ಮೆಸ್ಕಾಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು, ನ.4: ಸರ್ಕಾರಿ ಸ್ವಾಮ್ಯದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಲ್ಲಾ ಅರ್ಜಿಗಳನ್ನು ಮೆಸ್ಕಾಂನ ಅಧಿಕೃತ ವೆಬ್ ತಾಣದ ಮೂಲಕ ಆನ್ ಲೈನ್ ಮೂಲಕವೇ ಸಲ್ಲಿಸಬೇಕಾಗಿ ಕೋರಲಾಗಿದೆ.

ಎಲೆಕ್ಟ್ರಿಕಲ್, ಸಿವಿಲ್ ಸಹಾಯಕ ಇಂಜಿನಿಯರ್, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು ವಿವರಗಳು ಇಲ್ಲಿವೆ...

ಮೆಸ್ಕಾಂ ಹುದ್ದೆಗಳ ವಿವರ:
ಒಟ್ಟು ಖಾಲಿ ಇರುವ ಹುದ್ದೆಗಳು: 55

ಹುದ್ದೆಗಳ ಹೆಸರು:
1. ಸಹಾಯಕ ಇಂಜಿನಿಯರ್(ಎಲೆಕ್ಟ್ರಿಕಲ್) : 36
2. ಸಹಾಯಕ ಇಂಜಿನಿಯರ್(ಎಲೆಕ್ಟ್ರಿಕಲ್)(ಪದವಿಧರ) : 05
3. ಸಹಾಯಕ ಇಂಜಿನಿಯರ್(ಎಲೆಕ್ಟ್ರಿಕಲ್) : 05
4.ಸಹಾಯಕ ಇಂಜಿನಿಯರ್(ಸಿವಿಲ್) : 01
5. ಸಹಾಯಕ ಲೆಕ್ಕಾಧಿಕಾರಿ : 03
6. ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್): 05

Mescom Jobs

ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ.
* ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅರ್ಭ್ಯರ್ಥಿಗಳಿಗೆ 18 ರಿಂದ 38 ವರ್ಷ ವಯೋಮಿತಿ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ.

ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಕಂಪ್ಯೂಟರ್ ಸೈನ್ಸ್/ ಮಾಹಿತಿ ವಿಜ್ಞಾನ/ ಮಾಹಿತಿ ತಂತ್ರಜ್ಞಾನ ವಿಷಯಗಳಲ್ಲಿ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಬಿ.ಇ ಪದವಿ ಪಡೆದಿರಬೇಕು ಅಥವಾ AMIE ಪದವಿ ಗಳಿಸಿರಬೇಕು.
* ಸಿವಿಲ್ ಇಂಜಿನಿಯರ್ ಹುದ್ದೆಗೆ ಸಿವಿಲ್ ವಿಷಯದಲ್ಲಿ ಬಿ.ಇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
* ಲೆಕ್ಕಾಧಿಕಾರಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಕಾಂ ಪದವಿ ಅಥವಾ ICWA ಅಥವಾ ಎಂಬಿಎ (Finance)
* ಕಿರಿಯ ಇಂಜಿನಿಯರ್ ಹುದ್ದೆಗೆ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ನಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 24/11/2014 ರ ಸಂಜೆ 5 ಗಂಟೆ
* ಅರ್ಜಿಗಳನ್ನು ಆನ್ ಲೈನ್ ಮೂಲಕ www.mesco.in ಸಲ್ಲಿಸತಕ್ಕದ್ದು
* ಹೆಚ್ಚಿನ ವಿಚಾರಣೆಗಾಗಿ ಕಚೇರಿ ವಿಳಾಸ
ಮೆಸ್ಕಾಂ ಕಚೇರಿ, ಪಾರಡಿಮ್ ಪ್ಲಾಜಾ, ಎ.ಬಿ ಶೆಟ್ಟಿ ಸರ್ಕಲ್,
ಮಂಗಳೂರು 575 001
ದೂರವಾಣಿ: 0824 - 2444432

ಆರ್ಜಿ ಸಲ್ಲಿಸುವ ಮುನ್ನ ಗಮನಿಸಿ:
* ಅರ್ಜಿ ಶುಲ್ಕ Rs. 500/- for SC/ ST ಹಾಗೂ ಪ. ಜಾ./ ಪ. ಪಂ ಕ್ಕೆ ರೂ. 500/- ಮತ್ತು ಸಾಮಾನ್ಯ ಮತ್ತು ಇತರೆ ಪ್ರ - ವರ್ಗಗಳಿಗೆ ರೂ. 1,000/-.
* JPG ಸ್ವರೂಪದ, ಡಿಮಾಂಡ್ ಡ್ರಾಫ್ಟ್ ನ್ನು ಸ್ಕ್ಯಾನ್ ಪ್ರತಿ ತೆಗೆದಿರಿಸಿಕೊಳ್ಳಿ
* JPG ಸ್ವರೂಪದ ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ ಬಳಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+