ಬೆಳ್ತಂಗಡಿಯಲ್ಲಿ ಆಹಾರ ಅರಸಿ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗನ ರಕ್ಷಣೆ

ಮಂಗಳೂರು, ಜುಲೈ 16: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿಗಟ್ಟಿದ ಪ್ರಸಂಗ ಬೆಳ್ತಂಗಡಿಯಲ್ಲಿ ನಡೆದಿದೆ. ಇಲ್ಲಿಯ ಮಿತ್ತಬಾಗಿಲು ಗ್ರಾಮದಲ್ಲಿ ಈ ಪ್ರಸಂಗ ಬೆಳಕಿಗೆ ಬಂದಿದೆ. ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಕಾಳಿಂಗ ಸರ್ಪಗಳು ಸುತ್ತುವುದು ಸರ್ವೆಸಾಮಾನ್ಯ ಎಂದು ಹೇಳಲಾಗುತ್ತದೆ.

ಆದರೆ ಕಾಳಿಂಗ ಸರ್ಪಗಳು ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬರುವುದು ಅಪರೂಪ. ಇಂತಹ ಭಾರೀ ವಿಷಯುಕ್ತ ಹಾವುಗಳನ್ನು ಕಂಡ ಕೂಡಲೇ ಜನ ಹೆದರುತ್ತಾರೆ. ಆದರೆ, ಮಿತ್ತಬಾಗಿಲು ಗ್ರಾಮದ ಪುನ್ಕೆದಡಿ ಎಂಬಲ್ಲಿ 12 ಅಡಿ ಉದ್ದದ ಭಾರೀ ಕಾಳಿಂಗ ಸರ್ಪವನ್ನು ಕಂಡ ಕೂಡಲೇ ಸ್ಥಳೀಯರು ಭಯ ಪಡಲಿಲ್ಲ.

ಅದಕ್ಕೆ ತೊಂದರೆ ನೀಡಲಿಲ್ಲ ಬದಲಾಗಿ ಲಾಯಿಲಾ ಎಂಬಲ್ಲಿ ಹಾವು ಹಿಡಿಯುವ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.

King Cobra rescued and released in Belthangady

ಈ ಭಾರೀ ಗಾತ್ರದ ಕಾಳಿಂಗನನ್ನು ಚಾಣಾಕ್ಷತನದಿಂದ ಹಿಡಿದ ಸ್ನೇಕ್ ಅಶೋಕ್ ನಂತರ ಅದನ್ನು ಅರಣ್ಯದಲ್ಲಿ ಬಿಟ್ಟಿದ್ದಾರೆ. ಸ್ನೇಕ್ ಅಶೋಕ್ ಈ ಹಿಂದೆ 20ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ಅಯ್ಯೋ ಹಾವು...! ವಿಶ್ವ ಹಾವು ದಿನಕ್ಕೆ ಒಂದಷ್ಟು ವೈರಲ್ ವಿಡಿಯೋ!

King Cobra rescued and released in Belthangady

ಹೀಗಾಗಿ ಇಲ್ಲಿ ಕಂಡುಬಂದ ಹತ್ತು ಅಡಿ ಉದ್ದದ ಕಾಳಿಂಗನ ಹಿಡಿಯುವುದು ಕಷ್ಟವಾಗಲಿಲ್ಲ. ಸ್ನೇಕ್ ಅಶೋಕ್ ಭಾರೀ ಗಾತ್ರದ ಕಾಳಿಂಗನನ್ನು ಹಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+