ಮಂಗಳೂರು: ಮಿಲಾಗ್ರಿಸ್ ಕಾಲೇಜ್ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿದವ ಅಂದರ್

ಮಂಗಳೂರು, ಅಕ್ಟೋಬರ್. 25: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದ ವಿದ್ಯಾರ್ಥಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲ ಮೈಕಲ್ ಸಾಂತುಮಾಯಾರ್ ಅವರ ಮೇಲೆ ಇತ್ತೀಚೆಗೆ ಶಾಹ್‌ನವಾಝ್ ಹಲ್ಲೆ ನೆಡಸಿದ್ದ.

ಶಾಹ್‌ನವಾಝ್ ನನ್ನು ಸೋಮವಾರ ಬಂದರು ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಂ ನೇತೃತ್ವದಲ್ಲಿ ಸೋಮವಾರ ಸಂಜೆ ಐದು ಗಂಟೆಗೆ ನಗರದ ಪಂಪ್ ವೆಲ್ ನಲ್ಲಿ ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಪಾಂಡೇಶ್ವರದ ನಿವಾಸಿ ಮೊಹ್ಮದ್ ಶಾಹ್‌ನವಾಝ್ ಎಂದು ಗುರುತಿಸಲಾಗಿದ್ದು. ಈತ ಮಿಲಾಗ್ರಿಸ್ ಕಾಲೇಜಿನ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Mangaluru: Assault on college principal- culprit Mohammed Shahnawaz arrested

ಆಗಿದ್ದೇನು? : ಶಾಹ್‌ನವಾಝ್ ಅಕ್ಟೋಬರ್ 20ರಂದು ಕಾಲೇಜಿನ ಹಾಜರಾತಿ ವಿಷಯಕ್ಕೆ ಸಂಬಂಧಿಸಿ ಕರ್ತವ್ಯದಲ್ಲಿದ್ದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಪ್ರಾಂಶುಪಾಲರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಗೆ ಸಂಬಂಧಿಸಿ ಕ್ರಿಸ್ತ ಸಂಘಟನೆಗಳಿಂದ ಖಂಡನೆಗಳು ವ್ಯಕ್ತವಾಗಿದ್ದವು. ಮಾತ್ರವಲ್ಲದೆ, ವಿದ್ಯಾರ್ಥಿಯ ಬಂಧನಕ್ಕೆ ಮಿಲಾಗ್ರಿಸ್ ಕಾಲೇಜಿನ ಆಡಳಿತ ಮಂಡಳಿಯ ಒತ್ತಾಯ ಕೇಳಿಬಂದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+