ಸಮೀಕ್ಷೆ: ದೇಶದಲ್ಲೇ ಮಂಗಳೂರು ಜೀವನಯೋಗ್ಯ ನಗರ
ಇಡೀ ಮಂಗಳೂರು ಇಂದು ಸಂತೋಷದಿಂದ ತೇಲುತ್ತಿದೆ. ನಮ್ಮ ಮಂಗಳೂರಿಗೆ ಬಂತು ದೊಡ್ಡ ಗುಡ್ ನ್ಯೂಸ್. ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ನಮ್ಮ ಹೆಮ್ಮೆಯ ಮಂಗಳೂರಿಗೆ ಸಿಕ್ಕಿದೆ.
ಮಂಗಳೂರು, ಮಾರ್ಚ್ 26: ಇಡೀ ಮಂಗಳೂರು ಇಂದು ಸಂತೋಷದಿಂದ ತೇಲುತ್ತಿದೆ. ನಮ್ಮ ಮಂಗಳೂರಿಗೆ ಬಂತು ದೊಡ್ಡ ಗುಡ್ ನ್ಯೂಸ್. ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ನಮ್ಮ ಹೆಮ್ಮೆಯ ಮಂಗಳೂರಿಗೆ ಸಿಕ್ಕಿದೆ. ಜತೆಗೆ ಜಾಗತಿಕ ಆರೋಗ್ಯ ಸೇವೆಗಳ ಪಟ್ಟಿಯಲ್ಲೂ ಮಂಗಳೂರಿಗೆ 12ನೇ ಸ್ಥಾನ ಲಭಿಸಿದೆ.
numbeo.ಕಾಂ ವೆಬ್ ಸೈಟ್ ನಡೆಸಿದ ಸಮೀಕ್ಷೆ ಪ್ರಕಟವಾಗಿದ್ದು, ನಗರದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

ಗುಣಮಟ್ಟದ ಜೀವನ ಸಾಗಿಸಲು ಪ್ರಶಸ್ತವಾದ ತಾಣಗಳ ಪಟ್ಟಿಯಲ್ಲಿ ವಿಶ್ವದಲ್ಲಿ 41ನೇ ಸ್ಥಾನದಲ್ಲಿರುವ ಮಂಗಳೂರು, ಸ್ಯಾನ್‌ಫ್ರಾನ್ಸಿಸ್ಕೊ ನಗರವನ್ನು ಹಿಂದಿಕ್ಕಿದೆ.
ಆಸ್ಟ್ರೇಲಿಯಾದ ಕ್ಯಾನ್ ಬೆರ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆನಿಜುವೆಲಾ 143ನೆ ಹಾಗೂ ಕೊನೆ ಸ್ಥಾನದಲ್ಲಿದೆ.

ಏಷ್ಯಾದಲ್ಲಿ ಟರ್ಕಿಯ ಬುರ್ಸಾ ನಗರವನ್ನು ಹೊರತುಪಡಿಸಿದರೆ, ಮಂಗಳೂರು ಎರಡನೆ ಸ್ಥಾನದಲ್ಲಿದೆ. ಏಷ್ಯಾಮಟ್ಟದಲ್ಲಿ ದುಬೈ 9ನೆ ಸ್ಥಾನದಲ್ಲಿದ್ದರೆ ಅಬುಧಾಬಿ 5ನೆ ಅತ್ಯುತ್ತಮ ನಗರ ಎನಿಸಿಕೊಂಡಿದೆ.














Click it and Unblock the Notifications