ಮೋದಿಗಾಗಿ ಬರಲಿದೆ ನಮೋ ರೇಡಿಯೋ!

ಮಂಗಳೂರು, ಅ.13 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಕರ್ನಾಟಕದ ಹಳ್ಳಿ-ಹಳ್ಳಿಗೆ ತಲುಪಿಸಲು ನಮೋ ಬ್ರಿಗೇಡ್ ಸಜ್ಜಾಗಿದೆ. ಇದಕ್ಕಾಗಿ ದೊಡ್ಡ ಸ್ಕ್ರೀನ್‌ನ ಪ್ರೊಜೆಕ್ಟರ್, ಎಲ್‌ಇಡಿ ಟಿವಿ ಸೆಟ್ ಹಳ್ಳಿ ಹಳ್ಳಿಗೆ ಸಂಚರಿಸಲಿದೆ. ಅಲ್ಲದೆ ನಮೋ ರೇಡಿಯೊದಲ್ಲಿ ಮೋದಿ ಭಾಷಣ ತುಣುಕು ಪ್ರಸಾರವಾಗಲಿದೆ.

ನರೇಂದ್ರ ಮೋದಿ ಅವರನ್ನು ಪ್ರಧಾನಿ ಖುರ್ಚಿಯ ಮೇಲೆ ಕೂರಿಸಲು ಪಣ ತೊಟ್ಟಿರುವ 'ನಮೋ ಬ್ರಿಗೇಡ್‌' ಅ.20ರ ನಂತರ ಪ್ರಚಾರ ಅಭಿಯಾನ ಕೈಗೊಳ್ಳಲಿದೆ. ಲೋಕಸಭಾ ಚುನಾವಣೆ ಘೋಷಣೆ ವೇಳೆಗೆ ಕರ್ನಾಟಕದ ತುಂಬಾ ಮೋದಿ ಪರ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.

NaMo Brigade

ನಮೋ ಬ್ರಿಗೇಡ್ ಈಗಾಗಲೇ ಸ್ಕ್ರೀನ್ ಸಹಿತ ಪ್ರೊಜೆಕ್ಟರ್ ತರಿಸಿದ್ದು, ದೊಡ್ಡ ಎಲ್‌ಇಡಿ ಟಿವಿ ಕೂಡ ಬರಲಿದೆ. ಇದನ್ನು ಮೊದಲ ಹಂತದಲ್ಲಿ ಮಂಗಳೂರಿನ 1,700 ಗ್ರಾಮಗಳಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸಿದೆ.

ಗುಜರಾತ್‌ನಲ್ಲಿ ಮೋದಿ ಕೈಗೊಂಡ ಕೃಷಿ, ಸೋಲಾರ್ ಸೇರಿದಂತೆ ವಿವಿಧ ರೀತಿಯ ಸಾಧನೆಗಳನ್ನು ವಿಡಿಯೋ ಮೂಲಕ ಇದರಲ್ಲಿ ಪ್ರದರ್ಶಿಸಲಾಗುತ್ತದೆ. ಮೂಲ ವಿಡಿಯೋ ಇಂಗ್ಲಿಷ್‌ನಲ್ಲಿದ್ದು, ಕನ್ನಡಕ್ಕೆ ಭಾಷಾಂತರ ಮಾಡಿಕೊಳ್ಳಲಾಗಿದೆ.

15 ನಿಮಿಷಗಳ ಅವಧಿಯನ್ನು ಈ ವಿಡಿಯೋ ಒಳಗೊಂಡಿದೆ. ಪ್ರೊಜೆಕ್ಟರ್ ಅನ್ನು ಒಳಾಂಗಣದಲ್ಲಿ ಪ್ರದರ್ಶಿಸಲು ಸಾಧ್ಯವಿದೆ. ಆದ್ದರಿಂದ ದೇವಾಲಯ, ಭಜನಾ ಮಂದಿರ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಏರ್ಪಡಿಸಲು ಬ್ರಿಗೇಡ್ ಉದ್ದೇಶಿಸಿದೆ.

ನಮೋ ರೇಡಿಯೊ : ನಮೋ ರೇಡಿಯೊ ಎಂಬುದು ನಮೋ ಬ್ರಿಗೇಡ್‌ನ ಹೊಸ ಕಲ್ಪನೆ. ಬ್ರಿಗೇಡ್ ನೀಡಿದ ಸಂಖ್ಯೆಗೆ ನೀವು ಕರೆ ಮಾಡಿದರೆ, ಮಹಿಳಾ ಸಬಲೀಕರಣ, ಕೃಷಿ, ಕೈಗಾರಿಕೆ, ಆರ್ಥಿಕ ಅಭಿವೃದ್ಧಿ ಮುಂತಾದ ರಂಗದಲ್ಲಿ ಮೋದಿ ಸಾಧನೆಯ, ಅವರ ಹಿಂದಿ ಭಾಷಣದ ಆಯ್ದ ತುಣುಕು ಕೇಳಿಬರರಲಿದೆ.

ಬೆಂಗಳೂರಿನ ಐಟಿ ವಿದ್ಯಾರ್ಥಿ ಸುನೀಲ್ ಪಾಟೀಲ್ ಇದನ್ನು ಸಿದ್ಧಪಡಿಸಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ನಮೋ ರೇಡಿಯೊಗೆ ಚಾಲನೆ ಸಿಗಲಿದೆ. ರೆಡಿಯೋ ಸಂಖ್ಯೆ ಮತ್ತು ಕರೆಯ ದರದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+