ಮಂಗಳೂರಿನ ಕೊಡಿಯಾಲ್ ಗುತ್ತು ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ
ಮಂಗಳೂರು, ಫೆಬ್ರವರಿ 26 : ನಗರದ ಕೊಡಿಯಾಲ್ ಗುತ್ತು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಪಾರ್ಟ್ ಮೆಂಟ್ ಫ್ಲಾಟ್ ವೊಂದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಫ್ಲಾಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಗರದ ಅಡ್ಯಾರ್ ಪದವು ನಿವಾಸಿ ರಿಯಾಜ್ ಅಹಮ್ಮದ್ (35) ಹಾಗೂ ಮತ್ತೊಬ್ಬ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತರಿಂದ 1800 ರೂಪಾಯಿ ನಗದು, ಮೊಬೈಲ್ ಫೋನ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಮಹಿಳೆಯು ಫ್ಲಾಟ್ ನಲ್ಲಿ ವಾಸ್ತವ್ಯವಿದ್ದು, ಯುವತಿಯರನ್ನು ಈ ಫ್ಲಾಟ್ ನಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ದಾಳಿ ಸಂದರ್ಭದಲ್ಲಿ ಫ್ಲಾಟ್ ನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಕ್ಷಿಸಲಾಗಿದೆ.












Click it and Unblock the Notifications