ಮಂಗಳೂರು: ಸ್ನೇಹಿತರ ಕಿತ್ತಾಟ, ಕೊಲೆಯಲ್ಲಿ ಅಂತ್ಯ

ಮಂಗಳೂರು. ಮೇ.22: ಮಂಗಳೂರಿನಲ್ಲಿ ಯುವಕನೊಬ್ಬನನ್ನು ಆತನ ನಾಲ್ವರು ಸ್ನೇಹಿತರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸಂಜಯ್‌ ಅಲಿಯಾಸ್‌ ವರುಣ್‌ (19) ಕೊಲೆಯಾದ ಯುವಕ. ನಗರದ ಬೋಳಾರ್‌ ಸಮೀಪದ ರೈಸ್‌ ಮಿಲ್ ಹತ್ತಿರ ಮೇ.22 ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ನಾಲ್ವರು ಸ್ನೇಹಿತರು ಅಕ್ರಮ ಗಾಂಜಾ ವಹಿವಾಟು ನಡೆಸುತ್ತಿದ್ದು, ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.[ಮಂಗಳೂರು: ರವಿ ಪೂಜಾರಿ ಸಹಚರ ಸೆರೆ]

Varun (18), son of Jagadeesh
ಕೊಲೆ ಮಾಡಿದ ಸ್ನೇಹಿತರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಾಜಿ ಕಾರ್ಪೋರೇಟರ್‌ ಬಜಿಲ್‌ಕೆರೆ ಕಮಲಾಕ್ಷರ ಮಗ ಅಶ್ರಿತ್‌(19) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. [ಮಂಗಳೂರು ವಿವಿ ಆವರಣದಲ್ಲಿ 'ಜೋಡಿ' ಶವ]

ಪಡೀಲ್‌ ಹೋಮ್‌ ಸ್ಟೇ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಜಯ್‌ ಈ ಕೊಲೆ ಕೃತ್ಯದಲ್ಲಿ ಶಮೀಲಾಗಿದ್ದು ಪರಾರಿಯಾಗಿದ್ದಾನೆ. ಕೊಲೆಯಾದ ವರುಣ್‌ ಮೃತ ದೇಹವನ್ನು ನಗರದ ಎಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉರ್ವಾ‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+