ಮಂಗಳೂರು ಡ್ರಗ್ಸ್ ಕೇಸಲ್ಲಿ ಅನುಶ್ರೀ ಹೆಸರು ಕೈ ಬಿಟ್ಟರೇ ಪೊಲೀಸರು?

ಬೆಂಗಳೂರು, ಸೆ. 09: ಕರ್ನಾಟಕದ ಮನೆ ಮಾತನಾಗಿರುವ ಟಿವಿ ನಿರೂಪಕಿ ಕಂ ನಟಿ ಅನುಶ್ರೀ ಮಾದಕ ವಸ್ತು ಸೇವನೆ ಮಾತ್ರವಲ್ಲ, ಅದನ್ನು ಸಾಗಾಟ ಮಾಡುತ್ತಿದ್ದಳು. 2007-08 ರಲ್ಲೇ ಎಕ್ಸೆಟೆಸಿ ಸಿಂಥೆಟಿಗ್ ಡ್ರಗ್ಸ್‌ನ್ನು ಅನುಶ್ರೀ ತನ್ನ ಗೆಳೆಯರ ಜತೆ ಸೇವನೆ ಮಾಡಿದ್ದಾಳೆ ಎಂಬುದು ಮಂಗಳೂಡು ಡ್ರಗ್ಸ್ ಪ್ರಕರಣದ ಎರಡನೇ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಲ್ಲಿ ಬಹಿರಂಗಗೊಂಡಿದೆ.

ಅನುಶ್ರೀ ತನ್ನ ಗೆಳೆಯ ತರುಣ್ ಜತೆ ಸೇರಿ ರೂಮಿನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಘಟನೆಗಳನ್ನು ಕಿಶೋರ್ ಅಮನ್ ಶೆಟ್ಟಿ ಉಲ್ಲೆಖಿಸಿ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ವಿಚಾರಣೆ ನಡೆಸಿದ್ದ ಮಂಗಳೂರು ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ಅನುಶ್ರೀ ಅವರ ಹೆಸರನ್ನು ಕೈ ಬಿಟ್ಟಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಸ್ಯಾಂಡಲ್ ವುಡ್ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿಯೇ ಮಂಗಳೂರು ಪೊಲೀಸರು ಕೂಡ ಡ್ರಗ್ ಜಾಲವನ್ನು ಪತ್ತೆ ಮಾಡಿದ್ದರು. ಅದು ಕೂಡ ಬೆಳ್ಳಿತೆರೆ ಹಾಗೂ ಕಿರಿತೆರೆಯ ಸೆಲಿಬ್ರಿಟಿಗಳ ಕೊರಳಿಗೆ ಉರುಳಾಗಿತ್ತು. ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ನಟಿ ಕಂ ನಿರೂಪಕಿ ಅನುಶ್ರೀ ವಿಚಾರಣೆ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ವಿಚಾರಣೆ ಎದುರಿಸಿದ್ದ ಅನುಶ್ರೀ ಕಣ್ಣೀರು ಹಾಕಿದ್ದರು.

Mangaluru drug case: TV Anchor Anushree drug history exposed by by prime accused

ಮಂಗಳೂರು ಪೊಲೀಸರು ದಾಖಲಿಸರು ದಾಖಲಿಸಿರುವ ಡ್ರಗ್ ಪ್ರಕರಣದಲ್ಲಿ ಅನುಶ್ರೀ ಹೆಸರನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ನೀಡಿರುವ ಹೇಳಿಕೆ ಹಾಗೂ ಅದನ್ನು ಉಲ್ಲೇಖಿಸಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅನುಶ್ರೀ ಡ್ರಗ್ ಸೇವನೆಯ ಇತಿಹಾಸ ಬೆಚ್ಚಿ ಬೀಳಿಸುತ್ತದೆ.

2007 ರಲ್ಲಿ ಖಾಸಗಿ ವಾಹಿನಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ನಡೆಯುತ್ತಿತ್ತು. ಮಂಗಳೂರು ಮೂಲದ ಕೊರಿಯೋಗ್ರಾಫರ್ ತರುಣ್ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅನುಶ್ರೀ ಅವರಿಗೆ ತರುಣ್ ಆಪ್ತ ಗೆಳೆಯನಾಗಿ ಗುರುತಿಸಿಕೊಂಡಿದ್ದ. ತರುಣ್ ಆಪ್ತ ಸ್ನೇಹಿತನಾಗಿದ್ದ ಕಿಶೋರ್ ಅಮನ್ ಶೆಟ್ಟಿಗೆ ಅನುಶ್ರೀಯನ್ನು ಸ್ವತಃ ಪರಿಚಯಿಸಿದ್ದನಂತೆ. ಅಲ್ಲದೇ ಅನುಶ್ರೀಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಲು ತರುಣ್ ಮನವಿ ಮಾಡಿದ ಮೇರೆಗೆ ಇಬ್ಬರೂ ಸಹ ಕೊರಿಯೋಗ್ರಫಿ ಮಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಅನುಶ್ರೀ ವಿಜಯಶಾಲಿಯಾಗಿದ್ದಳು. ಈ ಸಮಯದಲ್ಲಿ ತರುಣ್ ಮತ್ತು ಅನುಶ್ರೀ ಮತ್ತು ನಾನು ಎಲ್ಲರೂ ಒಂದೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೆವು. ಈ ವೇಳೆ ಅನುಶ್ರೀ ಮತ್ತು ನಾವು ಎಕ್ಸೆಟೆಸಿ ಡ್ರಗ್ ಫಿಲ್ ಸೇವನೆ ಮಾಡುತ್ತಿದ್ದೆವು. ಕೆಲವು ದಿನ ತರುಣ್ ಮತ್ತು ಅನುಶ್ರೀ ಇಬ್ಬರೇ ಇರುತ್ತಿದ್ದರು ಎಂದು ಕಿಶೋರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ.

ಅನುಶ್ರೀ ರಿಯಾಲಿಟಿ ಶೋನಲ್ಲಿ ಗೆದ್ದಿದ್ದರಿಂದ ಬೆಂಗಳೂರಿನಲ್ಲಿ ಪಾರ್ಟಿ ಮಾಡಿದ್ದು, ಮದ್ಯಪಾನ ಹಾಗೂ ಮಾದಕ ವಸ್ತು ಸೇವನೆ ಮಾಡಿದ್ದೇವೆ. ಮಾದಕ ವಸ್ತುವನ್ನು ಅನುಶ್ರೀಯೇ ಖರೀದಿ ಮಾಡಿರುತ್ತಾರೆ. ಅನುಶ್ರೀ ಅವರಿಗೆ ಕೊರಿಯೋಗ್ರಫಿ ಮಾಡುವ ಸಮಯದಲ್ಲಿ ನಾವೆಲ್ಲರೂ ಎಕ್ಸೆಟೆಸಿ ಮಾತ್ರೆಗಳನ್ನು ಸೇವನೆ ಮಡಿರುತ್ತೇವೆ. ಎಕ್ಸೆಟೆಸಿ ಫಿಲ್ಸ್ ಮಾತ್ರೆಗಳನ್ನು ಅನುಶ್ರೀ ಅವರೇ ಖರೀದಿಸಿ ನಮಗೆ ನೀಡುತ್ತಿದ್ದಳು. ಈ ಮಾತ್ರೆ ತಿಂದರೆ ಹೆಚ್ಚು ಶಕ್ತಿ ಬರುತ್ತದೆ. ಸುಲಭವಾಗಿ ಡಾನ್ಸ್ ಮಾಡಬಹುದು ಎಂದು ಪ್ರೋತ್ಸಾಹಿಸುತ್ತಿದ್ದಳು. ಹೀಗಾಗಿ ಕೊರಿಯೋಗ್ರಫಿ ತಯಾರಿ ವೇಳೆ ಅನೇಕ ಬಾರಿ ಅನುಶ್ರೀ ಮತ್ತು ನಾವು ಎಕ್ಸೆಟೆಸಿ ಮಾತ್ರೆ ಸೇವನೆ ಮಾಡಿದ್ದೇವೆ. ಡ್ರಗ್ ಪೆಡ್ಲರ್‌ಗಳ ನೇರ ಸಂಪರ್ಕ ಅನುಶ್ರೀಗೆ ಇದೆ. ಅವರೇ ಅತಿ ಸುಲಭವಾಗಿ ಎಕ್ಸೆಟೆಸಿ ಮಾದಕ ವಸ್ತುಗಳನ್ನು ತರಿಸುತ್ತಿದ್ದರು. ಆದರೆ ಆ ಡ್ರಗ್ ಪೆಡ್ಲರ್‌ಗಳು ಯಾರು ಎಂದು ನನಗೆ ಗೊತ್ತಿಲ್ಲ ಎಂದು ಮಂಗಳೂರು ಡ್ರಗ್ ಕೇಸಿನ ಎರಡನೇ ಆರೋಪಿ ಕಿಶೋರ್ ಅಮನ್ ಶೆಟ್ಟಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

Mangaluru drug case: TV Anchor Anushree drug history exposed by by prime accused

ಎರಡು ವರ್ಷದ ಹಿಂದೆ ನನ್ನ ಡಾನ್ಸ್ ಪಾರ್ಟ್ನರ್ ತರುಣ್ ಮಂಗಳೂರಿನ ಬಜ್ಪೆಯಲ್ಲಿ ಕ್ರೂಸ್ ಇನ್ ಕ್ರೂ ಡಾನ್ಸ್ ಕ್ಲಾಸ್ ಆರಂಭಿಸಿದ್ದು, ಅನುಶ್ರೀ ಅವರು ಅದರ ಉದ್ಘಾಟನೆಗೆ ಬಂದಿರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ಫಂಕ್ಷನ್ ಇಟ್ಟುಕೊಂಡಿರಲಿಲ್ಲ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದು, ಮಂಗಳೂರು ಪೊಲೀಸರು ಉಲ್ಲೇಖಿಸಿರುವ ದೋಷಾರೋಪ ಪಟ್ಟಿಯಲ್ಲಿನ ಆ ಪುಟ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಕೂಡ ವೈರಲ್ ಆಗಿದೆ.

ದೋಷಾರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಇಲ್ಲ: ಇನ್ನು ಮಂಗಳೂರು ಪೊಲೀಸರು ದಾಖಲಿಸಿರುವ ಡ್ರಗ್ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಅದರಲ್ಲಿ ಅನುಶ್ರೀ ಹೆಸರು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಬ್ಬ ಆರೋಪಿ ಹೇಳಿದ ಕೂಡಲೇ ಮತ್ತೊಬ್ಬರನ್ನು ಅರೋಪಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತದೆ ಕಾನೂನು. ಆದರೆ, ಒಬ್ಬ ಆರೋಪಿ ನೀಡಿದ ಹೇಳಿಕೆ ಸಂಬಂಧ ಸಾಂದರ್ಭಿಕ ಸಾಕ್ಷ್ಯಾಧಾರಗಳು ಲಭ್ಯವಾದರೆ ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆರೋಪಿ ಉಲ್ಲೇಖಿಸಿದ ಆರೋಪಿಯನ್ನು ಸಹ ಆರೋಪಿಯನ್ನಾಗಿ ಮಾಡಬೇಕಾಗುತ್ತದೆ. ಕಿಶನ್ ಅಮಾನ್ ಶೆಟ್ಟಿ ನೀಡಿರುವ ಹೇಳಿಕೆಗೂ ನಡೆದ ಘಟನಾವಳಿಗಳಿಗೆ ಸ್ವಾಮ್ಯತೆ ಇದ್ದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅನುಶ್ರೀ ಅವರ ಹೆಸರನ್ನು ಕೈ ಬಿಟ್ಟರೇ? ಇಲ್ಲವೇ ಕಿಶನ್ ಅಮಾನ್ ಶೆಟ್ಟಿ ದುರುದ್ದೇಶ ಪೂರ್ವಕವಾಗಿ ಅನುಶ್ರೀ ಹೆಸರನ್ನು ಪ್ರಸ್ತಾಪಿಸಿದ ಎಂಬುದು ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗೊತ್ತು !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+