ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಲ್ಲದಿರಿ, ಆಯಾಸ ಪಡದಿರಿ

ಮಂಗಳೂರು, ಜುಲೈ. 22 : ರೈಲ್ವೆ ಟಿಕೆಟ್ ಗಾಗಿ ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಸ್ಮಾರ್ಟ್ ಕಾರ್ಡ್ ಪಡೆದು ನಮಗೆ ಬೇಕಾದಷ್ಟು ಹಣ ರಿಚಾರ್ಜ್ ಮಾಡಿದರೆ ಸಾಕು. ನಮಗೆ ಅಗತ್ಯವೆನಿಸಿದಾಗ ಎಟಿಎಂ ಮಾದರಿಯಲ್ಲಿರುವ ಮೆಷಿನ್ ನಲ್ಲಿ ರೈಲ್ವೆ ಟಿಕೆಟ್ ಪಡೆದು ಆರಾಮವಾಗಿ ಪ್ರಯಾಣ ಬೆಳೆಸಬಹುದು. ಇನ್ನು ಮುಂದೆ ಯಾವುದೇ ಆಯಾಸವಿಲ್ಲದೇ ಪ್ರಯಾಣದ ಖುಷಿಯನ್ನು ಅನುಭವಿಸಬಹುದು.

ಮಂಗಳೂರು ರೈಲ್ವೆ ನಿಲ್ದಾಣ ಸೇರಿದಂತೆ ಪಾಲ್ಘಾಟ್ ಡಿವಿಷನ್ ನ ಒಟ್ಟು 19 ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ವೆಂಡಿಂಗ್ ಮೆಶಿನ್ ಅಳವಡಿಸಲಾಗಿದೆ. ಮಂಗಳೂರಿನ ಸೆಂಟ್ರಲ್ ಬಳಿ ಇರುವ 2 ಮೆಷಿನ್ ಗಳು ಈಗಾಗಲೇ ಕಾರ್ಯರಂಭ ಮಾಡಿದ್ದು, ಜಂಕ್ಷನ್ ನಲ್ಲಿ ಯಂತ್ರಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ.

ಮಂಗಳೂರಿನ ಮೂಲಕ ನಾನಾ ಕಡೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಇದು ಪ್ರಯೋಜನವಾಗಲಿದ್ದು, ಇದು ಮಂಗಳೂರು ಮಾತ್ರವಲ್ಲದೇ ದೇಶದ ಮಹಾನಗರಗಳಾದ ಮುಂಬಯಿ, ಕೋಲ್ಕತ್ತಾ, ದೆಹಲಿ, ಚೆನ್ನೈ, ರೈಲ್ವೆ ನಿಲ್ದಾಣಗಳಲ್ಲಿಯೂ ಈ ಯಂತ್ರ ತನ್ನ ಕಾರ್ಯ ನಿರ್ವಹಿಸುತ್ತಿದೆ.

ಏನಿದು ಸ್ಮಾರ್ಟ್ ಕಾರ್ಡ್?

ಏನಿದು ಸ್ಮಾರ್ಟ್ ಕಾರ್ಡ್?

100 ರೂ ಪಾವತಿಸಿದರೆ ರೈಲ್ವೆ ಸ್ಟೇಷನ್ ನ ಬುಕಿಂಗ್ ಆಫೀಸ್‌ನಲ್ಲಿ ಸ್ಮಾರ್ಟ್ ಕಾರ್ಡ್ ನೀಡುತ್ತಾರೆ. ಬಳಿಕ ಈ ಕಾರ್ಡ್ ಬಳಸಿ ಅಳವಡಿಸಿದ ಮೆಶಿನ್ ನಿಂದ ಪ್ರಯಾಣದ ಹೈಕ್ಲಾಸ್ ಟಿಕೆಟ್ ಸೇರಿದಂತೆ ಎಲ್ಲಾ ವರ್ಗದ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸಬಹುದು. 100 ರೂ ಸ್ಮಾರ್ಟ್ ಕಾರ್ಡ್ ಪಡೆದರೆ ಅದರಲ್ಲಿ 50 ರೂ ಠೇವಣಿ ಹಣ ಹಾಗೂ 50 ರೂ ಟಿಕೆಟ್ ಪಡೆದುಕೊಳ್ಳಬಹುದು.

ಇದರ ವ್ಯಾಲಿಡಿಟಿ ಎಷ್ಟು?

ಇದರ ವ್ಯಾಲಿಡಿಟಿ ಎಷ್ಟು?

ಸ್ಮಾರ್ಟ್ ಕಾರ್ಡ್‌ನಲ್ಲಿ ಮೊತ್ತವಿಲ್ಲದಿದ್ದರೂ 6 ತಿಂಗಳ ವ್ಯಾಲಿಡಿಟಿ ಇದ್ದು, ವ್ಯಾಲಿಡಿಟಿ ಮುಗಿದ ದಿನಾಂಕದ ಒಂದು ತಿಂಗಳೊಳಗೆ ಅದರಲ್ಲಿರುವ ಮೊತ್ತ ಹಾಗೂ ಹೂಡಿದ ಹಣವನ್ನು ಹಿಂತಿರುಗಿಸಿಕೊಳ್ಳಬಹುದು. ಕಾರ್ಡ್ ಕಳೆದು ಹೋದಲ್ಲಿ ಮೊತ್ತ ಹಿಂತಿರುಗಿಸಲಾಗುವುದಿಲ್ಲ. ಕಾರ್ಡ್ ನವೀಕರಣಕ್ಕೂ ಅವಕಾಶವಿದ್ದು, ಬಳಿಕ ಅಗತ್ಯಕ್ಕನುಸಾರವಾಗಿ ಕಾರ್ಡ್ ರೀಚಾರ್ಜ್ ಮಾಡಬಹುದು.

ಕಾರ್ಡ್ ಬಳಕೆ ಹೇಗೆ?

ಕಾರ್ಡ್ ಬಳಕೆ ಹೇಗೆ?

ಎಟಿಎಂ ಮಾದರಿಯಲ್ಲೇ ಸ್ಮಾರ್ಟ್ ಕಾರ್ಡ್ ಬಳಸಿ ಅದರಲ್ಲಿರುವ ಮೊತ್ತಕ್ಕೆ ಅನುಗುನವಾಗಿ ಟಿಕೇಟ್ ಪಡೆದುಕೊಳ್ಳಬಹುದು. ಕಂಪ್ಯೂಟರ್ ಪರದೆ ಮೇಲೆ ಪ್ರಯಾಣ ಆರಂಭದ ಸ್ಥಳ, ಬೇಕಾದ ಟಿಕೆಟ್ ಗಳನ್ನು ನಮೂದಿಸಬೇಕು. ಎಲ್ಲಾ ಸೂಚನೆಗಳನ್ನು ಮೆಶಿನ್ ಕ್ರಮಾನುಕ್ರಮವಾಗಿ ನೀಡಿದ ಬಳಿಕ ಟಿಕೇಟನ್ನು ರುಜುವಾತುಪಡಿಸಿ ನೀಡುತ್ತದೆ.

ರಿಯಾಯಿತಿಯಿಲ್ಲ, ಆದರೆ ಬೋನಸ್ ಸಿಗಲಿದೆ

ರಿಯಾಯಿತಿಯಿಲ್ಲ, ಆದರೆ ಬೋನಸ್ ಸಿಗಲಿದೆ

ಸ್ಮಾರ್ಟ್ ಕಾರ್ಡ್ ನಲ್ಲಿ ರೈಲ್ವೆ ಟಿಕೆಟ್ ಪಡೆದಾಗ ಯಾವುದೇ ವಿನಾಯಿತಿ ಇರುವುದಿಲ್ಲ. ಆದರೆ ಪ್ರಯಾನ ೧೫೦ ಕಿ.ಮೀ ಗಿಂತ ಕಡಿಮೆಯಾದಲ್ಲಿ 5% ಬೋನಸ್ ಸಿಗುತ್ತದೆ.ಇದು ನಿತ್ಯ ಪ್ರಯಾಣ ಬೆಳೆಸುವವರಿಗೆ ಹೆಚ್ಚು ಉಪಯೋಗವಾಗಲಿದ್ದು, ಸ್ಮಾರ್ಟ್ ಕಾರ್ಡ್‌ಗೆ ಏಕಕಾಲಕ್ಕೆ 5000 ಕ್ಕಿಂತ ಹೆಚ್ಚು ರಿಚಾರ್ಜ್ ಮಾಡುವಂತಿಲ್ಲ.

ಎಲ್ಲೆಲ್ಲಿ ಅಳವಡಿಕೆ?

ಎಲ್ಲೆಲ್ಲಿ ಅಳವಡಿಕೆ?

ಕಾಸರಗೋಡು, ಮಂಗಳೂರು ಸೆಂಟ್ರಲ್ ಮಂಗಳೂರು ಜಂಕ್ಷನ್, ಪಯ್ಯನ್ನೂರು, ಕಣ್ಣೂರು, ತಲಶ್ಯೇರಿ, ವಡಕೈರೆ, ಕೊಯಿಲಾಂಡಿ, ಕೋಝಿಕ್ಯೊಡ್, ಕುಟ್ಟಿಪ್ಪುರ, ಅಟ್ಟಾಪ್ಪಾಲ, ಫರೂಕ್, ಪರಪ್ಪನಂಗಾಡಿ, ಪಟ್ಟಾಂಬಿ, ನಿಲಂಬೂರು, ಅಂಗಡಿಪುರ, ನಿಲ್ದಾಣಗಳಲ್ಲಿ ಮೆಶಿನ ತನ್ನ ಕಾರ್ಯವನ್ನು ಶುರು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+