನ್ ಹೇಳಿದ್ದಾರೆ.

Mangalore airport

ನವೆಂಬರ್ 1ರಿಂದ ರಾತ್ರಿ 11.30ರಿಂದ ಬೆಳಗ್ಗೆ 7.30ರ ವರೆಗೆ ವಿಮಾನ ಸಂಚಾರ ಸ್ಥಗಿತಗೊಳಿಸಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಭದ್ರತಾ ವ್ಯವಸ್ಥೆ ಮತ್ತು ಟ್ಯಾಕ್ಸಿ ವೇ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭವಾದರೆ, ವಿಮಾನ ಹಾರಾಟ ಸ್ಥಗಿತಗೊಳಿಸುವ ಅನಿವಾರ್ಯತೆ ಇದೆ. [ಮೈಸೂರು ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಭಾಗ್ಯ]

ಒಂದು ವೇಳೆ ರಾತ್ರಿ ವಿಮಾನ ಹಾರಾಟ ಸ್ಥಗಿತಗೊಂಡರೆ ದುಬೈ ಮತ್ತು ದಮ್ಮಾಮ್‌ಗೆ ಹಾರಾಡುವ ಜೆಟ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾಗಳು ಸ್ಥಗಿತಗೊಳ್ಳುತ್ತದೆ. ವಿಮಾನ ಹಾರಾಟ ಸ್ಥಗಿತಗೊಳಿಸುವ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+