ಛಾಯಾಗ್ರಾಹಕರಿಗೆ ನಾಮ: ಮೈಸೂರು ದಂಪತಿ ಅರೆಸ್ಟ್

ಮಂಗಳೂರು, ಜೂನ್ 20: ಅಮೆರಿಕದಲ್ಲಿ ಫೋಟೋಗ್ರಾಫರ್ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಸುಮಾರು 30 ಮಂದಿಯನ್ನು ವಂಚಿಸಿದ್ದ ಮೈಸೂರು ಮೂಲದ ದಂಪತಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, ಕರೆತಂದಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿಗಳಾದ ರಚನಾ ಮತ್ತು ಹರಿಚರಣ ರಾವ್ ಉದ್ಯೋಗದ ಆಮಿಷವೊಡ್ಡಿ ಸುಮಾರು 12 ಲಕ್ಷ ರೂ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಮತ್ತೊಂದು ಚೀಟ್ ಫಂಡ್: ಕೋಟ್ಯಂತರ ಪಂಗನಾಮ)

ದಂಪತಿಯಿಂದ ವಂಚನೆಗೊಳಗಾದ ನಗರದ ಅರವಿಂದ್ ಎಂಬುವವರು ಕೋರ್ಟಿನ ಮೊರೆಹೋಗಿದ್ದರ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಇಲ್ಲಿನ ಪೊಲೀಸರು ದಂಪತಿಯನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.

9 ತಿಂಗಳ ಪಾಪದ ಫಲ:

Mangalore police arrest Mysore couple for cheating photographers

ಅದೆಲ್ಲಾ ಆರಂಭವಾಗಿದ್ದು 9 ತಿಂಗಳ ಹಿಂದೆ. ಬೆಂಗಳೂರಿನ ಇನ್ಫೋಸಿಸ್ ಕಂಪನಿಯು ಅಮೆರಿಕದಲ್ಲಿ Colourworld ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆ ಯೋಜನೆಯಲ್ಲಿ ಕೆಲಸ ಮಾಡಲು ಕಂಪನಿಯು ಚೀಪ್ ಫೋಟೋಗ್ರಾಫರ್ ಮತ್ತು ಸಹಾಯಕ ಫೋಟೋಗ್ರಾಫರುಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ಚೀಫ್ ಫೋಟೋಗ್ರಾಫರಿಗೆ 4.5 ಲಕ್ಷ ರೂ ಸಂಬಳದ ಅವಕಾಶವಿದ್ದರೆ ಇತರರಿಗೆ 2.5 ಲಕ್ಷ ರೂ ಸಂಬಳ ನೀಡುತ್ತಾರೆ ಎಂದು ದಂಪತಿಯು ದೂರುದಾರ ಅರವಿಂದ್ ಅವರನ್ನು ಪುಸಲಾಯಿಸಿದ್ದರು. ಅದರಲ್ಲಿ ಅರವಿಂದರನ್ನು ಚೀಪ್ ಫೋಟೋಗ್ರಾಫರ್ ಹುದ್ದೆಗೆ 4.5 ಲಕ್ಷ ರೂ ಸಂಬಳದಲ್ಲಿ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆ ಮಾಡಿದ್ದರು.

ಅದರಂತೆ ಚೀಪ್ ಫೋಟೋಗ್ರಾಫರ್ ನೇಮಕಕ್ಕೆ ತಲಾ 75 ಸಾವಿರ ರೂ ಮತ್ತು ಸಹಾಯಕ ಫೋಟೋಗ್ರಾಫರ್ ಹುದ್ದೆಗೆ 30 ಸಾವಿರ ರೂ. ಮೊತ್ತವನ್ನು ಅನೇಕ ಜನರಿಂದ ವಸೂಲಿ ಮಾಡಿದ್ದರು. ಆದರೆ ಎಷ್ಟು ತಿಂಗಳಾದರೂ ಉದ್ಯೋಗಾವಕಾಶ ಪ್ರಾಪ್ತಿಯಾಗಲಿಲ್ಲ. ಆಗ ಅರವಿಂದ್ ಅವರಿಗೆ ತಾವೆಲ್ಲಾ ವಂಚನೆಗೊಳಗಾಗಿರುವುದು ಅರಿವಾಗತೊಡಗಿದೆ. ತಡಮಾಡದೆ ಕೋರ್ಟ್ ಮೆಟ್ಟಿಲೇರಿದರು.

ಬಂಧಿತ ದಂಪತಿಗೆ ಇದೇ ಮೊದಲ ಅಪರಾಧ ಪ್ರಕರಣವಲ್ಲ. ಈ ಹಿಂದೆ ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿಯೂ ಇವರು ಭಾಗಿಯಾಗಿದ್ದರು. ನಕಲಿ ನೋಟು ಪ್ರಕರಣವೂ ಇವರ ವಿರುದ್ಧ ದಾಖಲಾಗಿದೆ.ತೀರಾ ಇತ್ತೀಚೆಗೆ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಉಳಿದುಕೊಂಡಿದ್ದ ದಂಪತಿ 2 ಲಕ್ಷ ರೂ ಬಿಲ್ ಆಗುತ್ತಿದ್ದಂತೆ ಅದನ್ನು ಪಾವತಿಸದೆ ಪರಾರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+