ರಾಜಕೀಯ ಸ್ನೇಹಿತನ ಆರೋಗ್ಯಕ್ಕಾಗಿ ಕುದ್ರೋಳಿ ದೇವಾಲಯದಲ್ಲಿ ಅಕ್ಷರಸಃ ಕಣ್ಣೀರಿಟ್ಟ ಜನಾರ್ದನ ಪೂಜಾರಿ
ಮಂಗಳೂರು, ಜ 11: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ದೇವಾಲಯ ಮತ್ತು ಚರ್ಚ್ ನಲ್ಲಿ ಅಕ್ಷರಸಃ ಕಣ್ಣೀರಿಟ್ಟ ಮನಮಿಡಿಯುವ ಘಟನೆ ನಡೆದಿದೆ.
Recommended Video
ತಮ್ಮ ಬಹುಕಾಲದ ರಾಜಕೀಯ ಸ್ನೇಹಿತ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಆಸ್ಕರ್ ಫೆರ್ನಾಂಡಿಸ್ ಅನಾರೋಗ್ಯಕ್ಕೆ ಪೀಡಿತರಾಗಿದ್ದಾರೆ ಎನ್ನುವ ಸುದ್ದಿಯನ್ನು ಅರಿತು, ಜನಾರ್ದನ ಪೂಜಾರಿ ಮೊದಲು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಬಂದಿದ್ದಾರೆ.
ರಾಮಮಂದಿರ ಹೇಳಿಕೆಗೆ ಬದ್ದ: ಪೂಜಾರಿ
ಅಲ್ಲಿ ದೇವರಲ್ಲಿ ಆಸ್ಕರ್ ಆರೋಗ್ಯಕ್ಕೆ ಪ್ರಾರ್ಥಿಸುತ್ತಾ ಕಣ್ಣೀರಿಟ್ಟ ಜನಾರ್ದನ ಪೂಜಾರಿ, ನಂತರ ಅಲ್ಲಿಂದ ನಗರದ ರೊಸೊರಿಯೋ ಚರ್ಚ್ ಗೆ ಪ್ರಾರ್ಥನೆಗೆ ತೆರಳಿದ್ದಾರೆ. ಅಲ್ಲಿ, ಆಸ್ಕರ್ ಫೆರ್ನಾಂಡಿಸ್ ಇರುವುದನ್ನು ನೋಡಿ ಪೂಜಾರಿ ಶಾಕ್ ಆಗಿದ್ದಾರೆ.

ಆಸ್ಕರ್ ಅವರನ್ನು ನೋಡುತ್ತಲೇ ಅವರನ್ನು ಆಲಂಗಿಸಿಕೊಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರಿಟ್ಟಿದ್ದಾರೆ. ನಂತರ, ಇಬ್ಬರೂ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಆಸ್ಕರ್ ಅವರ ಆರೋಗ್ಯ ತೀರಾ ಹದೆಗೆಟ್ಟಿದೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ್ದರಿಂದ, ತರಾತುರಿಯಲ್ಲಿ ಜನಾರ್ದನ ಪೂಜಾರಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು.
ಪೂಜಾರಿಯವರೇ ಅನಾರೋಗ್ಯದಿಂದ ಬಳಲುತ್ತಿದ್ದು, ಎದ್ದು ಸರಿಯಾಗಿ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಚರ್ಚ್ ನಲ್ಲಿ ಪೂಜಾರಿ ಕಣ್ಣೀರಿಟ್ಟಾಗ ಆಸ್ಕರ್ ಅವರೂ ಭಾವೋದ್ವೇಗಕ್ಕೆ ಒಳಗಾದರು.












Click it and Unblock the Notifications