ಫೆ.11ರಿಂದ ಮಂಗಳೂರಿನಿಂದ ಅಬುಧಾಬಿ ನಾನ್ ಸ್ಟಾಪ್ ವಿಮಾನಯಾನ
ಮಂಗಳೂರು, ಫೆಬ್ರವರಿ 04: ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ವಿಧಿಸಲಾಗಿದ್ದ ವಿಮಾನಯಾನ ನಿರ್ಬಂಧ ತೆರವುಗೊಂಡಿದೆ. ಮಂಗಳೂರಿನಿಂದ ಅಬುಧಾಬಿ ನಾನ್ ಸ್ಟಾಪ್ ವಿಮಾನಯಾನ ಆರಂಭಿಸಿರುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಕಟಿಸಿದೆ.
ಫೆಬ್ರವರಿ 11ರಿಂದ ವಿಮಾನಯಾನ ಆರಂಭವಾಗಲಿದ್ದು, ವಾರದಲ್ಲಿ ನಾಲ್ಕು ದಿನಗಳ ಬದಲಿಗೆ ವಾರದಲ್ಲಿ ಒಮ್ಮೆ ಗುರುವಾರದಂದು ಮಾತ್ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹೊರಡಲಿದೆ.
ಮಂಗಳೂರಿನಿಂದ IX1815 ವಿಮಾನ ಸಂಜೆ 5:15ಕ್ಕೆ ಹೊರಟು ಅಬುಧಾಬಿಯನ್ನು 7:45ಕ್ಕೆ ತಲುಪಲಿದೆ.

ಇದೇ ರೀತಿ ಅಬುಧಾಬಿಯಿಂದ IX1816 ವಿಮಾನವು 8:45 pmಗೆ ಹೊರಟು ಮಂಗಳೂರನ್ನು 01:35 amಗೆ ತಲುಪಲಿದೆ. ಫೆ.11ರಿಂದ ಮಾರ್ಚ್ 23ರ ತನಕ ನಾನ್ ಸ್ಟಾಪ್ ವಿಮಾನಗಳು ಸಂಚಾರ ನಡೆಸಲಿವೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿದೆ.
ಇದಕ್ಕೂ ಮುನ್ನ ಮಂಗಳೂರಿನಿಂದ ವಾರದಲ್ಲಿ ನಾಲ್ಕು ವಿಮಾನಗಳು ಮಧ್ಯದಲ್ಲಿ ಒಂದು ನಿಲುಗಡೆಯೊಂದಿಗೆ ಅಬುಧಾಬಿ ಮತ್ತು ಮಸ್ಕತ್‌ಗೆ ಹಾರಾಟ ನಡೆಸುತ್ತಿದ್ದವು. ನಂತರ ನೇರ ವಿಮಾನಯಾನವನ್ನು ಆರಂಭವಾಯಿತು.
ಯುಎಇಯಲ್ಲಿ ಬುಧವಾರದಂದು 3,977 ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು, 12 ಮಂದಿ ಮೃತಪಟ್ಟಿರುವ ವರದಿ ಬಂದಿದೆ, 4,075 ಗುಣಮುಖರಾಗಿದ್ದಾರೆ. ಒಟ್ಟಾರೆ, 313,626 ಸೋಂಕಿತ ಪ್ರಕರಣಗಳಿದ್ದು, 289,276 ಗುಣಮುಖರಾಗಿದ್ದಾರೆ. 878 ಮಂದಿ ಅಸುನೀಗಿದ್ದಾರೆ.












Click it and Unblock the Notifications