ಅಯ್ಯೋ ಹಾವು...! ವಿಶ್ವ ಹಾವು ದಿನಕ್ಕೆ ಒಂದಷ್ಟು ವೈರಲ್ ವಿಡಿಯೋ!
Recommended Video

'ಹಾವು ಅನ್ನೋ ಶಬ್ದ ಕೇಳಿದರೇನೇ ನಡುಗುವವರಿದ್ದಾರೆ. ಒಂದು ಹನಿ ವಿಷದ ಮೂಲಕ ಬಲಾಢ್ಯ ಮನುಷ್ಯನನ್ನೂ ಸಾಯಿಸುವ ತಾಕತ್ತಿರುವ ಹಾವುಗಳಂದ್ರೆ ಭಯ ಸಹಜವೇ. ಇಂಥ ಹಾವುಗಳಿಗೂ ಒಂದು ದಿನವಿದೆ. ಆ ದಿನ ಇವತ್ತೇ!
ಹೌದು,, ಪ್ರತಿವರ್ಷ ಜುಲೈ 16 ಅನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಹಾವುಗಳ ಕುರಿತು ಇರುವ ಭಯವನ್ನು, ಭ್ರಮೆಯನ್ನು ಹೋಗಲಾಡಿಸುವ ಮತ್ತು ಹಾವುಗಳ ಸಂತತಿಯನ್ನು ಕಾಪಾಡುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಹಿಂದು ಸಂಪ್ರದಾಯದಲ್ಲಿ ಹಾವನ್ನು ಪೂಜಿಸುವುದಕ್ಕೆಯೇ ಒಂದು ದಿನವನ್ನು ಮೀಸಲಿಡಲಾಗಿದೆ. ನಾಗರ ಪಂಚಮಿ ದಿನ ಹಾವಿಗೆ ಹಾಲೆರೆದು ಪೂಜಿಸಲಾಗುತ್ತದೆ. ಜಗದೀಶ ಈಶ್ವರನಂತೂ ಹಾವಿನ ಮಾಲೆಯನ್ನೇ ತೊಟ್ಟಿದ್ದಾನೆ. ಇಷ್ಟಾದರೂ ಹಾವು ಎಂದರೆ ಭಕ್ತಿ ಮತ್ತು ಅದನ್ನೂ ಮೀರಿದ ಭಯ ಎಂದರೆ ಒಪ್ಪಲೇಬೇಕು!
ವಿಶ್ವ ಹಾವು ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಾವುಗಳ ವಿಡಿಯೋ ಮತ್ತು ಚಿತ್ರಗಳು ಇಲ್ಲಿದೆ.
| Array |
ಅಯ್ಯಪ್ಪಾ, ಬಾತ್ ಟಬ್ಬಿನಲ್ಲಿ ಜೋಡಿ ಹಾವು!
ಬಾತ್ ಟಬ್ಬೊಂದರಲ್ಲಿ ಜೋಡಿ ಹಾವುಗಳು ಹರಿದಾಡುತ್ತಿರುವ ವಿಡಿಯೋವನ್ನು ವೈಟ್ ಲಿಯಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
| Array |
ಇಲ್ನೋಡಿ, ಹಾವಿಂದೇ ಸಂತೆ!
ಲೆಕ್ಕವಿಲ್ಲದಷ್ಟು ಚಿಕ್ಕ-ಪುಟ್ಟ ಹಾವುಗಳು ಕಲ್ಲೊಂದರ ಸಂಧಿನಿಂದ ಹೊರಬರುತ್ತಿರುವ ವಿಡಿಯೋವನ್ನು ವೈಲ್ಡ್ ಸೇಫ್ ಬಿಸಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಿಂಚಂತೆ ತೇಲೋ ಹಳದಿ ಹಾವು!
ನೀರಿನಲ್ಲಿ ಮಿಂಚಂತೆ ತೇಲುವ ಹಾವಿನ ವಿಡಿಯೋವನ್ನು ಜೆನ್ನಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಹಳದಿ ಮೈ ಮೇಲೆ ಕಪ್ಪು ಬಣ್ಣದ ಚುಕ್ಕಿಯನ್ನು ಹೊಂದಿರುವ ಈ ಹಾವು ಈಜುವ ಸ್ಪೀಡ್ ನೋಡಿದರೆ ಎಂಥವರೂ ಅಚ್ಚರಿಪಡಬೇಕು!
|
ಹಾವಿಗೆ ನೀರೆರೆದ ಜನ!
ಹಾವಿಗೆ ಹಾಲೆರೆಯುವುದನ್ನು ಕೇಳಿದ್ದೇವೆ. ಆದರೆ ಬಾಯಾರಿದ ಕಾಳಿಂಗ ಹಾವಿಗೆ ಜನರು ನೀರು ಕುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಸಾಗರ್ ಗಾಯಕ್ವಾಡ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಬ್ಯೂಟಿ ಆಫ್ ಸ್ನೇಕ್ ಡಾಕ್ಯುಮೆಂಟರಿ
ಹಾವಿನ ಡಾಕ್ಯಮೆಂಟರಿಯೊಂದರ ವಿಡಿಯೋವನ್ನು ಹಂಬಾರ್ಯಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ ನೋಡಿ.












Click it and Unblock the Notifications