'ಮೋದಿ, ಯಡ್ಡಿ, ರೆಡ್ಡಿ ಗ್ಯಾಂಗಿನಿಂದ ಕರ್ನಾಟಕ ಲೂಟಿಗೆ ತಂತ್ರ'
ಮಂಗಳೂರು, ಮೇ 06: ಮೋದಿ, ಯಡಯೂರಪ್ಪ, ರೆಡ್ಡಿ ಗ್ಯಾಂಗ್ ಸೇರಿ ಕರ್ನಾಟಕವನ್ನುಲೂಟಿ ಮಾಡಲು ತಂತ್ರ ರೂಪಿಸಿದ್ದಾರೆ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷ ಕೇವಲ ಜುಮ್ಲಾ ಹೇಳಿಕೆ ನೀಡಿಕೊಂಡು ಬರುತ್ತಿರುವ ಮೋದಿ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಸುಳ್ಳುಗಳ ಸರಮಾಲೆ ತಂದಿದ್ದಾರೆ ಎಂದು ಅರೋಪಿಸಿದರು.
2014 ಚುನಾವಣೆಯಲ್ಲಿ ಹರ ಹರ್ ಮೋದಿ ಘರ್ ಘರ್ ಮೋದಿ ಎಂಬ ಘೋಷಣೆ ಕೇಳಿ ಬರುತ್ತಿತ್ತು. ಆದರೆ ಕರ್ನಾಟಕದ ಚುನಾವಣೆ ಬಳಿಕ ಮುಂಬರುವ ಲೋಕಸಭಾ ಚುನಾವಣೆಯವರೆಗೆ 'ಬಾಯ್ ಬಾಯ್ ಮೋದಿ ಸ್ಲೋಗನ್ ಕೇಳಿ ಬರಲಿದೆ' ಎಂದು ಅವರು ವ್ಯಂಗ್ಯವಾಡಿದರು.

2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಮಂಗಳೂರಿಗೆ ಬಂದು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ನಿನ್ನೆ ಮೋದಿ ಮಂಗಳೂರಿಗೆ ಮತ್ತೆ ಬಂದು ಶೂನ್ಯ ಸಾಧನೆಯನ್ನು ಹೇಳಿ ಹೋಗಿದ್ದಾರೆ. ಕಳೆದ ಬಾರಿ ನೀಡಿದ್ದ ಭರವಸೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇವರ ಚುನಾವಣೆ ಭರವಸೆಗಳು ಬರೀ ಜುಮ್ಲಾ ಎಂದು ಅವರು ಕಿಡಿಕಾರಿದರು.
ಚುನಾವಣೆಯಲ್ಲಿ ನೀಡುವ ಭರವಸೆಗಳನ್ನು ನಂಬಬೇಕಾಗಿಲ್ಲ ಎಂದು ಪ್ರಧಾನಿಯೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯನ್ನು ನಂಬುವುದಾದರೂ ಹೇಗೆ? ಬಿಜೆಪಿ ಎಂದರೆ ಅಂದರೆ ಬ್ಯಾಕ್ ಸ್ಟಾಬ್ಬಿಂಗ್ ಜನತಾ ಪಾರ್ಟಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2019 ರ ಚುನಾವಣೆ ಹೊತ್ತಿಗೆ ಮೋದಿ ಸುಳ್ಳು ಜನರಿಗೆ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.












Click it and Unblock the Notifications