• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಣ್ಣ ಬಣ್ಣದ ವಿದ್ಯುತ್ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಮಂಗಳೂರು

|

ಮಂಗಳೂರು, ಅಕ್ಟೋಬರ್. 17: ದಸರಾ ಬಂತೆಂದರೆ ಮಂಗಳೂರು ನಗರದಲ್ಲಿ ಎಲ್ಲಿ ನೋಡಿದರೂ ಬೆಳಕಿನ ಚಿತ್ತಾರ. ನಗರದ ರಸ್ತೆ ಬದಿಯಲೆಲ್ಲಾ ವಿದ್ಯುತ್ ದೀಪಗಳ ರಂಗು ಮೂಡುತ್ತದೆ. ಸುಮಾರು 9 ಕಿಲೋ ಮೀಟರ್‌ ಉದ್ದಕ್ಕೆ ಬರೋಬ್ಬರಿ 22 ಲಕ್ಷ ಬಲ್ಬ್‌ಗಳು ಏಕ ಕಾಲಕ್ಕೆ ಪ್ರಕಾಶಮಾನವಾಗಿ ಬೆಳಗುತ್ತಿರುತ್ತವೆ.

ಮೈಸೂರು ದಸರಾ - ವಿಶೇಷ ಪುರವಣಿ

ರಾತ್ರಿಯ ಹೊತ್ತು ಕಣ್ಣು ಕೋರೈಸುವ ವಿದ್ಯುತ್ ದೀಪದ ಬೆಳಕಿನಲ್ಲಿ ನಗರದ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಸೊಬಗನ್ನು ಸವಿಯಲು ದಸರಾ ಸಂದರ್ಭ ಕಡಲನಗರಿ ಮಂಗಳೂರಿಗೆ ದೇಶ- ವಿದೇಶಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

ಇತ್ತೀಚೆಗೆ ಮಂಗಳೂರು ದಸರಾ ಕೂಡ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಪಡೆಯುತ್ತಿದ್ದು, ದಸರಾ ಇಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ಪ್ರಮುಖ ಕಾರಣ ಇಲ್ಲಿನ ವಿದ್ಯುತ್ ದೀಪಗಳ ವರ್ಣಮಯ ಶೃಂಗಾರ.

ನೋಡ ಬನ್ನಿ ನವದುರ್ಗೆಯರ ನಮಿಸುವ ಮಂಗಳೂರು ದಸರಾ

ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ನಗರದ ಸುಮಾರು 9 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಶ್ರೀ ಕ್ಷೇತ್ರದ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮುಂದೆ ಓದಿ...

 22 ಲಕ್ಷ ಬಲ್ಬ್‌ಗಳ ಬಳಕೆ

22 ಲಕ್ಷ ಬಲ್ಬ್‌ಗಳ ಬಳಕೆ

ಈ ಬಾರಿಯ ದಸರಾಕ್ಕೆ 22 ಲಕ್ಷ ಬಲ್ಬ್‌ಗಳನ್ನು ಶೃಂಗಾರಕ್ಕಾಗಿ ಬಳಸಲಾಗಿದೆ. ಕಳೆದ ಬಾರಿಗಿಂತ 5 ಲಕ್ಷ ಬಲ್ಬ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮಾರ್ಗದ ಇಕ್ಕೆಲಗಳಲ್ಲಿರುವ ಕಟ್ಟಡ, ಅಂಗಡಿ-ಮುಂಗಟ್ಟುಗಳು ಈ ವೈಭವಕ್ಕೆ ಮೆರುಗು ನೀಡಲು ವಿದ್ಯುತ್ ದೀಪಗಳಿಂದ ಅಲಂಕಾರಗೊಳ್ಳುತ್ತಿವೆ.

 ಮಧುವಣಗಿತ್ತಿಯಂತೆ ಅಲಂಕಾರ

ಮಧುವಣಗಿತ್ತಿಯಂತೆ ಅಲಂಕಾರ

ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 9 ದಿನಗಳ ಕಾಲ ಸಂಜೆ 6 ಗಂಟೆಯಾಗುತ್ತಿದ್ದಂತೆ ಕಡಲತಡಿಯ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಸದಾ ಜನಜಂಗುಳಿ ವಾಹನಗಳಿಂದ ತುಂಬಿರುವ ನಗರದ ರಸ್ತೆಗಳೆಲ್ಲಾ ಈ ಸಂದರ್ಭದಲ್ಲಿ ಬೆಳಕಿನ ಲತೆಗಳಿಂದ ಮಧುವಣಗಿತ್ತಿಯಂತೆ ಅಲಂಕೃತಗೊಳ್ಳುತ್ತವೆ.

ನವರಾತ್ರಿ ಆರಂಭವಾಗುತ್ತಿದ್ದಂತೆ ತುಳುನಾಡಲ್ಲಿ ಪಿಲಿಗಳ ದರ್ಬಾರ್ ಶುರು

 ಬೆಳಕಿನ ಸಂಯೋಜನೆ

ಬೆಳಕಿನ ಸಂಯೋಜನೆ

ದೇಶದ ಬೇರೆಲ್ಲೂ ಇಷ್ಟು ಪ್ರಮಾಣದಲ್ಲಿ ಬೆಳಕಿನ ಸಂಯೋಜನೆ ಕಾಣಸಿಗದು. ಸರ್ಕಾರದ ಅಥವಾ ಇನ್ಯಾವುದೇ ಅನುದಾನ ಇಲ್ಲದೆ ಶ್ರೀ ಕ್ಷೇತ್ರ ಕುದ್ರೋಳಿಯ ವತಿಯಿಂದಲೇ ಈ ಬೆಳಕಿನ ಸಂಯೋಜನೆಯನ್ನು ಮಾಡಲಾಗುವುದು ಇಲ್ಲಿನ ವಿಶೇಷತೆ.

 ನವದುರ್ಗೆಯರ ದರ್ಶನ

ನವದುರ್ಗೆಯರ ದರ್ಶನ

ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ನವದುರ್ಗೆಯರ ಮೂರ್ತಿಗಳು ವಿಶೇಷ ಮೆರಗು ನೀಡುತ್ತಿವೆ. ಒಟ್ಟಿನಲ್ಲಿ ಮಂಗಳೂರು ದಸರಾದ ವಿಜೃಂಭಣೆ ವಿಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಕುದ್ರೋಳಿ ದೇವಾಲಯದಲ್ಲಿ ನವದುರ್ಗೆಯರ ದರ್ಶನ ಪಡೆಯುವುದೇ ಕಣ್ಣಿಗೆ ಹಬ್ಬವಾಗಿದೆ.

ಶತಮಾನಗಳ ಇತಿಹಾಸವಿರುವ ಮಡಿಕೇರಿ ದಸರಾ ಇತಿಹಾಸ ನಿಮಗೆಷ್ಟು ಗೊತ್ತು ?

English summary
Managluru Dasara 2018: Mangalore has been decorated with 22 lakh bulbs. Tourists are coming in large numbers to see this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X