ಮಂಗಳೂರು : ವಿಮಾನ ನಿಲ್ದಾಣದಲ್ಲಿ 2 ಪಾರ್ಕಿಂಗ್ ಬೇಸ್ ನಿರ್ಮಾಣ

ಮಂಗಳೂರು, ಜೂ.10 : ಮಂಗಳೂರಿನ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಎರಡು ವಿಮಾನಗಳ ಪಾರ್ಕಿಂಗ್ ವ್ಯವಸ್ಥೆಗಾಗಿ 3.50 ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, 2 ತಿಂಗಳುಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಸದ್ಯ, ವಿಮಾನ ನಿಲ್ದಾಣದಲ್ಲಿ 6 ವಿಮಾನಗಳ ಪಾರ್ಕಿಂಗ್‌ಗೆ ವ್ಯವಸ್ಥೆಇದೆ. ತುರ್ತಾಗಿ ಹೆಚ್ಚುವರಿ ಎರಡು ವಿಮಾನಗಳ ಪಾರ್ಕಿಂಗ್ ವ್ಯವಸ್ಥೆಯ ಅವಶ್ಯಕತೆ ಇತ್ತು. 2 ಹೊಸ ಏರೋ ಬ್ರಿಜ್‌ಗಳನ್ನು ಅಳವಡಿಸುವ 8 ಕೋಟಿ ರೂ.ಗಳ ಯೋಜನೆ ಅನುಷ್ಠಾನವಾಗಬೇಕಾದರೆ, ಈ ಎರಡು ಪಾರ್ಕಿಂಗ್ ವ್ಯವಸ್ಥೆ ಪೂರ್ಣಗೊಳ್ಳಬೇಕಾಗಿದೆ. [24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

mangaluru

ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ 6 ವಿಮಾನಗಳು ಹಾಗೂ ಹಳೆ ನಿಲ್ದಾಣದಲ್ಲಿ 3 ವಿಮಾನಗಳ ನಿಲುಗಡೆಗೆ ಅವಕಾಶ ಇದೆ. ಇನ್ನೆರಡು ವಿಮಾನಗಳ ಪಾರ್ಕಿಂಗ್ ವ್ಯವಸ್ಥೆಗಾಗಿ ಯೋಜನೆ ಸಿದ್ಧಪಡಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಇದಕ್ಕೆ ಪ್ರಾಧಿಕಾರ ಒಪ್ಪಿಗೆ ನೀಡಿದೆ. [ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ]

ಏರೋ ಬ್ರಿಜ್ ವ್ಯವಸ್ಥೆ : ಕೆಂಜಾರಿನ ನೂತನ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಪ್ರಯಾಣಿಕರು ನೇರವಾಗಿ ಟರ್ಮಿನಲ್ ಕಟ್ಟಡಕ್ಕೆ ಬರುವ ಹವಾನಿಯಂತ್ರಿತ ಏರೋ ಬ್ರಿಜ್ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ. ಇಂಡೋನೇಶಿಯಾದಿಂದ 2 ಏರೋ ಬ್ರಿಜ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಇನ್ನೆರಡು ಏರೋ ಬ್ರಿಜ್‌ ಆವಶ್ಯಕತೆ ಇದೆ. ಏರೋ ಬ್ರಿಜ್ ಅಳವಡಿಸಿಕೊಳ್ಳಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮೋದನೆ ನೀಡಿದ್ದು, ಇದಕ್ಕೂ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಎರಡು ವಿಮಾನ ಪಾರ್ಕಿಂಗ್ ಅಳವಡಿಸದಿದ್ದರೆ, ಈ ಏರೋ ಬ್ರಿಡ್ಜ್‌ಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+