Mangaluru-Bengaluru Highway: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌

Mangaluru-Bengaluru National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ಆಗುತ್ತಿದೆ. ಈಗಾಗಲೇ ಹಲವು ಉದ್ಘಾನೆ ಹಂತದಲ್ಲಿದ್ದರೆ, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಈ ನಡುವೆಯೇ ಕೆಲ ಸಮಸ್ಯಗಳು ಕೂಡ ಎದುರಾಗುತ್ತಿವೆ. ಇದೀಗ ಸದ್ಯ ಕಾರ್ಯಾಚರಣೆಯಲ್ಲಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದೆ. ಹಾಗಾದ್ರೆ ಯಾವ ಭಾಗದಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಯಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆದ್ದಾರಿಗಳು ಆಗುತ್ತಿವೆ. ಈಗಾಗಾಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾನೆಯಾಗಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಇನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಹೊಸ್ತಿಲಲ್ಲಿದೆ. ಕೆಲವೆ ತಿಂಗಳುಗಳಲ್ಲಿ ಇದು ಕೂಡ ಉದ್ಘಾಟನೆ ಆಗಲಿದ್ದು, ಇದು ಕೂಡ ವಾಹಸನ ಸಂಚಾರಕ್ಕೆ ಮುಕ್ತವಾಗಲಿದೆ. ಈ ನಡುವೆಯೇ ಈಗಿರುವ ಹಲವು ಹದ್ದಾರಿಗಳಲ್ಲಿ ಕಾರಣಾಂತಗಳಿಂದ ಸಮಸ್ಯೆಗಳ ಸರಮಾಲೆಯೇ ಉದ್ಭವವಾಗುತ್ತಿವೆ.

Mangaluru-Bengaluru National Highway Closed in This Part

ಇದೀಗ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ಬಂದ್‌ ಆದ ಘಟನೆ ನಡೆದಿದೆ. ಗುಡ್ಡ ಕುಸಿದ ಪರಿಣಾಮ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಆಗಿದೆ. ಮಳೆಗಾಲ ಬಂತೆಂದರೆ ಸಾಕು ಇಲ್ಲಿ ಈ ಗೋಳು ಇದ್ದಿದ್ದೇ ಎನ್ನುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕೊಡಿ ಎಂದು ಸ್ಥಳೀಯರು ಮೊದಲಿನಿಂದಲೂ ಅಧಿಕಾರಿಗಳಿಗೆ ಆಗ್ರಹಿಸುತ್ತಲಿದ್ದಾರೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಇಂದು ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಹೆದ್ದಾರಿಗೆ ಮಣ್ಣು ಬಿದ್ದು ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಇದುವರೆಗೂ ಮಣ್ಣು ತೆರವು ಕಾರ್ಯ ಆರಂಭಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಹೆದ್ದಾರಿಗೆ ಮಣ್ಣು ಬೀಳುತ್ತಿದೆ. ಆದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿ ಸ್ಥಳೀಯರು ಹಾಗೂ ಈ ಭಾಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

ವಾಹನ ಸವಾರರು ಹುಡುಕಿಕೊಂಡ ಪರ್ಯಾಯ ದಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ವಾಹನಗಳು ಮುಂದೆ ಹೋಗಲಾಗದೇ ನಿಂತಲ್ಲೇ ನಿಂತಿದ್ದು, ಇದರಿಂದ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಸಂಭವಿಸಿದೆ. ಬಳಿಕ ಬೇರೆ ಯಾವುದೇ ದಾರಿಯಿಲ್ಲದೆ, ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುತ್ತಿವೆ.

ಸ್ಥಳಕ್ಕೆ ನೆಲ್ಯಾಡಿ ಹೋರಾಟಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಕಳೆದ ವಾರವೂ ಇಲ್ಲಿ ಮಣ್ಣು ಕುಸಿದು ಮೂರು ಗಂಟೆಗಳ ಕಾಲ ಹೆದ್ದಾರಿ ಬಂದ್‌ ಆಗಿತ್ತು. ಮಳೆಗಾಲ ಆರಂಭವಾದ ನಂತರ ಇಲ್ಲಿ ಐದಾರು ಬಾರಿ ಮಣ್ಣು ಕುಸಿದಿದೆ. ಹೆದ್ದಾರಿ ಚತುಷ್ಪಥಗೊಳಿಸುವಾಗ ಗುಡ್ಡವನ್ನು ಲಂಬವಾಗಿ ಕತ್ತರಿಸಿದ್ದೇ ಈ ಅವಾಂತರಕ್ಕೆ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅದೇನೇ ಇರ್ಲಿ ಇಲ್ಲಿ ಪದೇ ಪದೇ ಮಣ್ಣು ಬಿದ್ದು ಸಂಭವಿಸುತ್ತಿರುವ ಅವಾಂತರಕಗಕೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸಮಸ್ಯೆಯನ್ನು ಸರಿದೂಗಿಸಿ ಎನ್ನುವುದೇ ಇಲ್ಲಿನ ಸ್ಥಳೀಯರ ಒತ್ತಾಯ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+