ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಫಿಯಾ; ಅಧಿಕಾರಿಗಳ ಮೌನ

ಮಂಗಳೂರು, ನವೆಂಬರ್ 21; ಕರಾವಳಿಯ ಆರ್ಥಿಕತೆಯ ಜೀವನಾಡಿ ಮತ್ಸೋದ್ಯಮ. ಕೇವಲ ಮತ್ಸೋದ್ಯಮದಿಂದ ಸಾವಿರಾರು ಜನ ಜೀವನ ಕಟ್ಟಿಕೊಂಡಿದ್ದಾರೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೂರು ಸಾವಿರರಷ್ಟು ಕಾರ್ಮಿಕರು ಪ್ರತಿನಿತ್ಯ ದುಡಿಯುತ್ತಿದ್ದಾರೆ. ಸಮುದ್ರದಲ್ಲಿ ಮೀನುಗಳು ಹೇರಳವಾಗಿ ಸಿಗುತ್ತಿದ್ದು,ಕಡಲಮಕ್ಕಳ ಜೀವನದ ನೌಕೆಯೂ ಸಾಗುತ್ತಿದೆ.

ಆದರೆ ಕೆಲ ದಂಧೆಕೋರರು ಆಳಸಮುದ್ರದಲ್ಲೂ ಕುಕೃತ್ಯ ಮೆರೆದಿದ್ದು, ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ನಿಷೇಧಿಸಿರುವ ಈ ಲೈಟ್ ಫಿಶಿಂಗ್ ಬೇಟೆಯಿಂದಾಗಿ ಮೀನಿನ ಕ್ಷಾಮ ಎದುರಾಗುವ ಭೀತಿ ಮೀನುಗಾರರಲ್ಲಿದೆ.

ಕೊರೊನಾ ಸಂಕಷ್ಟದ ಲಾಕ್ ಡೌನ್ ಬಳಿಕ ಈಗಷ್ಟೇ ಪೂರ್ಣ ಪ್ರಮಾಣದಲ್ಲಿ ಕಡಲ ಮಕ್ಕಳು ಸಮುದ್ರದತ್ತ ಮುಖ ಮಾಡಿದ್ದಾರೆ. ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿದ್ದು, ಕಡಲಿಗಿಳಿದಿರುವ ಪರ್ಸಿನ್ ಹಾಗೂ ಟ್ರಾಲ್ ಬೋಟ್ ಗಳಿಲ್ಲಿ ತಕ್ಕಮಟ್ಟಿಗೆ ಮೀನು ಲಭ್ಯವಾಗುತ್ತಿದೆ.

ಈ ನಡುವೆ ಅತಿ ಆಸೆಗೆ ಬಿದ್ದಿರುವ ಕೆಲ ಮೀನುಗಾರರು ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಿದೆ . ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುವುದಕ್ಕೆ ಕೇಂದ್ರ ಹಾಗು ರಾಜ್ಯ ಸರಕಾರದ ನಿಷೇಧ ಹೇರಿದೆ. ಲೈಟ್ ಫಿಶಿಂಗ್ ಎಂದರೆ ರಾತ್ರಿ ವೇಳೆ ಬೃಹತ್ ದೀಪಗಳನ್ನು ಬೆಳಗಿಸುವ ಮೂಲಕ ಮೀನುಗಳನ್ನು ಆಕರ್ಷಿಸಿ ಬೃಹತ್ ಬಲೆಯ ಸಹಾಯದಿಂದ ಮೀನುಗಳನ್ನು ಹಿಡಿಯುವುದು.

ಹೀಗೆ ಮಾಡುವುದರಿಂದ ಒಮ್ಮೆಗೆ ಭಾರೀ ಮೀನು ಸಿಗುತ್ತದೆ. ಆದರೆ ದೀರ್ಘಕಾಲದ ಪರಿಣಾಮ ಎದುರಾಗುತ್ತದೆ. ಸಣ್ಣ ಮೀನುಗಳೆಲ್ಲ ಇದರ ಎಡೆಗೆ ಸಿಲುಕಿ ವಿನಾಕಾರಣ ಸಾಯುವುದರಿಂದ ಮೀನಿನ ಕ್ಷಾಮ ಎದುರಾಗುತ್ತದೆ ಎನ್ನುತ್ತಾರೆ ಮೀನುಗಾರರು.

ಸಮುದ್ರದ ನಡುವೆ ಪ್ರಖರವಾದ ಬೆಳಕಿಗೆ ಎಲ್ಲಾ ಮೀನುಗಳು ಒಂದೆಡೆ ಸೇರೋದರಿಂದ ಮೀನಿನ ಸಮೂಹಕ್ಕೆ ಬಲೆ ಹಾಕಿ ಮೀನು ಹಿಡಿಯಲಾಗುತ್ತದೆ. ಹೀಗೆ ಮೀನು ಹಿಡಿಯುವಾಗ ಸಣ್ಣ ಮೀನುಗಳೂ ಸಾಯುತ್ತದೆ. ಹೀಗಾಗಿ ಭವಿಷ್ಯದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತದೆ ಅನ್ನೋದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

Light Fishing Active Officials Silent Fishers Demand For Action

ಕರಾವಳಿ ತಟದಿಂದ ಕೇವಲ 10 ರಿಂದ 20 ನಾಟಿಕಲ್ ಮೈಲ್ ವ್ಯಾಪ್ತಿಯಲ್ಲಿ ಕೆಲವು ಬೃಹತ್ ಟ್ರಾಲ್ ಬೋಟ್‌ಗಳು ಸೇರಿ ಲೈಟ್ ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಿದೆ . ಇತ್ತೀಚೆಗೆ ಕಡಲ ತೀರದಿಂದ ಕೇವಲ 20 ನಾಟಿಕಲ್ ಮೈಲ್ಸ್ ದೂರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್ ಒಂದನ್ನು ಮೀನುಗಾರರು ಪತ್ತೆ ಹಚ್ಚಿದ್ದರು.

ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಅಂತಹ ಮೀನುಗಾರಿಕೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡ ಇದೇ ಮಾತನ್ನು ಹೇಳುತ್ತಾರೆ. ಆದರೆ ಮಂಗಳೂರು, ಉಡುಪಿ, ಕುಂದಾಪುರ, ಕಾರವಾರ ಪ್ರದೇಶದಲ್ಲಿ ಅಲಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ಈ ರೀತಿಯ ಲೈಟ್ ಫಿಶಿಂಗ್ ನಡೆಸುವುದನ್ನು ಪತ್ತೆ ಯಾಗಿದೆ. ತಮಿಳುನಾಡು, ಆಂಧ್ರದ ಮೀನುಗಾರರು ಮಾತ್ರ ವಲ್ಲದೇ ನಮ್ಮ ರಾಜ್ಯದ ಕೆಲ ಮೀನುಗಾರರು ಕದ್ದು ಮುಚ್ಚಿ ಈ ಲೈಟ್ ಫಿಶಿಂಗ್ ಮಾಡುತ್ತಿರುವುದೂ ಕೂಡ ಪತ್ತೆಯಾಗಿದೆ.

ಒಮ್ಮೆಲೇ ಲಾಭ ಬಾಚಿಕೊಳ್ಳಬೇಕು ಎಂಬ ಹಪಾಹಪಿಯಿಂದಾಗಿ ಇಲಾಖೆಯ, ಕರಾವಳಿ ಕಾವಲು ಪಡೆಯ ಮತ್ತು ಕೋಸ್ಟ್ ಗಾರ್ಡ್ ಕಣ್ಣು ತಪ್ಪಿಸಿ, ಕೆಲ ಮೀನುಗಾರರು ಈ ನಿಷೇಧಿತ ಮೀನುಗಾರಿಕೆ ನಡೆಸುತ್ತಿದ್ದಾರೆ. ಸಮುದ್ರ ಮಧ್ಯೆ ಕಣ್ಗಾವಲು ಇಡುವ ಯಾರೂ ಇರುವುದಿಲ್ಲ ಎಂಬ ಅಹಂನಿಂದ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ.

ಆದರೆ ಇಂಥ ಮೀನುಗಾರಿಕೆ ದೂರಗಾಮಿ ಪರಿಣಾಮ ಬೀರುತ್ತದೆ ಎಂಬ ಕಟುಸತ್ಯ ಗೊತ್ತಿದ್ದರೂ ಕ್ಷಣದ ಲಾಭಕ್ಕಾಗಿ ನಿಷೇಧಿತ ಮೀನುಗಾರಿಕೆ ನಡೆಸಲಾಗುತ್ತಿದೆ. ಈ ರೀತಿಯ ಅಕ್ರಮಗಳನ್ನು ತಡೆಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಡಲ ಮಧ್ಯೆ ಮೀನುಗಾರರ ನಡುವೆ ಘರ್ಷಣೆಗೆ ಕಾರಣವಾಗಲಿದೆ. ಹೀಗಾಗಿ ನಿಯಮ ಬಾಹಿರವಾಗಿ ಮೀನುಗಾರಿಕೆ ನಡೆಸುವ ಬೋಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+