ಮಂಗಳೂರು : ನಂತೂರು ವೃತ್ತದಲ್ಲಿ ಉರುಳಿ ಬಿದ್ದ ಲಾರಿ
ಮಂಗಳೂರು, ಜೂ. 13 : ಮಂಗಳೂರು ನಗರದ ನಂತೂರ್ ಸರ್ಕಲ್‌ನಲ್ಲಿ ಲಾರಿಯೊಂದು ಶುಕ್ರವಾರ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಸರ್ಕಲ್ ನಲ್ಲಿ ಕೋಕಾಕೋಲಾ ಸಾಗಿಸುತ್ತಿದ್ದ ಲಾರಿಯೊಂದು ಉರುಳಿಬಿದ್ದಿತ್ತು.
ಶುಕ್ರವಾರ ಮುಂಜಾನೆ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹೊಡೆದು ಉರುಳಿ ಬಿದ್ದಿದೆ. ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಕದ್ರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಪಘಾತದಿಂದಾಗಿ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವೇಗವಾಗಿ ಬರುತ್ತಿದ್ದ ಲಾರಿ ಚಾಲಕ ನಿಯಂತ್ರಣ ತಪ್ಪಿದ್ದು ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಚಿತ್ರಗಳಲ್ಲಿ ನೋಡಿ ಉರುಳಿ ಬಿದ್ದ ಲಾರಿ

ಸರ್ಕಲ್ ನಲ್ಲಿ ಉರುಳಿ ಬಿದ್ದ ಲಾರಿ
ಮಂಗಳೂರು ನಗರದ ನಂತೂರ್ ಸರ್ಕಲ್‌ನಲ್ಲಿ ಲಾರಿಯೊಂದು ಶುಕ್ರವಾರ ಮುಂಜಾಣೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ವೇಗದ ಚಾಲನೆಯೇ ಕಾರಣ
ವೇಗವಾಗಿ ಬರುತ್ತಿದ್ದ ಲಾರಿ ನಂತೂರ್ ಸರ್ಕಲ್ ಬಳಿ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಉರುಳಿ ಬಿದ್ದಿದೆ.

ಅಪಘಾತದಲ್ಲಿ ಇಬ್ಬರಿಗೆ ಗಾಯ
ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್ ಇದ್ದರು. ಇಬ್ಬರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ.

ಸಂಚಾರಕ್ಕೆ ತೊಂದರೆ
ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಂತೂರ್ ಸರ್ಕಲ್ ನಲ್ಲಿ ಲಾರಿ ಉರುಳಿಬಿದಿದ್ದರಿಂದ ಸಂಚಾರಕ್ಕೆ ಕೆಲವು ಕಾಲ ಅಡಚಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪೊಲೀಸ್ ನಿಯಂತ್ರಣ ಕೊಠಡಿ ಜಖಂ
ಲಾರಿಯು ನಂತೂರ್ ಸರ್ಕಲ್ ಸಂಚಾರಿ ಪೊಲೀಸರು ನಿಯಂತ್ರಣ ಕೊಠಡಿ ಮೇಲೆ ಉರುಳಿ ಬಿದ್ದಿದ್ದರಿಂದ ನಿಯಂತ್ರಣ ಕೊಠಡಿ ಸಂಪೂರ್ಣವಾಗಿ ಜಖಂಗೊಂಡಿದೆ.

ಲಾರಿ ಸಂಪೂರ್ಣ ಜಖಂ
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿ ಉರುಳಿಬಿದ್ದಿದ್ದರಿಂದ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಕಳೆದವಾರವೂ ಅಪಘಾತ ನಡೆದಿತ್ತು
ನಂತೂರು ಸರ್ಕಲ್ ನಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಕಳೆದ ವಾರ ಇದೇ ಸ್ಥಳದಲ್ಲಿ ಕೋಕಾಕೋಲಾ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿತ್ತು.












Click it and Unblock the Notifications