• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ದಸರಾ: ಕುಮಾರಸ್ವಾಮಿ, ದೇವೇಗೌಡರನ್ನು ಕೊಂಡಾಡಿದ ಜನಾರ್ಧನ ಪೂಜಾರಿ

|
   ಮಂಗಳೂರು ದಸರಾವನ್ನ ಉದ್ಘಾಟಿಸಿದ ಎಚ್ ಡಿ ಕೆ | ಗೌಡ್ರನ್ನ ಹಾದಿ ಹೊಗಳಿದ ಪೂಜಾರಿ | Oneindia Kannada

   ಮಂಗಳೂರು, ಅಕ್ಟೋಬರ್. 15: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ (ಅ.14) ಉದ್ಘಾಟಿಸಿದರು.

   ಉದ್ಘಾಟನೆಯ ನಂತರ ಮಾತನಾಡಿದ ಕುಮಾರಸ್ವಾಮಿ, ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ. ದಸರಾ ಉತ್ಸವವನ್ನು ಉದ್ಘಾಟಿಸಬೇಕೆಂದು ಜನಾರ್ಧನ ಪೂಜಾರಿ ಕೇಳಿದಾಗ ಅವರ ಮಾತಿಗೆ ಗೌರವ ಕೊಟ್ಟು ಒಪ್ಪಿಕೊಂಡೆ. ಈ ಕ್ಷೇತ್ರದ ದೇವರ ಮೇಲೆ ನನಗೆ ಅಪಾರ ಭಕ್ತಿ.

   ನೋಡ ಬನ್ನಿ ನವದುರ್ಗೆಯರ ನಮಿಸುವ ಮಂಗಳೂರು ದಸರಾ

   ಕೆಲವರು ನವರಾತ್ರಿ, ದಸರಾ ಉತ್ಸವಕ್ಕೆ ಅಷ್ಟು ಬೇಕು, ಇಷ್ಟು ಬೇಕು ಎಂದು ಕೇಳುತ್ತಾರೆ. ಆದರೆ ಮಂಗಳೂರು ದಸರಾವನ್ನು ಯಾವುದೇ ಅನುದಾನ ಪಡೆಯದೇ ನಡೆಸುತ್ತಿರೋದು ಆಶ್ಚರ್ಯಕರ. ಮಂಗಳೂರು ದಸರಾ ವಿಶೇಷವಾಗಿದ್ದು, ಇದು ಜನತಾ ಉತ್ಸವ, ಜನತಾ ದಸರಾವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

   ಮೈಸೂರು ದಸರಾ - ವಿಶೇಷ ಪುರವಣಿ

   ದ.ಕ.‌ಜಿಲ್ಲೆಯಲ್ಲಿ ನಾನು ಬಡವರನ್ನೂ ಕಂಡಿದ್ದೇನೆ, ಶ್ರೀಮಂತರನ್ನೂ ಕಂಡಿದ್ದೇನೆ. ಆದರೆ ಜನರೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಮುಂದೆ ಓದಿ...

    ಜನಾರ್ಧನ ಪೂಜಾರಿಯವರ ಮೇಲೆ ವಿಶೇಷ ಗೌರವ

   ಜನಾರ್ಧನ ಪೂಜಾರಿಯವರ ಮೇಲೆ ವಿಶೇಷ ಗೌರವ

   ಜನಾರ್ಧನ ಪೂಜಾರಿಯವರ ಮೇಲೆ ನನಗೆ ವಿಶೇಷ ಗೌರವವಿದೆ. ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಕೊಡುಗೆ ನೀಡಿದರು. ನಾನು ಕಂಡ ಪ್ರಾಮಾಣಿಕ ರಾಜಕಾರಣಿ ಜನಾರ್ಧನ ಪೂಜಾರಿ ಎಂದು ಶ್ಲಾಘಿಸಿದರು.

    ದೇವೇಗೌಡರನ್ನು ನೆನೆದ ಪೂಜಾರಿ

   ದೇವೇಗೌಡರನ್ನು ನೆನೆದ ಪೂಜಾರಿ

   ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ, ಮುಖ್ಯಮಂತ್ರಿ ಕುಮಾರಸ್ವಾಮಿ ದಸರಾ ಉದ್ಘಾಟಿಸಿದ್ದರಿಂದ ಎಂದಿಗೂ ಸಿಗದಂತಹ ತೃಪ್ತಿ ನನಗಿಂದು ದೊರಕಿದೆ. ದೇವೇಗೌಡರು ಎಲ್ಲಿ ನೋಡಿದರೂ ನನ್ನನ್ನು ಗುರುಗಳೇ ಅನ್ನುತ್ತಿದ್ದರು. ಕುದ್ರೋಳಿ ಕ್ಷೇತ್ರ ನಿರ್ಮಾಣವಾದ ಪರಿಯ ಬಗ್ಗೆ ಹೊಗಳುತ್ತಿದ್ದರು ಎಂದು ನೆನಪಿಸಿಕೊಂಡರು.

   ಮೌನಕ್ಕೆ ಶರಣಾದ ಜನಾರ್ಧನ ಪೂಜಾರಿ: ಇದು ರಾಜಕೀಯ ನಿವೃತ್ತಿ ಸೂಚನೆಯೇ?

    ಮುಂದೊಂದು ದಿನ ಭಾರತದ ರಾಷ್ಟ್ರಪತಿ

   ಮುಂದೊಂದು ದಿನ ಭಾರತದ ರಾಷ್ಟ್ರಪತಿ

   ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಅದು ಪೂರ್ವಜನ್ಮದ ಪೂರ್ವಜರ ಪುಣ್ಯದಿಂದ ಸಾಧ್ಯ. ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಅವರಲ್ಲಿ ಸಹನೆ, ವಿನಯ ಇದೆ. ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ದೊಡ್ಡದು. ದೇವೇಗೌಡರೇ, ನಿಮ್ಮ ಮಗ ನಮ್ಮ ದೇವಳಕ್ಕೆ ಬಂದು ದೇವರಿಗೆ ಕೈಮುಗಿದರು.

   ಕುಮಾರಸ್ವಾಮಿಯವರಲ್ಲಿ ನಾನು ವಿಶೇಷತೆ‌ಯನ್ನು ಕಂಡಿದ್ದೇನೆ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ ಎಂದು ಭವಿಷ್ಯ ನುಡಿದರು. ಕುಮಾರಸ್ವಾಮಿ ರಾಷ್ಟ್ರಪತಿ ಆಗುವಾಗ ನಾನು ಇರಲ್ಲ. ಆದರೆ, ರಾಷ್ಟ್ರಪತಿಯಾದಾಗ ದೇವರ ಸಮ್ಮುಖದಲ್ಲಿ ಪೂಜಾರಿ ಹೇಳಿದ ಎಂದು ನೆನಪಿಸಿಕೊಳ್ಳಿ ಎಂದು ತಿಳಿಸಿದರು.

    ಜನಾರ್ಧನ ಪೂಜಾರಿಯಿಂದ ಬೈಸಿಕೊಳ್ಳುವ ಅಸೆ

   ಜನಾರ್ಧನ ಪೂಜಾರಿಯಿಂದ ಬೈಸಿಕೊಳ್ಳುವ ಅಸೆ

   ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಜೀವನದಲ್ಲಿ ಒಮ್ಮೆಯಾದರೂ ಜನಾರ್ಧನ ಪೂಜಾರಿಯಿಂದ ಬೈಸಿಕೊಳ್ಳೋ ಅಸೆಯಿದೆ. ಅವರು ಬೈದಲ್ಲಿ ಆಶೀರ್ವಾದ ನೀಡಿದಂತೆ ಎಂದು ಅಭಿಪ್ರಾಯ ಪಟ್ಟರು. ಅದ್ಭುತ ದಸರಾ ಉತ್ಸವವೆಂದರೆ ಮಂಗಳೂರು ದಸರಾ.

   ಜಗತ್ತಿನಲ್ಲಿದ್ದ ಆಧುನಿಕ ಬ್ರಹ್ಮನೆಂದು ನಾರಾಯಣಗುರು ಗುರುತಿಸಿಕೊಂಡಿದ್ದರು. ನಾರಾಯಣಗುರುಗಳ ಆದರ್ಶ ಪ್ರತಿಪಾದಿಸುವ ವ್ಯಕ್ತಿಯೆಂದರೆ ಜನಾರ್ಧನ ಪೂಜಾರಿ ಎಂದು ಪ್ರಶಂಸಿಸಿದರು.

   ಕಾರ್ಯಕ್ರಮಕ್ಕೂ ಮುನ್ನ ಜನಾರ್ಧನ ಪೂಜಾರಿ ಸಿಎಂ ಕುಮಾರಸ್ವಾಮಿಗೆ ಸ್ವಾಗತ ಕೋರಲು ದೇವಾಲಯದ ಹೊರಗೆ ಮಳೆಯಲ್ಲಿ ಕೊಡೆಹಿಡಿದು ಕಾದು ಕುಳಿತಿದ್ದರು.

   ನವರಾತ್ರಿ ಆರಂಭವಾಗುತ್ತಿದ್ದಂತೆ ತುಳುನಾಡಲ್ಲಿ ಪಿಲಿಗಳ ದರ್ಬಾರ್ ಶುರು

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mangaluru Dasara festival inaugurate in Kudroli Gokarna natheshwara temple by Chief minister HD Kumaraswamy
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more