LIVE: ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕ ಸಾವು

ಮಂಗಳೂರು, ಮೇ 30: ಕರಾವಳಿಯ ಸುಂದರ ನಗರಿ ಮಂಗಳೂರಿನಲ್ಲಿ ಕಳೆದ ಒಂದು ದಿನದಿಂದ ಎಡಬಿಡದೆ ಮಳೆ ಸುರಿಯುತ್ತಲೇ ಇದೆ.

ರಾಜ್ಯಕ್ಕೆ ಮುಂಗಾರು ಆಗಮಿಸುವ ಸೂಚನೆ ಸಿಕ್ಕುತ್ತಿದ್ದಂತೆಯೇ ಆರಂಭವಾದ ಈ ಮಳೆ, 'ಮುಂಗಾರು ಮಳೆಯಷ್ಟೇ, ಸೈಕ್ಲೋನ್ ಪರಿಣಾಮವಲ್ಲ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಆದರೆ ಅರಬ್ಬಿ ಸಮುದ್ರದಲ್ಲಿ ಉಂಟಾದ ಸೈಕ್ಲೋನ್ ಚಂಡಮಾರುತದಿಂದಲೇ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ

Mangaluru rains and Mekunu cyclone Live updates

ಕರಾವಳಿ ಜನರ ನಿದ್ದೆ ಕೆಡಿಸಿರುವ ಈ ಮಳೆಗೆ ಈಗಾಗಲೇ ಮೂವರು ಬಲಿಯಾಗಿದ್ದಾರೆ, ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇಂದೂ ಸಹ ಮಳೆ ಸುರಿಯುತ್ತಲೇ ಇದ್ದು, ಮಂಗಳೂರು ಮಹಾಮಳೆಯ ಕ್ಷಣ ಕ್ಷಣದ ಅಪ್ದೇಟ್ಸ್ ಇಲ್ಲಿದೆ.

May 30, 2018, 2:09 pm IST

ಮಹಾಮಳೆಗೆ ನಿನ್ನೆ ಬಲಿಯಾದ ಮುಕ್ತಾಬಾಯಿ ಮತ್ತು ಮೋಹಿನಿ ಎಂಬುವವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ನೀಡಿದ್ದಾರೆ.
May 30, 2018, 2:07 pm IST

ನೆರೆಪೀಡಿತ ಪ್ರದೇಶಗಳಿಗೆ ಸಂಸದ ನಳೀನ್ ಕುಮಾರ್ ಕಟಿಲ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಪರಿಸ್ಥಿತಿ ಅವಲೋಕಿಸಿ, ಪರಿಹಾರದ ಭರವಸೆ ನೀಡಿದ್ದಾರೆ.
May 30, 2018, 2:02 pm IST

ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಆಗಿರುವ ಹಾನಿಯನ್ನು ಕಂಡು ನನಗೆ ಆಘಾತವಾಗಿದೆ. ನಗರ ಪ್ರದೇಶಗಳ್ಲಿ ಉಂಟಾಗಿರುವವ ಪ್ರವಾಹಗಳನ್ನು ಅತ್ಯಂತ ತುರ್ತಾಗಿ ನಿಭಾಯಿಸಬೇಕಿದೆ. ನರೇಂದ್ರ ಮೋದಿಯವರು ಹೇಳಿದಂತೆ, ನಾನು ಸಹ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ಪರಿಹಾರೋಪಾಯಗಳನ್ನೂ ಈ ಪ್ರದೇಶದಲ್ಲಿ ಕೈಗೊಳ್ಳಬೇಕೆಂದು ಕೋರುತ್ತೇನೆ- ಪಿ ಸಿ ಮೋಹನ್, ಬಿಜೆಪಿ ಸಂಸದ
May 30, 2018, 2:00 pm IST

ತಗ್ಗುಪ್ರದೇಶಗಳುಗೆ ನುಗ್ಗಿದ ನೀರಿನಿಂದಾಗಿ ಜುಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮನೆಗಳೂ ಜಲಾವೃತವಾಗಿದೆ.
May 30, 2018, 1:26 pm IST

ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಮೃತದೇಹ ಪತ್ತೆ
May 30, 2018, 1:23 pm IST

ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕರೊಬ್ಬರು ಬಲಿಯಾದ ಘಟನೆ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ಎರ್ಮಾಯ್ ಫಾಲ್ಸ್ ಗೆ ಬಿದ್ದು ಸಂತೋಷ್ ಶೆಟ್ಟಿ ಎಂಬುವವರು ಸಾವನ್ನಪ್ಪಿದ್ದಾರೆ.
May 30, 2018, 1:21 pm IST

ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ನಲ್ಲಿ ಬಿದ್ದು ಮೃತರಾಗಿದ್ದು, ಅವರ ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ.
May 30, 2018, 1:10 pm IST

ಮಳೆಗೆ ಸಿಲುಕಿ ಪರಿತಪಿಸುತ್ತಿರುವ ಯಾರೇ ಆದರೂ 1077 ಸಂಖ್ಯೆಯ ಸಹಾಯವಾಣಿಗೆ ಕರೆಮಾಡುವಂತೆ ಈಗಾಗಲೇ ಕೋರಲಾಗಿದೆ. ಹಲವು ಸಂಘಸಂಸ್ಥೆಗಳು ಸ್ವಇಚ್ಛೆಯಿಂದ ರಕ್ಷಣಾ ಕಾರ್ಯಕ್ಕೆ ಧಾವಿಸಿವೆ.
May 30, 2018, 1:10 pm IST

ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಮುನ್ನೆಚ್ಚರಿಕೆಯ ಸಲುವಾಗಿ ಶಾಲೆ-ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+