ಕುಡಿದು ಚಿತ್ತಾಗಿದ್ದ ಮಹಿಳಾ ಪೈಲಟ್, ಮಂಗಳೂರಲ್ಲಿ ತಡವಾದ ವಿಮಾನ

ಮಂಗಳೂರು, ಜನವರಿ 18 : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದ್ದು, ವಿಮಾನ ಹೊರಡುವ ಸಂದರ್ಭದಲ್ಲಿ ಮಹಿಳಾ ಪೈಲಟ್ ಒಬ್ಬರು ಕಂಠ ಪೂರ್ತಿ ಕುಡಿದು ಸಿಕ್ಕಿಬಿದಿದ್ದಾರೆ.

ಆ ಮೂಲಕ ದುಬೈಗೆ ಹೊರಟಿದ್ದ 180 ಪ್ರಯಾಣಿಕರ ರಕ್ಷಣೆ ಮಾಡಿದಂತಾಗಿದೆ. ಈ ಘಟನೆ ಜನವರಿ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಸ್ಪೈಸ್ ಜೆಟ್‌ ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್‌ ಒಬ್ಬರು ಕಂಠ ಪೂರ್ತಿ ಕುಡಿದಿದ್ದರು.

ವಿಮಾನ ಹೊರಡುವುದಕ್ಕಿಂತ ಮುಂಚೆ ನಡೆದ ಪೈಲಟ್ ಗಳ ವೈದ್ಯಕೀಯ ಪರೀಕ್ಷೆಯಲ್ಲಿ ಅತಿಯಾಗಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ 5 ಗಂಟೆ ತಡವಾಗಿ ದುಬೈ ವಿಮಾನ ಟೇಕ್‌ ಆಫ್ ಆಗಿದೆ. ಮಧ್ಯರಾತ್ರಿಯಿಂದ ಬೆಳಗಾಗುವ ತನಕ 180 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಯ್ದಿದ್ದಾರೆ.

Mangaluru - Dubai Spice Jet flight delays departure by 5 hours because of Drunken lady pilot

ಮಂಗಳೂರು-ದುಬೈ ವಿಮಾನದಲ್ಲಿ ಮಹಿಳಾ ಪೈಲಟ್ ಆಗಿದ್ದವರು ಟರ್ಕಿ ಮೂಲದವರು. ವಿಮಾನ ಹೊರಡುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಕುಡಿದಿರುವ ವಿಚಾರ ವೈದ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬದಲಿ ಪೈಲಟ್ ವ್ಯವಸ್ಥೆ ಆಗುವವರೆಗೆ ವಿಮಾನ ಹಾರಾಟಕ್ಕೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು.

ಮದ್ಯ ಸೇವನೆ ಮಾಡಿದ್ದ 35 ವರ್ಷದ ಟರ್ಕಿ ಮೂಲದ ಮಹಿಳಾ ಪೈಲಟ್‌ ವಿರುದ್ಧ ಕ್ರಮ ಜರುಗಿಸಲು ಸಂಬಂಧಪಟ್ಟ ವಿಮಾನ ಕಂಪೆನಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+