ಚಿತ್ರಗಳು : ಮಂಗಳೂರಿನ ಪಿಲಿಕುಳದಲ್ಲಿ ಮೀನು ಮೇಳ

ಮಂಗಳೂರು, ಮೇ 18 : ಬಲೆಯಲ್ಲಿ ಭಾರೀ ಗಾತ್ರದ ಮೀನುಗಳ ಬೇಟೆ, ಗಾಳದ ಮೂಲಕ ವಿವಿಧ ರೀತಿಯ ಮೀನುಗಳನ್ನು ಹಿಡಿದ ಜನರು, ಮೀನು ಮೇಳ ವೀಕ್ಷಿಸಲು ಬಂದ ಜನಸಾರ, ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ನಡೆದ ಮೀನು ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ಪಿಲಿಕುಳ ಮತ್ಸ್ಯೋತ್ಸವ ನಡೆಯಿತು. ಪಿಲಿಕುಳ ನಿಸರ್ಗಧಾಮ ಸೊಸೈಟಿ, ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕೆ ಕಾಲೇಜು ಜಂಟಿಯಾಗಿ ಇದನ್ನು ಆಯೋಜಿಸಿತ್ತು. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

ಬಲೆಯ ಮೂಲಕ ಹಿಡಿದ ಮೀನನ್ನು ಮೇಳದಲ್ಲಿಯೇ ಮಾರಾಟ ಮಾಡಲಾಯಿತು. 7.5 ಕೆ.ಜಿ. ತೂಕದ ಮೀನು ಒಂದು ಸಾವಿರ ರೂ.ಗೆ, ನಂತರ ವಿವಿಧ ಗಾತ್ರದ ಮೀನು ಬೇರೆ-ಬೇರೆ ದರಕ್ಕೆ ಮಾರಾಟವಾದವು. ಅಂದಾಜು 600 ಕೆ.ಜಿ. ಮೀನು ಮಾರಾಟವಾಗಿದ್ದು, 30 ಸಾವಿರ ರೂ. ಆದಾಯ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಪಾಲಿಕೆ ಉಪ ಆಯುಕ್ತ ರಾಜು ಮೊಗವೀರ, ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮಾ, ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಪ್ರಸಾದ್ ಮುಂತಾದವರು ಮೇಳದಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ನೋಡಿ ಮೀನು ಮೇಳ

ಪಿಲಿಕುಳದಲ್ಲಿ ನಿಸರ್ಗಧಾಮದಲ್ಲಿ ಮೀನು ಮೇಳ

ಪಿಲಿಕುಳದಲ್ಲಿ ನಿಸರ್ಗಧಾಮದಲ್ಲಿ ಮೀನು ಮೇಳ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ಮತ್ಸ್ಯೋತ್ಸವ ನಡೆಯಿತು. ಪಿಲಿಕುಳ ನಿಸರ್ಗಧಾಮ ಸೊಸೈಟಿ, ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕೆ ಕಾಲೇಜು ಜಂಟಿಯಾಗಿ ಇದನ್ನು ಆಯೋಜಿಸಿದ್ದವು.

ಮೀನು ಹಿಡಿದ ಮಾಜಿ ಮೇಯರ್

ಮೀನು ಹಿಡಿದ ಮಾಜಿ ಮೇಯರ್

ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ದಿವಾಕರ್ ಗಾಳ ಹಾಕುವ ಮೂಲಕ ಮೊದಲು ಪುಟ್ಟ ಮೀನು ಹಿಡಿದು ಸಂಭ್ರಮಿಸಿದರು. ಹೆಚ್ಚಿನವರು ಹಲವು ಹೊತ್ತು ಗಾಳ ಹಾಕಿದರೂ ಮೀನು ಸಿಗಲಿಲ್ಲ. ಕೆರೆಯಲ್ಲಿ ಬಲೆ ಹಾಕಿ ಇಟ್ಟಿದ್ದ ಕಾರಣ, ಮೀನು ಬದಿಗೆ ಬಾರದೆ, ಗಾಳಕ್ಕೆ ಸಿಗಲಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

6 ಕ್ವಿಂಟಾಲ್ ಮೀನು ಹಿಡಿಯಲಾಗಿತ್ತು

6 ಕ್ವಿಂಟಾಲ್ ಮೀನು ಹಿಡಿಯಲಾಗಿತ್ತು

ಶನಿವಾರ ರಾತ್ರಿಯೇ ಕೆರೆಯಲ್ಲಿ ಬಲೆ ಹರಡಿಟ್ಟು, ಭಾನುವಾರ ಬೆಳಗ್ಗೆ ಸುಮಾರು ಆರು ಕ್ವಿಂಟಾಲ್‌ನಷ್ಟು ಕಾಟ್ಲಾ, ರೋಹು ಮೀನು ಬಲೆಯಲ್ಲಿ ಹಿಡಿಯಲಾಗಿತ್ತು. ಮಹಶೀರ್, ಸಾಮಾನ್ಯ ಗೆಂಡೆ ಮೀನುಗಳು ಗಾಳಕ್ಕೆ ಸಿಕ್ಕಿದವು. ಗಾಳ ಹಾಕಲು ಮೂಲ್ಕಿ, ಕಾಪು, ಉಡುಪಿ, ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ ಮುಂತಾದ ಸ್ಥಳದಿಂದ ಜನರು ಆಗಮಿಸಿದ್ದರು.

ಸಮುದ್ರ ಮೀನಿಗೆ ಡಿಮ್ಯಾಂಡ್

ಸಮುದ್ರ ಮೀನಿಗೆ ಡಿಮ್ಯಾಂಡ್

ಮೀನುಗಾರಿಕೆ ಅಭಿವೃದ್ಧಿ ನಿಗಮದ 'ಮತ್ಸ್ಯದರ್ಶಿನಿ' ಸ್ಟಾಲ್‌ನಲ್ಲಿ 1.17 ಲಕ್ಷ ರೂ. ಮೊತ್ತದ 800 ಕೆ.ಜಿ.ಗಿಂತ ಹೆಚ್ಚು ಮೊತ್ತದ ಮೀನು ಮಾರಾಟ ಆಯಿತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ ಹೇಳಿದ್ದಾರೆ. ಅಂಜಲ್, ಬಂಗುಡೆ, ಸಿಗಡಿ, ಏಡಿ, ಬಟರ್ ಫಿಶ್ (ಮೆಲ್ಗ್), ಮದ್ಮಲ್‌ಗೆ ಗರಿಷ್ಠ ಬೇಡಿಕೆ ಇತ್ತು.

ಹೊಟ್ಟೆ ತುಂಬಿಸಿದ ಫ್ರೈ, ಕಬಾಬ್

ಹೊಟ್ಟೆ ತುಂಬಿಸಿದ ಫ್ರೈ, ಕಬಾಬ್

ಬಲೆಯಲ್ಲಿ ಹಿಡಿದ ಮೀನುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಯಿತು. ಮೊದಲ ಏಲಂನಲ್ಲಿ 7.5 ಕೆ.ಜಿ. ತೂಕದ ಮೀನು ಒಂದು ಸಾವಿರ ರೂ., ನಂತರ ವಿವಿಧ ಗಾತ್ರದ ಮೀನು ಬೇರೆ ಬೇರೆ ದರಕ್ಕೆ ಮಾರಾಟವಾಯಿತು. ಅಂದಾಜು 600 ಕೆ.ಜಿ. ಮೀನು ಮಾರಾಟವಾಗಿದ್ದು, 30 ಸಾವಿರ ರೂ. ಆದಾಯ ಬಂತು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ. ತಾಜಾ ಮೀನುಗಳ ಫ್ರೈ, ಫಿಶ್ ಮಸಾಲ, ಫಿಶ್ ಕಬಾಬ್ ಹಾಗೂ ಇನ್ನಿತರ ಖಾದ್ಯಗಳು ಜನರ ಹೊಟ್ಟೆ ತುಂಬಿಸಿದವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+