ಅನಂತ್‌ ಕುಮಾರ್ ಬಗ್ಗೆ ಕೀಳು ಪೋಸ್ಟ್: ಫೇಸ್‌ಬುಕ್‌ ಪೇಜ್‌ ಮೇಲೆ ದೂರು

ಮಂಗಳೂರು, ನವೆಂಬರ್ 12: ಇಂದು ನಿಧನರಾಗಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಹಾಕಿದ್ದ ಫೇಸ್‌ಬುಕ್ ಪೇಜ್‌ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

'ಮಂಗಳೂರು ಮುಸ್ಲಿಮ್ಸ್‌' ಎನ್ನುವ ಫೇಸ್‌ಬುಕ್ ಪೇಜ್‌, ಅನಂತ್‌ ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಅನ್ನು ತನ್ನ ಖಾತೆಯಲ್ಲಿ ಪ್ರಕಟಿಸಿತ್ತು. ಇದು ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ದಕ್ಷಿಣದ ಪಾಂಡೇಶ್ವರ ಠಾಣೆ ಪೊಲೀಸರು 'ಮಂಗಳೂರು ಮುಸ್ಲಿಮ್ಸ್‌' ಫೇಸ್‌ಬುಕ್ ಪೇಜ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Low standerd post about Ananth Kumar police registerd case on facebook accout

ಇದೇ ಫೇಸ್‌ಬುಕ್ ಪೇಜ್‌ ಮೋದಿ, ಯೋಗಿ ಆದಿತ್ಯನಾಥ ಇನ್ನೂ ಕೆಲವರ ಸಾವನ್ನು ಕೋರಿ ಪೋಸ್ಟ್‌ ಮಾಡಿತ್ತು. ಅಷ್ಟೆ ಅಲ್ಲದೆ, ಕಮೆಂಟ್‌ಗಳಲ್ಲೂ ಸಹ ಕೀಳು ಭಾಷೆಯನ್ನು ಬಳಸಿತ್ತು.

ಮಂಗಳೂರು ಮುಸ್ಲಿಂ ಈ ಮುಂಚೆ ಸಹ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕಿ ಸುದ್ದಿಯಾಗಿತ್ತು. ಈ ಬಾರಿಯ ಅನಂತ್‌ ಕುಮಾರ್ ಬಗೆಗಿನ ಪೋಸ್ಟ್‌ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು, ಮುಸ್ಲಿಂ, ಹಿಂದೂ ಎಲ್ಲರೂ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+