ಮುಸ್ಲಿಂ ಯುವತಿ ಮನೆಯಲ್ಲಿದ್ದ ಹಿಂದೂ ಯುವಕನಿಗೆ ಥಳಿತ
ಮಂಗಳೂರು, ಜೂ. 13: ಮುಸ್ಲಿಂ ಯುವತಿಯ ಮನೆಯಲ್ಲಿದ್ದ ಹಿಂದೂ ಯುವಕನೊಬ್ಬನಿಗೆ 13 ಯುವಕರ ತಂಡವೊಂದು ಥಳಿಸಿದೆ. ಥಳಿಸಿದ್ದು ಮಾತ್ರವಲ್ಲದೇ ಯುವಕರು ಥಳಿಸುವ ವಿಡಿಯೋ ಫೋಟೋವನ್ನು ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಶೇರ್ ಮಾಡಿದ್ದಾರೆ.
ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಈ ಮಂಗಳವಾರ ಈ ಘಟನೆ ನಡೆದಿದ್ದು, ಬೈಲೂರು ನಿವಾಸಿ ಸುಧಿರ್ ರಾಣೆ(29) ಥಳಿತಕ್ಕೊಳಗಾದವರು. ಕೈ ಮತ್ತು ಮುಖಕ್ಕೆ ಗಾಯ ಮಾಡಿದ್ದು ತಲೆ ಕೂದಲನ್ನು ತೆಗೆದು ಕ್ರೂರವಾಗಿ ಹಿಂಸೆ ಮಾಡಿದ್ದಾರೆ.
ಕಾರ್ಕಳ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಜನರನ್ನು ಬುಧವಾರ ಬಂಧಿಸಿದ್ದಾರೆ. ಬಂಗ್ಲೆಗುಡ್ಡೆ ನಿವಾಸಿಗಳಾದ ಆಸಿಫ್,ಮಕ್ಬಲ್, ಕಿಶೋರ್, ಅತ್ಪಾಫ್, ದಾವುದ್ ಮತ್ತು ಇಬ್ರಾಹಿಂನ್ನು ಬಂಧಿಸಿದ್ದು ಆರು ಜನ ತಲೆಮರೆಸಿಕೊಂಡಿದ್ದಾರೆ.[ಮಂಗಳೂರು : ಕಣ್ಣೂರು ಮನೆ ಕುಸಿತ, ಇಬ್ಬರಿಗೆ ಗಾಯ]

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 307 (ಕೊಲೆಗೆ ಯತ್ನ), ಐಪಿಸಿ ಸೆಕ್ಷನ್ 395(ಡಕಾಯಿತಿ) ಅಡಿಯಲ್ಲಿ ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕೃತ್ಯದ ಹಿಂದೆ ಮುಸ್ಲಿಂ ಯುವತಿಯ ಪಾತ್ರ ಇದೆ ಎನ್ನುವ ಶಂಕೆಯಿದ್ದು ಅವಳ ವಿರುದ್ಧವೂ ಪ್ರಕರಣ ದಾಖಲಿದ್ದಾರೆ.
ಸುಧೀರ್ ರಾಣೆ ನಿರುದ್ಯೋಗಿ ಯುವಕನಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.












Click it and Unblock the Notifications